ವಿಂಡ್ ಮಿಲ್ ಹಾವಳಿಗೆ ಬೆಚ್ಚಿಬಿದ್ದ ಕೋಟೆನಾಡಿನ ಜನರು: ಮಾಲೀಕರಿಗೆ ಶಾಕ್ ಕೊಟ್ಟ DRDO

By Govindaraj S  |  First Published May 26, 2022, 8:19 PM IST

ಅದೊಂದು ಕಲ್ಲಿನ ಕೋಟೆಯನ್ನೊಳಗೊಂಡ ಜಿಲ್ಲೆ. ಆದ್ರೆ ಅಲ್ಲಿ ವಿಂಡ್ ಮಿಲ್‌ಗಳದ್ದೇ ಕಾರುಬಾರಾಗಿತ್ತು‌. ವನ್ಯಜೀವಿಗಳು ಹಾಗೂ ಸಾರ್ವಜನಿಕರಿಗೆ ಈ ಫ್ಯಾನ್‌ಗಳಿಂದ ತೀವ್ರ ಕಿರಿಕಿರಿಯಾದ್ರು ಸಹ ಡೋಂಟ್ ಕೇರ್ ಎಂದಿದ್ದ ವಿಂಡ್ ಮಿಲ್ ಮಾಲೀಕರಿಗೆ ಕೇಂದ್ರ ರಕ್ಷಣಾ ಇಲಾಖೆ ಭರ್ಜರಿ ಶಾಕ್ ನೀಡಿದೆ.


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮೇ.26): ಅದೊಂದು ಕಲ್ಲಿನ ಕೋಟೆಯನ್ನೊಳಗೊಂಡ ಜಿಲ್ಲೆ. ಆದ್ರೆ ಅಲ್ಲಿ ವಿಂಡ್ ಮಿಲ್‌ಗಳದ್ದೇ ಕಾರುಬಾರಾಗಿತ್ತು‌. ವನ್ಯಜೀವಿಗಳು ಹಾಗೂ ಸಾರ್ವಜನಿಕರಿಗೆ ಈ ಫ್ಯಾನ್‌ಗಳಿಂದ ತೀವ್ರ ಕಿರಿಕಿರಿಯಾದ್ರು ಸಹ ಡೋಂಟ್ ಕೇರ್ ಎಂದಿದ್ದ ವಿಂಡ್ ಮಿಲ್ ಮಾಲೀಕರಿಗೆ ಕೇಂದ್ರ ರಕ್ಷಣಾ ಇಲಾಖೆ ಭರ್ಜರಿ ಶಾಕ್ ನೀಡಿದೆ. ಅರೆ! ರಕ್ಷಣಾ ಇಲಾಖೆಗೂ, ವಿಂಡ್ ಮಿಲ್‌ಗೂ ಏನ್ ಸಂಬಂಧ ಅಂತೀರಾ. ಹಾಗಾದ್ರೆ ನೋಡಿ ಈ ಸ್ಟೋರಿ. 

Tap to resize

Latest Videos

ಹೀಗೆ ಬೆಟ್ಟಗುಡ್ಡ, ವನ್ಯಜೀವಿಧಾಮ ಎನ್ನದೇ ಬೇಕಾಬಿಟ್ಟಿಯಾಗಿ ಹಾಕಿರುವ ವಿಂಡ್ ಮಿಲ್‌ಗಳು. ಗ್ರಾಮ ಪಂಚಾಯ್ತಿ ಹಾಗೂ ಡಿಆರ್‌ಡಿಓಯಿಂದಲೂ ನಿರಾಪೇಕ್ಷಣಾ ಪತ್ರ‌ ಪಡೆಯದೇ ತಲೆಯೆತ್ತಿರೋ ಫ್ಯಾ‌ನ್‌ಗಳು. ಈ ದೃಶ್ಯಗಳಿಗೆ ಸಾಕ್ಯ, ಕೋಟೆನಾಡು ಚಿತ್ರದುರ್ಗ. ‌ಹೌದು! ಈ ಜಿಲ್ಲೆಯ ಸುತ್ತಲ್ಲೂ ಎಲ್ಲಾ ಬೆಟ್ಟಗುಡ್ಡಗಳಲ್ಲೂ ವಿಂಡ್ ಮಿಲ್‌ಗಳು ರಾರಾಜಿಸ್ತಿವೆ. ರಾಜ್ಯದ ಉದ್ಯಮಿಗಳು, ರಾಜಕಾರಣಿಗಳು ಈ ವಿಂಡ್ ಮಿಲ್‌ಗಳನ್ನು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಖರೀದಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಲಾಭ ಗಳಿಸುತಿದ್ದಾರೆ. ಆದರೆ ಲಾಭ ಗಳಿಸುವ ಭರಾಟೆಯಲ್ಲಿ ಕಾನೂನನ್ನು ಗಾಳಿಗೆ ತೂರಿದ್ದಾರೆ. 

