ಶಿರಸಿ: ದೂರು ಕೊಡಬೇಕಾದವನೇ ದೂರ ಓಡಿದ! ವಿಡಿಯೋ ವೈರಲ್

Published : Jul 27, 2018, 11:51 AM ISTUpdated : Jul 27, 2018, 12:04 PM IST
ಶಿರಸಿ: ದೂರು ಕೊಡಬೇಕಾದವನೇ ದೂರ ಓಡಿದ! ವಿಡಿಯೋ ವೈರಲ್

ಸಾರಾಂಶ

ರಸ್ತೆ ಅಪಘಾತವಾದರೆ ಗಾಯಗೊಂಡ ವ್ಯಕ್ತಿ ಪೊಲೀಸರಿಗೆ ದೂರು ನೀಡಿ ಅಪಘಾತ ಮಾಡಿದವರ ಮೇಲೆ ಕ್ರಮ ಕೈಗೊಳ್ಳು ಆಗ್ರಹಿಸುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ದೂರು ನೀಡಬೇಕಾದ ವ್ಯಕ್ತಿಯೇ ಪೊಲೀಸರ ಕೈನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಕಾರವಾರ[ಜು.27] ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ತೂರಾಡಿಕೊಂಡು ಹೋಗುತಿದ್ದ ವ್ಯಕ್ತಿಗೆ ಅತಿ ವೇಗದಲ್ಲಿ ಬಂದ ಆಟೋ ರಿಕ್ಷಾ ಡಿಕ್ಕಿ ಹೊಡೆದು ಪರಾರಿಯಾದ್ರೆ ,ದೂರು ಕೊಡಬೇಕಿದ್ದ ಅಪಘಾತಗೊಂಡ ವ್ಯಕ್ತಿಯೇ ಪ್ರಕರಣ ದಾಖಲಿಸಿಕೊಳ್ಳಲು ಬಂದ ಪೋಲೀಸರ ಕೈನಿಂದ ತಪ್ಪಿಸಿಕೊಂಡು ಪರಾರಿಯಾದ್ದಾನೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ವಿಚಿತ್ರ ಪ್ರಕರಣ ನಡೆದಿದೆ. ನಗರದ ಮಾರಿಕಾಂಬ ರಸ್ತೆಯ ಹೆಚ್.ಕೆ.ಹೆಚ್ ಮಂಡಿ ಬಳಿ ರಾಮನಬೈಲು ನಿವಾಸಿ ನಜೀರ್ ಅಹ್ಮದ್ ರಾತ್ರಿ ವೇಳೆ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ತೂರಾಡುತ್ತ ಬರುತ್ತಿದ್ದರು. ಈ ವೇಳೆ ಮಾರಿಕಾಂಬ ರಸ್ತೆಯ ಕಡೆಯಿಂದ ಬಂದ ಆಟೋ ಈತನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಸ್ಥಳದಲ್ಲೇ ಕುಸಿದು ಬಿದ್ದ ಈತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ಮಾಹಿತಿ ಪಡೆದು ಪ್ರಕರಣ ದಾಖಲಿಸುವ ವೇಳೆ ಅಪಘಾತ ಗೊಂಡ ನಜೀರ್ ಅಹ್ಮದ್ ಪರಾರಿಯಾಗಿದ್ದಾನೆ.ಇನ್ನು ಈತನಿಗೆ ಅಪಘಾತವಾದ ದೃಶ್ಯ ವು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ಇನ್ನು ಪೊಲೀಸರು ಕೂಡ ಕೇಸು ದಾಖಲಿಸಿಕೊಳ್ಳಲು ಅಪಘಾತ ಗೊಂಡ ನಜೀರ್ ಗಾಗಿ ಹಾಗೂ ಅಪಘಾತ ಮಾಡಿದ ಆಟೋಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

"

PREV
click me!

Recommended Stories

ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!
Photos: 6 ವರ್ಷಗಳ ಬಳಿಕ ಮುಂಡಗೋಡಿಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ!