ಚೆಂಗಟಾ, ಚಂದನಕೇರಾ ಗ್ರಾಮದ ನೂರಾರು ಕಾರ್ಯಕರ್ತರಿಗೆ ಸ್ವಾಗತ| ಕಾಂಗ್ರೆಸ್ ಇದೀಗ ಬಲಿಷ್ಠ| ಬಿಜೆಪಿ ಆಡಳಿತದಿಂದಾಗಿ ಬೇಸರಪಡುತ್ತಿರುವ ಜನರು| ಅನ್ಯ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ|
ಚಿಂಚೋಳಿ(ಮಾ.03): ಬರಲಿರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಮಹೆಮೂದ್ ಪಟೇಲ್ ಸಾಸರಗಾಂವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ತಾಲೂಕಿನ ಚಂದನಕೇರಾ-ಚೇಂಗಟಾ ಗ್ರಾಮಗಳಲ್ಲಿ ಕಾಂಗ್ರೆಸ್ ಸಂಘಟನೆ ಸಭೆ ಮತ್ತು ವಿವಿಧ ಪಕ್ಷಗಳ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದನೆಯಿಲ್ಲ. ಅತಿವೃಷ್ಟಿಯಿಂದ ಹಾಳಾಗಿರುವ ರೈತರ ಬೆಳೆಗಳಿಗೆ ಇನ್ನೂ ಪರಿಹಾರ ಬಂದಿಲ್ಲ. ಹಳ್ಳಕೊಳ್ಳ ನದಿ ನೀರಿನ ಪ್ರವಾಹದಿಂದ ಅನೇಕ ಜನರ ಬದುಕು ಹಾಳಾಗಿದೆ. ಜನರ ಕಷ್ಟಗಳಿಗೆ ಸ್ಪಂದನೆ ಮಾಡಿಲ್ಲ. ಬಡವರ ಸಂಕಷ್ಟಗಳನ್ನು ಬಿಜೆಪಿ ನೋಡಲು ಆಗುತ್ತಿಲ್ಲ. ತಾಲೂಕಿನಲ್ಲಿ ಬಿಜೆಪಿ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದತ್ತ ಜನರ ಒಲವು ಹೆಚ್ಚುತ್ತಿದೆ. ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.
'ಹಿಂದೂ ಸಂಘಟನೆಗಳು, ಪ್ರಧಾನಿ ನನ್ನನ್ನು ಸೋಲಿಸಲೆಂದೇ ಟಾರ್ಗೆಟ್ ಮಾಡಿದ್ರು'
ಜಿಪಂ ಮಾಜಿ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ ಮಾತನಾಡಿ, ಕಾಂಗ್ರೆಸ್ ಇದೀಗ ಬಲಿಷ್ಠವಾಗುತ್ತಿದೆ. ಬಿಜೆಪಿ ಆಡಳಿತದಿಂದಾಗಿ ಜನರು ಬೇಸರಪಡುತ್ತಿದ್ದಾರೆ. ಅನ್ಯ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಸುಭಾಶ ರಾಠೋಡ, ಬಸವರಾಜ ಮಲಿ, ಅಬ್ದುಲ್ ಬಾಸೀತ, ಕುಪೇಂದ್ರ ಫತ್ತೆಪೂರ ಗಣಪತರಾವ ಮಾತನಾಡಿದರು. ಚೆಂಗಟಾ ಮತ್ತು ಚಂದನಕೇರಾ ಗ್ರಾಮದ ಬಿಜೆಪಿ ಮತ್ತು ಜೆಡಿಎಸ್ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡಯಾದವರಿಗೆ ಹೂಮಾಲೆ ಹಾಕಿ ಸನ್ಮಾನಿಸಿದರು.