ಉಡುಪಿಯ ಕಾರ್ಕಳ ಬಳಿ ನಿರ್ಮಿಸಲಾದ ಪರಶುರಾಮ ಪ್ರತಿಮೆ ರಿಯಾಲಿಟಿ ಚೆಕ್‌ಗೆ ಮುಂದಾದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಜೈಲು ಶಿಕ್ಷೆ ಭೀತಿ ಎದುರಾಗಿದೆ.
ಉಡುಪಿ (ಅ.23): ರಾಜ್ಯದ ಕರಾವಳಿ ಜಿಲ್ಲೆ ಉಡುಪಿಯ ಕಾರ್ಕಳದ ಬಳಿಯ ಬೈಲೂರಿನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಪರುಶುರಾಮ ಥೀಮ್ ಪಾರ್ಕ್‌ನಲ್ಲಿ ನಿಲ್ಲಿಸಲಾಗಿದ್ದ ಪರಶುರಾಮ ಪ್ರತಿಮೆ ಕಂಚಿನಿಂದ ಮಾಡಿದ್ದೇ ಅಥವಾ ಫೈಬರ್‌ನಿಂದ ಮಾಡಿದ್ದಾ ಎಂಬ ಸತ್ಯಾಸತ್ಯತೆಗೆ ಮುಂದಾಗಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಈಗ ಜೈಲು ಶಿಕ್ಷೆ ಭೀತಿ ಎದುರಾಗಿದೆ.
ರಾಜ್ಯದಲ್ಲಿ ಕಾರ್ಕಳದ ಪರಶುರಾಮ ಪ್ರತಿಮೆ ನಿರ್ಮಾಣ ವಿಚಾರವು ವಿವಾದ ಸ್ವರೂಪ ಪಡೆದುಕೊಂಡಿದೆ. ಬೈಲೂರಿನ ಪರಶುರಾಮ ಮೂರ್ತಿಯ ಸತ್ಯಾಸತ್ಯತೆ ವಿಚಾರದಲ್ಲಿ ಜಟಾಪಟಿ ಶುರುವಾಗಿದೆ. ಪರಶುರಾಮನ ಮೂರ್ತಿ ವಿಚಾರದಲ್ಲಿ ಕಾರ್ಕಳ ನಗರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲು ಮಾಡಲಾಗಿದೆ. ರಕ್ಷಣಾ ಕವಚ, ಕಂಚಿನ ಮೂರ್ತಿಯ ಫಿನಿಶಿಂಗ್ ಲೇಪನವನ್ನು ಹರಿದು ಹಾಕಿದ್ದ ಕಾಂಗ್ರೆಸ್ ಮುಖಂಡರು ಹಾಗೂ ರಿಯಾಲಿಟಿ ಚೆಕ್ ಹೆಸರಲ್ಲಿ ಮೂರ್ತಿ ಮೇಲೆ ಹತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮೂರ್ತಿಯ ಮೂಲ ಸ್ವರೂಪ ವಿರೂಪಗೊಳಿಸಿದ ಕುರಿತು ಕೇಸ್ ದಾಖಲು ಮಾಡಲಾಗಿದೆ. ಜೊತೆಗೆ, ಸರ್ಕಾರಿ ಸ್ವತ್ತು ನಷ್ಟ, ಮತ್ತು ಸುಳ್ಳು ಸುದ್ದಿ ಹರಡಿಸಿರುವ ಬಗ್ಗೆ ಕಾಂಗ್ರೆಸ್ ಕಾರ್ಯರ್ತರ ಮೇಲೆ ಕೇಸ್ ದಾಖಲು ಮಾಡಲಾಗಿದೆ.