Chitradurga; ಟೊಮ್ಯಾಟೊ ಬೆಲೆ ಗಗನಕ್ಕೇರಿದ್ರೂ ರೈತನಿಗೆ ತಪ್ಪದ ಸಂಕಷ್ಟ

ವನ್ಯ ಜೀವಿಧಾಮ ಹಾಗು ಐತಿಹಾಸಿಕ‌ ಸ್ಮಾರಕಗಳನ್ನು ಸಹ ಪರಿಗಣಿಸದೇ ನಿಯಮ ಬಾಹಿರವಾಗಿ ಫ್ಯಾನ್‌ಗಳನ್ನು ಅಳವಡಿಸಿದ್ದಾರೆ. ಈ ಬಗ್ಗೆ ಚಿತ್ರದುರ್ಗದ ಪರಿಸರವಾದಿಗಳು ಸರ್ಕಾರದ ಗಮನಕ್ಕೆ ತಂದರೂ ಯಾವ್ದೇ ಪ್ರಯೋಜನ ಆಗಿರಲಿಲ್ಲ. ಆದ್ರೆ ಇದೀಗ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಬಳಿಯ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಏರೋನಾಟಿಕಲ್ ಟೆಸ್ಟ್ ರೇಂಜ್ ಏರೋಡ್ರಮ್ ಸುತ್ತ ಸುಮಾರು 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತಲೆಯೆತ್ತಿರುವ  ಎಲ್ಲಾ ವಿಂಡ್ ಮಿಲ್‌ಗಳನ್ನು ತೆರವುಗೊಳಿಸುವಂತೆ ಭಾರತೀಯ ರಕ್ಷಣಾ ಇಲಾಖೆ ಆದೇಶಿಸಿದೆ. ಅಲ್ಲದೇ ನಿಯಮಬಾಹಿರವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಂಡ್ ಮಿಲ್ ಕಾಮಗಾರಿಯನ್ನು ತಡೆಯುವಂತೆ ಸೂಚಿಸಿದೆ.

ಚಿತ್ರದುರ್ಗ: ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

ಇನ್ನು ಈ ನೋಟೀಸ್ ಈಗಾಗಲೇ‌ ವಿಂಡ್ ಮಿಲ್ ಮಾಲೀಕರು, ಚಿತ್ರದುರ್ಗ ಜಿಲ್ಲಾಧಿಕಾರಿ ಸೇರಿದಂತೆ  ಸಂಬಂಧಪಟ್ಟ ಗುತ್ತಿಗೆದಾರರಿಗೂ ರಕ್ಷಣಾ ಇಲಾಖೆ ತಲುಪಿಸಿದೆ. ಏರೋನಾಟಿಕ್ಸ್ ಟೆಸ್ಟ್‌ಗೆ ಅಡ್ಡಿಯಾಗದಂತೆ ದ್ಯಾಮವ್ವನಹಳ್ಳಿ ಸುತ್ತಮುತ್ತಲ ವಿಂಡ್ ಮಿಲ್‌ಗಳನ್ನ ತಕ್ಷಣವೇ ತೆರವುಗೊಳಿಸುವಂತೆ ತಿಳಿಸಲಾಗಿದೆ‌. ಹೀಗಾಗಿ ಪರಿಸರ ಪ್ರೇಮಿಗಳಲ್ಲಿ ಹರ್ಷೋದ್ಗಾರ‌ ಮೂಡಿದೆ. ಕಾಡು ಹಾಗೂ ವನ್ಯಜೀವಿಗಳಿಗೆ ರಕ್ಷಣಾ ಇಲಾಖೆ ಕಾರ್ಯದಿಂದ ಅನುಕೂಲವಾಗಿದೆ‌ ಸ್ಥಳೀಯರು. ಒಟ್ಟಾರೆ ಜಿಲ್ಲೆಯಲ್ಲಿ ಕರ್ಕಶ ಶಬ್ದ ಮಾಡ್ತಾ ಜನರ ನೆಮ್ಮದಿ ಕೆಡಿಸಿದ್ದ ವಿಂಡ್ ಮಿಲ್‌ಗಳಿಗೆ ಭಾರತೀಯ ರಕ್ಷಣಾ ಇಲಾಖೆ‌ ಬ್ರೇಕ್ ಹಾಕಲು ಮುಂದಾಗಿದೆ. ಇದರಿಂದಾಗಿ ಚಿತ್ರದುರ್ಗದ ಜನರಲ್ಲಿ‌ ಸಂತಸ‌ ಮೂಡಿದ್ದು, ವಿಂಡ್ ಮಿಲ್ ಮಾಲಿಕರ ನಿದ್ರೆ ಗೆಡಿಸಿರೋದಂತು‌ ಗ್ಯಾರಂಟಿ.

click me!