* ವಿಜಯನಗರ ಜಿಲ್ಲೆಯ ಕೂಡ್ಲಿಗಿ ಸಮೀಪದ ಪಾಲಯ್ಯಕೋಟೆಯಲ್ಲಿ ನಡೆದ ಘಟನೆ
* ಹಂಪಮ್ಮ ಎಂಬ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
* ಹೆಚ್ಚಿನ ಚಿಕಿತ್ಸೆಗಾಗಿ ಉಜ್ಜಿನಿ ಆಸ್ಪತ್ರೆಗೆ ದಾಖಲು
ಕೂಡ್ಲಿಗಿ(ಸೆ.22): ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಆ್ಯಂಬುಲೆಸ್ಸ್ (Ambulance)ನಲ್ಲೇ ಜನ್ಮ ನೀಡಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಸಮೀಪದ ಪಾಲಯ್ಯಕೋಟೆಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಪಾಲಯ್ಯನಕೋಟೆ ಗ್ರಾಮದ ಹಂಪಮ್ಮ ಬಸವರಾಜ (30) ಎಂಬ ಮಹಿಳೆ ಅವಳಿ(Twins) ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 108ಕ್ಕೆ ಕರೆ ಮಾಡಿದ್ದು, ತಕ್ಷಣ ಧಾವಿಸಿದ ಉಜ್ಜಿನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆಸ್ಸ್ ಹಂಪಮ್ಮನನ್ನು ಕರೆದುಕೊಂಡು ಉಜ್ಜಿನಿಗೆ ಹೊರಟಿತು. ಈ ವೇಳೆ ಮಾರ್ಗ ಮಧ್ಯದಲ್ಲೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ 108ರ ಶುಶ್ರೂಷಕಿ ನಾಗವೇಣಿ ಮತ್ತು ಚಾಲಕ ಕೊಟ್ರೇಶ ತಕ್ಷಣ ಸಹಜ ಹೆರಿಗೆ ಮಾಡಿಸಿದ್ದಾರೆ.
undefined
ಹಾವೇರಿ: 108 ಅಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
ಮಧ್ಯರಾತ್ರಿ 12ಕ್ಕೆ ಮೊದಲ ಹೆಣ್ಣು ಮಗು ನಂತರ 12-20ಕ್ಕೆ ಎರಡನೇ ಮಗು ಜನಿಸಿದ್ದು, ಅವಳಿ ಮಕ್ಕಳು ಮತ್ತು ಹಂಪಮ್ಮ ಆರೋಗ್ಯವಾಗಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಜ್ಜಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.