ಕೊರೋನಾ ಹೋರಾಟ ಬಿಟ್ಟು ಅಧಿಕಾರಕ್ಕೆ ಬಿಜೆಪಿ ಕಚ್ಚಾಟ: ಕಾಂಗ್ರೆಸ್ ಕಿಡಿ

By Kannadaprabha NewsFirst Published May 30, 2020, 7:17 AM IST
Highlights

ರಾಜ್ಯದಲ್ಲೀಗ ಕೊರೋನಾ ಸೋಂಕಿನ ವಿರುದ್ಧ ಹೋರಾಟ ಇರಬೇಕಿತ್ತು. ಆದರೆ ಬಿಜೆಪಿ ಶಾಸಕರು ಅಧಿಕಾರ, ಮಂತ್ರಿಗಿರಿಯ ಕಚ್ಚಾಟದಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಟೀಕಿಸಿದ್ದಾರೆ.

ಮಂಗಳೂರು(ಮೇ 30): ರಾಜ್ಯದಲ್ಲೀಗ ಕೊರೋನಾ ಸೋಂಕಿನ ವಿರುದ್ಧ ಹೋರಾಟ ಇರಬೇಕಿತ್ತು. ಆದರೆ ಬಿಜೆಪಿ ಶಾಸಕರು ಅಧಿಕಾರ, ಮಂತ್ರಿಗಿರಿಯ ಕಚ್ಚಾಟದಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಟೀಕಿಸಿದ್ದಾರೆ.

ಆಡಳಿತರೂಢ ಬಿಜೆಪಿಯ ಅತೃಪ್ತ ಶಾಸಕರು ದಿಢೀರ್‌ ಸಭೆ ನಡೆಸಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ವಿರುದ್ಧದ ಹೋರಾಟಕ್ಕೆ ಆರಂಭದಿಂದಲೂ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌ ಬೆಂಬಲ ನೀಡಿದೆ. ಆದರೆ ಬಿಜೆಪಿಯ ಗೃಹ ಮಂತ್ರಿ, ಶಿಕ್ಷಣ ಸಚಿವರು ಕಚ್ಚಾಟದಲ್ಲಿ ತೊಡಗಿದ್ದರೆ, ಇದೀಗ ಕೆಲ ಶಾಸಕರು ಅಧಿಕಾರಕ್ಕಾಗಿ ಕಚ್ಚಾಡುತ್ತಿರುವುದು ದುರ್ದೈವ ಎಂದರು.

ದೆಹಲಿಯಲ್ಲಿ ಭೂಕಂಪ; ರಿಕ್ಟರ್ ಮಾಪನದಲ್ಲಿ 4.6 ತೀವ್ರತೆ ದಾಖಲು!

ಪಿಪಿಇ ಕಿಟ್‌ನಲ್ಲಿ ಭ್ರಷ್ಟಾಚಾರ: ಮಾಸ್ಕ್‌, ಸ್ಯಾನಿಟೈಸರ್‌, ಪಿಪಿಇ ಕಿಟ್‌ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರೂ ಸ್ಪೀಕರ್‌ ಮಾತ್ರ ಅನುಮೋದನೆ ನೀಡುತ್ತಿಲ್ಲ. ಭ್ರಷ್ಟಾಚಾರ ನಡೆಯದೇ ಇದ್ದರೆ ತನಿಖೆ ಮಾಡಲು ಏನು ತೊಂದರೆ? ತನಿಖೆ ನಿರಾಕರಿಸುವ ಮೂಲಕ ಭ್ರಷ್ಟಾಚಾರ ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಲೀಂ ಆರೋಪಿಸಿದರು.

ಕೊರೋನಾದ 60 ದಿನಗಳ ಕಾಲ ನಾವು ಬಿಜೆಪಿ ಮೇಲೆ ಆರೋಪ ಮಾಡದೆ ಸೋಂಕಿನ ವಿರುದ್ಧ ಬೆಂಬಲಕ್ಕೆ ನಿಂತೆವು. ಅನೇಕ ಸಲಹೆಗಳನ್ನು ನೀಡಿದರೂ ಕಾಂಗ್ರೆಸ್‌ನ ಸಲಹೆಗಳನ್ನು ಸರ್ಕಾರ ಒಪ್ಪಲೇ ಇಲ್ಲ. ಇದರಿಂದಾಗಿ ರಾಜ್ಯದಲ್ಲಿ ಬಡವರು, ಕಾರ್ಮಿಕರು ಸರಿಯಾಗಿ ಆಹಾರ ಸಿಗದೆ ಕಂಗೆಟ್ಟಿದ್ದಾರೆ. ಈ ಸರ್ಕಾರಕ್ಕೆ ಕಣ್ಣು, ಕಿವಿಯೇ ಇಲ್ಲ. ಅದರಲ್ಲೂ ವಿಶೇಷವಾಗಿ ಹೃದಯವೇ ಇಲ್ಲದ ಸರ್ಕಾರ ಇದು. ವೈಯಕ್ತಿಕ ಹಿತಾಸಕ್ತಿಯೇ ಅವರಿಗೆ ಮುಖ್ಯವಾಗಿದೆ ಎಂದು ಸಲೀಂ ಅಹ್ಮದ್‌ ಆರೋಪಿಸಿದರು.

