ರಾಷ್ಟ್ರಧ್ವಜ ನೇಯ್ಗೆ: ಧಾರವಾಡದ ಗರಗ ಖಾದಿ ಕೇಂದ್ರಕ್ಕೆ ಬಿಐಎಸ್‌ ಪರವಾನಗಿ

By Kannadaprabha News  |  First Published Aug 3, 2023, 2:00 AM IST

ರಾಷ್ಟ್ರಧ್ವಜ ತಯಾರಿಕೆಗೆ ಬಿಐಎಸ್‌ ಮನ್ನಣೆ ಪಡೆದ ಸಂಸ್ಥೆಗಳಲ್ಲಿ ಗರಗ ಸಂಘ ಧಾರವಾಡ ಜಿಲ್ಲೆಯಲ್ಲಿ 2ನೆಯದು. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋ ದ್ಯೋಗ ಸಂಯುಕ್ತ ಸಂಘ ಈ ಮನ್ನಣೆ ಪಡೆದಿರುವ ಇನ್ನೊಂದು ಸಂಸ್ಥೆ.

ಧಾರವಾಡ(ಆ.03):  ಧಾರವಾಡ ತಾಲೂಕು ಗರಗ ಕ್ಷೇತ್ರೀಯ ಸೇವಾ ಸಂಘ ರಾಷ್ಟ್ರಧ್ವಜದ ಖಾದಿ ಬಟ್ಟೆ ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದು, ಇದೀಗ ‘ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್ಸ್ (ಬಿಐಎಸ್‌)ನಿಂದ ರಾಷ್ಟ್ರಧ್ವಜ ತಯಾರಿಕೆಗೆ ಪರವಾನಗಿ ಲಭಿಸಿದೆ.

ರಾಷ್ಟ್ರಧ್ವಜ ತಯಾರಿಕೆಗೆ ಬಿಐಎಸ್‌ ಮನ್ನಣೆ ಪಡೆದ ಸಂಸ್ಥೆಗಳಲ್ಲಿ ಗರಗ ಸಂಘ ಧಾರವಾಡ ಜಿಲ್ಲೆಯಲ್ಲಿ 2ನೆಯದು. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋ ದ್ಯೋಗ ಸಂಯುಕ್ತ ಸಂಘ ಈ ಮನ್ನಣೆ ಪಡೆದಿರುವ ಇನ್ನೊಂದು ಸಂಸ್ಥೆ.

Tap to resize

Latest Videos

ಹುಬ್ಬಳ್ಳಿ: ಬೆಂಗೇರಿ ಖಾದಿ ಧ್ವಜ ಕೇಂದ್ರಕ್ಕೆ ದುಪ್ಪಟ್ಟು ಆದಾಯ..!

ಗರಗ ಸೇವಾ ಸಂಘ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಧ್ವಜಕ್ಕಾಗಿ ಬಟ್ಟೆಯನ್ನು ನೇಯ್ದು ಅದಕ್ಕೆ ಬಣ್ಣ ಹಾಕಲು ಮತ್ತು ಅಶೋಕ ಚಕ್ರ ಮುದ್ರಿಸಲು ಮುಂಬೈ ಖಾದಿ ಡಯರ್ಸ್‌ ಮತ್ತು ಪ್ರಿಂಟರ್ಸ್‌ ಸಂಸ್ಥೆಗೆ ಕಳುಹಿಸುತ್ತಿತ್ತು. ಅಲ್ಲಿಂದ ಸಿದ್ಧವಾದ ಧ್ವಜವನ್ನು ತರಿಸಿ ಮಾರಾಟ ಮಾಡುತ್ತಿತ್ತು. ಇದೀಗ, ಬಿಐಎಸ್‌ ಪರವಾನಗಿ ದೊರೆದಿರುವು ದರಿಂದ ಈ ಎಲ್ಲ ಪ್ರಕ್ರಿಯೆ ಗರಗ ಸಂಘದಲ್ಲಿಯೇ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಈಶ್ವರಪ್ಪ ಇಟಗಿ ಕನ್ನಡಪ್ರಭಕ್ಕೆ ತಿಳಿಸಿದರು.

click me!