ಬಿಜೆಪಿಯಿಂದ ಮತದಾರರಿಗೆ ಮೂಗ್ಬಟ್, ರಾಡೋ ವಾಚ್, ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಅವರು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಶಾಲು ಹಾಕ್ಕೊಂಡರೂ ಹಣ ನೀಡಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಮಂಡ್ಯ(ನ.24): ಬಿಜೆಪಿಯಿಂದ ಮತದಾರರಿಗೆ ಮೂಗ್ಬಟ್, ರಾಡೋ ವಾಚ್, ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಮಾತನಾಡಿದ ಅವರು, ಮತದಾರರಿಗೆ ಸೀರೆ, ದುಬೈನ ಡ್ಯೂಪ್ಲಿಕೇಟ್ ರಾಡೋ ವಾಚ್, ರೋಲ್ ಗೋಲ್ಡ್ ಮೂಗ್ಬೆಟ್ಟು ಹಂಚಲಾಗುತ್ತಿದೆ. ಅದರಿಂದ ಕೆ.ಆರ್.ಪೇಟೆ ಜನ ಮಾರುಹೋಗಲ್ಲ. ನಾರಾಯಣಗೌಡ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳುತ್ತಾರೆ. ಗಿಮಿಕ್‌ನಿಂದ ರಾಜಕಾರಣ ಮಾಡಲು ಆಗಲ್ಲ. ಒಂದು ಬಿಜೆಪಿ ಶಾಲ್ ಹಾಕಿಸಿಕೊಂಡ್ರೆ ಇಂತಿಷ್ಟು ಹಣ ನೀಡಲಾಗುತ್ತಿದೆ ಎಂಬ ವಿಚಾರ 100% ಸತ್ಯ ಎಂದು ಆರೋಪಿಸಿದ್ದಾರೆ.
ನಾರಾಯಣ ಗೌಡ, ವಿಜಯೇಂದ್ರ ಕುಂಟೆತ್ತುಗಳು ಎಂದ ಎಚ್‌ಡಿಕೆ...
ಯಡಿಯೂರಪ್ಪ ಅವರಿಗೆ ಸೇಲ್ ಆಗಿದ್ದಾರಲ್ಲ..? ಅವರಿಗೆ ದುಡ್ಡು ಬಂದಿದೆಯಲ್ಲ. ಆ ದುಡ್ಡಿನಲ್ಲಿ ಮತದಾರರನ್ನು ಕೊಂಡುಕೊಳ್ಳಬಹುದು ಎಂದುಕೊಂಡಿದ್ದಾರೆ. ಇಲ್ಲಿಯ ಜನ ಯಾವ ರೀತಿ ಬಾಂಬೆಗೆ ಕಳುಹಿಸುತ್ತಾರೆ ನೋಡಿ ಎಂದು ವ್ಯಂಗ್ಯ ಮಾಡಿದ್ದಾರೆ.
ಜನ ನಮಗೆ ಬುದ್ಧಿ ಹೇಳುತ್ತಿದ್ದಾರೆ. ನಾರಾಯಣಗೌಡನಂತಹ ಶಾಸಕನನ್ನು ಕ್ಷೇತ್ರಕ್ಕೆ ತರಬೇಡಿ ಎಂದು ಜನ ನಮಗೆ ಬುದ್ಧಿ ಹೇಳುತ್ತಿದ್ದಾರೆ. ಅದಕ್ಕೆ ನಾವು ಜನರಿಗೆ ಕ್ಷಮೆಯನ್ನು ಕೇಳ್ತಾ ಇದೀವಿ ಎಂದಿದ್ದಾರೆ.
ಕೆ.ಆರ್. ಪೇಟೆಯಲ್ಲಿ ಇತಿಹಾಸ ನಿರ್ಮಿಸಲಿದೆ BJP: ಬಿ. ವೈ. ವಿಜಯೇಂದ್ರ