ಉಪ ಚುನಾವಣೆಯಲ್ಲಿ ಬಿಜೆಪಿಗೊಲಿದ ಭರ್ಜರಿ ಗೆಲುವು : ಹೆಚ್ಚಿದ ಬಲ

By Suvarna News  |  First Published Mar 31, 2021, 11:42 AM IST

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಹೆಚ್ಚಿನ ಸ್ಥಾನ ತನ್ನದಾಗಿಸಿಕೊಂಡಿದೆ. ಶಿಕಾರಿಪುರ ಪುರಸಭೆಯಲ್ಲಿ ತನ್ನ ಸ್ಥಾನ ಬಲ ಹೆಚ್ಚಿಸಿಕೊಂಡಿದೆ. 


ಶಿವಮೊಗ್ಗ (ಮಾ.31): ಶಿಕಾರಿಪುರ ಪುರಸಭೆ  ಮೂರು ವಾರ್ಡ್‌ಗಳ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಎರಡಲ್ಲಿ ಬಿಜೆಪಿ  ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 

ಒಟ್ಟು 23 ಸ್ಥಾನ ಹೊಂದಿರುವ ಶಿಕಾರಿಪುರ ಪುರಸಭೆಯಲ್ಲಿ ಹಿಂದಿನ ಚುನಾವಣೆಯಲ್ಲಿ 8 ಸ್ಥಾನವನ್ನು ಬಿಜೆಪಿ ಪಡೆದುಕೊಂಡಿತ್ತು. ಕಾಂಗ್ರೆಸ್ 12,   ಪಕ್ಷೇತರರು 3 ಸ್ಥಾನ ಪಡೆದುಕೊಂಡಿದ್ದರು. 

Tap to resize

Latest Videos

'ಬೆಳಗಾವಿಯಲ್ಲಿ 2 ಲಕ್ಷ ಅಂತರ ದಿಂದ ಬಿಜೆಪಿ ಜಯ' .

ಇದೀಗ ಮೂರು ಜನ ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಎರಡು ಸ್ಥಾನ ಬಿಜೆಪಿ ಪಡೆದುಕೊಂಡರೆ 10ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ.  

ಈಗ ಎರಡು ಸ್ಥಾನದಲ್ಲಿ ಬಿಜೆಪಿ ಗೆಲವು ಸಾಧಿಸುವ ಮೂಲಕ 10 ಸ್ಥಾನಗಳ ಬಲ ಬಿಜೆಪಿಗೆ ಒಲಿದಂತಾಗಿದೆ. ಮೂವರು ಪಕ್ಷೇತರರ ಬೆಂಬಲ  ಸೇರಿ 13 ಜನ ಸದಸ್ಯರ ಬಲ ಬಿಜೆಪಿ ಬಳಿ ಇದೆ.

click me!