undefined
ಪ್ರಮೋದ್ ಮುತಾಲಿಕ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್: ಉಡುಪಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ನಿರ್ವಿಘ್ನ
ಮತ್ತೊಂದೆಡೆ ಪರಶುರಾಮನ ಪ್ರತಿಮೆಯು ಕಂಚಿನ ಮೂರ್ತಿ ಎಂದು ಸಾಭೀತುಪಡಿಸಲು ಮುಂದಾದ ಬಿಜೆಪಿ ನಾಯಕರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಪರಶುರಾಮನ ಪಾದಕ್ಕೆ ಸುತ್ತಿಗೆಯಿಂದ ಹೊಡೆದು ರಿಯಾಲಿಟಿ ಚೆಕ್ ಮಾಡಿದ್ದರು. ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ನೀಡಲು ತೆರಳಿದ್ದ ಬಿಜೆಪಿ ಟೀಂ. ಸಾರ್ವಜನಿಕ ಆಸ್ತಿ ಹಾನಿ, ಧಾರ್ಮಿಕ ಭಾವನೆಗೆ ದಕ್ಕೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಧಾರ್ಮಿಕ ಸ್ಥಳ ಅಪವಿತ್ರಗೊಳಿಸಿರುವ ಬಗ್ಗೆ ಪೊಲೀಸ್ ಕೇಸ್ ದಾಖಲು ಮಾಡಲಾಗಿದೆ. ಎರಡು ತಿಂಗಳು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಿದ್ದರೂ ಅಕ್ರಮ ಪ್ರವೇಶ ಮಾಡಿರುವ ಕಾಂಗ್ರೆಸ್ ಬಿಜೆಪಿ ನಾಯಕರ ವಿರುದ್ಧ ದಿವ್ಯಾ ನಾಯಕ್ ಎಂಬವರಿಂದ ಬಿಜೆಪಿ ಮೇಲೆ ದೂರು ದಾಖಲು ಮಾಡಲಾಗಿದೆ.
ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಸ್ಥಗಿತ ಅರ್ಜಿ ವಜಾ:
ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆ ಹಾಗೂ ಕೃಷ್ಣನ ಸ್ಥಳವಾದ ಉಡುಪಿಯಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು, ಈ ಥೀಮ್ ಪಾರ್ಕ್ ನಿರ್ಮಾಣವನ್ನು ವಿರೋಧಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ಹೈಕೋರ್ಟ್ ಪ್ರಮೋದ್ ಮುತಾಲಿಕ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಉಡುಪಿಯಲ್ಲಿ ಗೋಮಾಳಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು, ಪಾರ್ಕ್ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಗೋಮಾಳಕ್ಕೆಂದು ಮೀಸಲಿಟ್ಟ ಜಾಗದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪ ಮಾಡಲಾಗಿತ್ತು. ಥೀಮ್ ಪಾರ್ಕ್ ನಿರ್ಮಾಣವೇ ಕಾನೂನುಬಾಹಿರವೆಂದು ವಾದ ಮಂಡನೆ ಮಾಡಲಾಗಿತ್ತು.
ಕಾರ್ಕಳ ಪರಶುರಾಮನ 33 ಎಡಿ ಎತ್ತರದ ವಿಗ್ರಹ ನಕಲಿ: ಲಕ್ಷ್ಮೀ ಹೆಬ್ಬಾಳ್ಕರ್
ಪ್ರಮೋದ್ ಮುತಾಲಿಕ್ ಪರ ವಕೀಲರ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಥೀಮ್ ಪಾರ್ಕ್ ನಿರ್ಮಾಣ ಅಂತಿಮ ಹಂತದಲ್ಲಿರುವಾಗ ಅರ್ಜಿ ಸಲ್ಲಿಸಲಾಗಿದೆ. ತಮ್ಮ ಗೋವುಗಳ ಸಾಕಣೆಗೆ ತೊಂದರೆಯಾಗಿದೆ ಎಂದು ಅರ್ಜಿದಾರರು ಎಲ್ಲಿಯೂ ಹೇಳಿಲ್ಲ, ಜೊತೆಗೆ ಉಲ್ಲೇಖವನ್ನೂ ಮಾಡಿಲ್ಲ. ಊಹೆಗಳ ಮೇಲೆ ಪಿಐಎಲ್ ಸಲ್ಲಿಸಿದ್ದಾರೆಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಆದ್ದರಿಂದ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.