ಲಾಕ್‌ಡೌನ್‌ ಸಡಿಲ: ಹೆಚ್ಚುವ ಅಪರಾಧಿ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ಇರಲಿ, ಸಚಿವ ಬೊಮ್ಮಾಯಿ

ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿಸೋಜ, ಹರೀಶ್‌ ಕುಮಾರ್‌, ಮಾಜಿ ಶಾಸಕರಾದ ಮೊಹಿಯುದ್ದೀನ್‌ ಬಾವ, ಜೆ.ಆರ್‌. ಲೋಬೊ, ಮುಖಂಡರಾದ ಜಿ.ಎ. ಬಾವ, ಶಶಿಧರ ಹೆಗ್ಡೆ, ಮಂಜುನಾಥ ಭಂಡಾರಿ ಮತ್ತಿತರರಿದ್ದರು.

ಬೂತ್‌ ಮಟ್ಟದಲ್ಲೂ ಡಿಕೆಶಿ ಪದಗ್ರಹಣ ನೇರಪ್ರಸಾರ

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಪದಗ್ರಹಣ ಸಮಾರಂಭವನ್ನು ಜೂ.7ರಂದು ಐತಿಹಾಸಿಕ ಕಾರ್ಯಕ್ರಮವಾಗಿಸಲು ಸಿದ್ಧತೆ ನಡೆದಿದೆ. ಪ್ರತಿ ಪಂಚಾಯ್ತಿ, ವಾರ್ಡ್‌, ಬ್ಲಾಕ್‌ಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ನಡೆಯಲಿದೆ. ದ.ಕ.ದ 300 ಕಡೆ ಸೇರಿದಂತೆ ರಾಜ್ಯದ 8 ಸಾವಿರ ಕಡೆಗಳಲ್ಲಿ ಕಾರ್ಯಕ್ರಮ ನೆರವೇರಲಿದೆ. ಬೆಂಗಳೂರಿನಲ್ಲಿ ನಡೆಯುವ ಪದಗ್ರಹಣದಲ್ಲಿ 100-150ರಷ್ಟುಮುಖಂಡರು ಮಾತ್ರ ಭಾಗಿಯಾಗಲಿದ್ದಾರೆ ಎಂದು ಸಲೀಂ ಅಹ್ಮದ್‌ ತಿಳಿಸಿದರು.

ಕೇಡರ್‌ ಬೇಸ್ಡ್‌ ಪಕ್ಷ ಗುರಿ

ಡಿಕೆಶಿ ಪದಗ್ರಹಣದ ಬಳಿಕ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಕೇಡರ್‌ ಬೇಸ್ಡ್‌ ಪಕ್ಷವನ್ನಾಗಿ ತಳಮಟ್ಟದಿಂದ ಕಟ್ಟಲಾಗುವುದು ಎಂದು ಹೇಳಿದ ಸಲೀಂ ಅಹ್ಮದ್‌, ಬೂತ್‌ ಕಮಿಟಿಯ ಮಟ್ಟದಲ್ಲೇ ಇದನ್ನು ಕಾರ್ಯಗತಗೊಳಿಸಲಾಗುವುದು. ಪ್ರತಿ ಬೂತ್‌ಗಳನ್ನು ನೇರವಾಗಿ ಕೆಪಿಸಿಸಿಗೆ ಜೆಪಿಎಸ್‌ ಮೂಲಕ ಲಿಂಕ್‌ ಮಾಡಿ, ಬೂತ್‌ ಮಟ್ಟದ ಕಾರ್ಯಕ್ರಮಗಳ ಮೇಲೆ ಕೆಪಿಸಿಸಿ ಮೇಲುಸ್ತುವಾರಿ ವಹಿಸಲಿದೆ ಎಂದು ಹೇಳಿದರು.

click me!