ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ನಳಿನ್ ಅಭಿನಂದನೆಗೆ ಶಾಸಕ, ಸಂಸದೆ ಗೈರು

Published : Sep 11, 2019, 12:17 PM IST
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ನಳಿನ್ ಅಭಿನಂದನೆಗೆ ಶಾಸಕ, ಸಂಸದೆ ಗೈರು

ಸಾರಾಂಶ

ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಭಿನ್ನಮತ ಸ್ಫೋಟವಾಗಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಇಬ್ಬರು ಶಾಸಕರೂ, ಸಂಸದೆ ಶೋಭಾ ಕರಂದ್ಲಾಜೆ ಅವರೂ ಗೈರಾಗಿದ್ದರು. ಪಕ್ಷದೊಳಗಿನ ಭಿನ್ನಮತ ಸಾರ್ವಜನಿಕವಾಗಿ ಪ್ರಕಟವಾಯಿತು.

ಉಡುಪಿ(ಸೆ.11): ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಮಂಗಳವಾರ ಉಡುಪಿಗೆ ಬಂದ ನಳಿನ್‌ ಕುಮಾರ್‌ ಕಟೀಲ್‌ ಅವರ ಅಭಿನಂದನಾ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿಯ ಭಿನ್ನಮತ ಬಹಿರಂಗವಾಗಿದೆ.

ತಮಗೆ ಸಚಿವ ಸ್ಥಾನ ಸಿಗದ ಅಸಮಾಧಾನದಲ್ಲಿರುವ ಕುಂದಾಪುರದ ಹಿರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಮತ್ತು ಬೈಂದೂರು ಶಾಸಕ ಸುಕುಮಾರ್‌ ಶೆಟ್ಟಿಈ ಸಭೆಗೆ ಹಾಜರಾಗಿರಲಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಗೈರು ಹಾಜರಾಗಿದ್ದರು.

ಸೀಟ್‌ ಬೆಲ್ಟ್ ಧರಿಸದಿದ್ರೂ ಸಂಸದರ ಕಾರ್ ಚಾಲಕನಿಗೆ ದಂಡವಿಲ್ಲ..!

ವೇದಿಕೆಯಲ್ಲಿ ಹಾಲಾಡಿ ಮತ್ತು ಸುಕುಮಾರ ಶೆಟ್ಟಿಅವರಿಗಾಗಿ ಆಸನಗಳನ್ನು ಕಾದಿರಿಸಲಾಗಿತ್ತು. ಅವರಿಬ್ಬರ ಗೈರಿನ ಹಿನ್ನೆಲೆಯಲ್ಲಿ ಬೇರೆಯವರು ಅದನ್ನು ತುಂಬಿದರು. ಹಾಲಾಡಿ ಮತ್ತು ಸುಕುಮಾರ ಶೆಟ್ಟಿಅವರು ಬೇರೆ ಕಾರ್ಯನಿಮಿತ್ತ ಬಂದಿರಲಿಕ್ಕಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮದವರಿಗೆ ತಿಳಿಸಿದರು.

ಮೌನಕ್ಕೆ ಶರಣಾದ ನಳಿನ್‌ ಕುಮಾರ್‌ ಕಟೀಲ್..!

ಸಂಸದೆ ಇದೇ ದಿನ ಚಿಕ್ಕೊಡಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪೂರ್ವನಿಗದಿಯಾಗಿದ್ದರಿಂದ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಸಂಘಟಕರು ಸಭೆಯಲ್ಲಿ ಹೇಳಿದರು.

PREV
click me!

Recommended Stories

ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