ಓರ್ವ ಜೆಡಿಎಸ್, 3 ಪಕ್ಷೇತರ ಮುಖಂಡರು ಬಿಜೆಪಿಯತ್ತ : ಕಮಲಕ್ಕೆ ಬಂಪರ್

By Kannadaprabha NewsFirst Published Nov 3, 2020, 10:55 AM IST
Highlights

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಪಕ್ಷಗಳು ತಮ್ಮದೇ ಗೆಲುವಿಗಾಗಿ ಕಾರ್ಯ ನಿರ್ವಹಿಸುತ್ತಿದ್ದು ಇದೀಗ ಬಿಜೆಪಿಗೆ ಅದೃಷ್ಟ ಒಲಿದಂತಾಗಿದೆ. 

 ನಂಜನಗೂಡು (ನ.03):  ನಂಜನಗೂಡು ನಗರಸಭೆಯ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಚ್‌.ಎಸ್‌. ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ನಾಗಮಣಿ ಶಂಕರಪ್ಪ ಆಯ್ಕೆಯಾದರು.

31 ಸದಸ್ಯರನ್ನು ಒಳಗೊಂಡ ನಂಜನಗೂಡು ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿ 15 ಸ್ಥಾನ, ಕಾಂಗ್ರೆಸ್‌ 10 ಸ್ಥಾನ, ಜೆಡಿಎಸ್‌ 3, ಪಕ್ಷೇತರರು 3 ಸ್ಥಾನಗಳನ್ನು ಪಡೆದಿದ್ದರು.

ಜೆಡಿಎಸ್ ಪಕ್ಷ ತೊರೆಯಲು ನಿರ್ಧರಿಸಿದ ಹಿರಿಯ ಮುಖಂಡ : ಶೀಘ್ರ ಗುಡ್ ಬೈ ...

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ 24ನೇ ವಾರ್ಡ್‌ನ ಎಚ್‌.ಎಸ್‌. ಮಹದೇವಸ್ವಾಮಿ, ಕಾಂಗ್ರೆಸ್‌ನಿಂದ 16ನೇ ವಾರ್ಡ್‌ನ ಸದಸ್ಯ ಶ್ರೀಕಂಠಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ 31ನೇ ವಾರ್ಡ್‌ನ ನಾಗಮಣಿ ಶಂಕರಪ್ಪ ಕಾಂಗ್ರೆಸ್‌ನಿಂದ 11ನೇ ವಾರ್ಡ್‌ನ ಶ್ವೇತ ಲಕ್ಷ್ಮೇ ನಾಮಪತ್ರ ಸಲ್ಲಿಸಿದ್ದರು.

15 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಪರ ಮೂವರು ಪಕ್ಷೇತರರರಾದ ಯೋಗೀಶ್‌, ಎನ್‌.ಎಸ್‌. ಯೋಗೀಶ್‌, ಮಂಗಳಮ್ಮ ಹಾಗೂ ಜೆಡಿಎಸ್‌ ಗಿರೀಶ್‌ಬಾಬು ಮತಚಲಾಯಿಸಿದರು. ಸಂಸದ ವಿ. ಶ್ರೀನಿವಾಸಪ್ರಸಾದ್‌, ಶಾಸಕ ಬಿ. ಹರ್ಷವರ್ಧನ್‌ ಅವರ ಮತ ಸೇರಿದಂತೆ ಒಟ್ಟು 21 ಮತಗಳನ್ನು ಪಡೆದು ಅಧ್ಯಕ್ಷರಾಗಿ ಎಚ್‌.ಎಸ್‌. ಮಹದೇವಸ್ವಾಮಿ, ಉಪಾಧ್ಯಕ್ಷರಾಗಿ ನಾಗಮಣಿ ಶಂಕರಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ವೆಂಕಟರಾಜು ಘೋಷಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ತಹಸೀಲ್ದಾರ್‌ ಕೆ.ಎಂ. ಮಹೇಶ್‌ಕುಮಾರ್‌, ನಗರಸಭಾ ಆಯುಕ್ತ ಕರಿಬಸವಯ್ಯ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಅಭ್ಯರ್ಥಿ ಶ್ರೀಕಂಠಸ್ವಾಮಿ ಪರ 10 ಮತಗಳು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶ್ವೇತ ಲಕ್ಷ್ಮೇ ಪರ 10 ಮತಗಳು ಬಂದು ಪರಾಭವಗೊಂಡರು. ಮೂರು ಸ್ಥಾನಗಳಲ್ಲಿ ಗೆದ್ದಿದ್ದ ಜೆಡಿಎಸ್‌ನ ಒರ್ವ ಸದಸ್ಯ ಖಾಲಿದ್‌ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ತಟಸ್ಥರಾಗಿ ಉಳಿದರೆ. ಒರ್ವ ಸದಸ್ಯೆ ರೆಹಾನಾಭಾನು ಗೈರು ಹಾಜರಾಗಿದ್ದರು.

ಸಂಸದ ವಿ. ಶ್ರೀನಿವಾಸಪ್ರಸಾದ್‌ ಮಾತನಾಡಿ, ನಾನು ಮತ್ತು ಶಾಸಕ ಬಿ. ಹರ್ಷವರ್ಧನ್‌ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನವನ್ನು ತಂದು ಜನರ ನಿರೀಕ್ಷೆಯಂತೆ ನಗರಸಭೆಯ ಅಭಿವೃದ್ದಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಡಿವೈಎಸ್ಪಿ ಪ್ರಭಾಕರ್‌ ಸಿಂಧೆ, ಸಿಪಿಐ ಲಕ್ಷ್ಮೇಕಾಂತ ತಳವಾರ್‌, ಎಸ್‌ಐಗಳಾದ ರವಿಕುಮಾರ್‌, ಸತೀಶ್‌, ಜಯಲಕ್ಷ್ಮೇ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್‌್ತ ನಿಯೋಜಿಸಲಾಗಿತ್ತು.

ಬಿಜೆಪಿ ರಾಜ್ಯ ಮುಖಂಡ ಎಸ್‌. ಮಹದೇವಯ್ಯ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ತಾಲೂಕು ಅಧ್ಯಕ್ಷ ಪಿ. ಮಹೇಶ್‌, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯ್ಕ, ಮುಖಂಡರಾದ ಕೃಷ್ಣಪ್ಪಗೌಡ, ಶಂಕರಪ್ಪ, ಬಾಲಚಂದ್ರು, ಎಪಿಎಂಸಿ ಸದಸ್ಯ ಗುರುಸ್ವಾಮಿ, ತಾಪಂ ಸದಸ್ಯ ಮಹದೇವಯ್ಯ ಇದ್ದರು.

click me!