ಪುಸ್ತಕ ಸಂಗ್ರಹಣೆ ಅಭಿಯಾನಕ್ಕೆ Bengaluru Rural DC ಕೆ.ಶ್ರೀನಿವಾಸ್ ಚಾಲನೆ

By Suvarna News  |  First Published May 26, 2022, 5:31 PM IST

ಬೆಂಗಳೂರು ಗ್ರಾಮಾಂತರ ಡಿಸಿ ಕೆ‌. ಶ್ರೀನಿವಾಸ್ ಪುಸ್ತಕ ಸಂಗ್ರಹಣೆ ಅಭಿಯಾನಕ್ಕೆ  ಚಾಲನೆ ನೀಡಿದ್ದಾರೆ.  "ಜ್ಞಾನ ವೃಕ್ಷ, ನಿಮ್ಮ ಒಂದು ಪುಸ್ತಕದ ಕೊಡುಗೆ ನಮ್ಮ ಮಕ್ಕಳ ಜ್ಞಾನದ ಹಾದಿಗೆ" ಶೀರ್ಷಿಕೆಯಡಿ ಒಂದು ತಿಂಗಳ ಕಾಲ  ಪುಸ್ತಕ ಸಂಗ್ರಹಣೆ ಅಭಿಯಾನ ನಡೆಯಲಿದೆ.


 ವರದಿ: ರವಿಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ದೇವನಹಳ್ಳಿ (ಮೇ.26): ಸದಾ ಒಂದಿಲ್ಲೊಂದು‌ ಹೊಸ ಕಾರ್ಯಕ್ರಮ ಗಳನ್ನು ರೂಪಿಸಿ ಹೆಸರು ಪಡೆದಿರೋ ಬೆಂಗಳೂರು ಗ್ರಾಮಾಂತರ (Bengaluru Rural) ಡಿಸಿ ಕೆ‌ . ಶ್ರೀನಿವಾಸ್ (dc K. Srinivas) ಈಗ ಮತ್ತೊಂದು ನೂತನ ಕಾರ್ಯಕ್ಕೆ ‌ಚಾಲನೆ ನೀಡಿದ್ದಾರೆ.

Tap to resize

Latest Videos

ಬೆಂಗಳೂರು ಗ್ರಾಮಾಂತರ ( Bengaluru Rural) ಜಿಲ್ಲಾಡಳಿತದ ವತಿಯಿಂದ "ಜ್ಞಾನ ವೃಕ್ಷ, ನಿಮ್ಮ ಒಂದು ಪುಸ್ತಕದ ಕೊಡುಗೆ ನಮ್ಮ ಮಕ್ಕಳ ಜ್ಞಾನದ ಹಾದಿಗೆ" ಶೀರ್ಷಿಕೆಯಡಿ ಒಂದು ತಿಂಗಳ ಕಾಲ ಸಾರ್ವಜನಿಕರಿಂದ ಪುಸ್ತಕ ಸಂಗ್ರಹಣೆ ಅಭಿಯಾನ (book collection campaign) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,  ಸಾರ್ವಜನಿಕರು ಪುಸ್ತಕವನ್ನು ದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ (dc K. Srinivas ) ಕರೆ ನೀಡಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿ ಸಭಾಂಗಣದಲ್ಲಿ ಪುಸ್ತಕ ಸಂಗ್ರಹ ಮಾಸಿಕ ಅಭಿಯಾನಕ್ಕೆ  ಸ್ವತಃ ಜಿಲ್ಲಾಧಿಕಾರಿಯವರೇ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಚಾಲನೆ ನೀಡಿದರು.

Chikkamagaluru; ಕರ್ಕಶ ಶಬ್ದದ ಬೈಕಿನ ಸೈಲೆನ್ಸರ್ ನಾಶ ಪಡಿಸಿದ ಕಡೂರು ಪೊಲೀಸ್

ಈ ವಿನೂತನ ಕಾರ್ಯಕ್ರಮವು ಜಿಲ್ಲಾಡಳಿತದ ಹೊಸ ಪ್ರಯತ್ನವಾಗಿದ್ದು, ಪುಸ್ತಕ ಸಂಗ್ರಹ ಅಭಿಯಾನವಾಗಿದೆ. ಮೇ 25ರಿಂದ ಜೂನ್ 25 ರವರೆಗೆ ಪುಸ್ತಕ ಸಂಗ್ರಹ ಅಭಿಯಾನ ನಡೆಯಲಿದೆ. ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಲು, ಈ ಅಭಿಯಾನದಿಂದ ಸಂಗ್ರಹಿಸಿದ ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಇದು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಹೇಳಿದ್ದಾರೆ. 

50 ಸಾವಿರ ಪುಸ್ತಕ ಸಂಗ್ರಹದ ಗುರಿ
ಈ ಪುಸ್ತಕ ‌ಅಭಿಯಾನ‌ ಒಂದು ತಿಂಗಳ ಕಾಲ ನಡೆಯಲಿದ್ದು 50 ಸಾವಿರ ಪುಸ್ತಕಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದು, ಇದರಿಂದಾಗಿ  ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪಠ್ಯಪುಸ್ತಕಗಳು, ನೀತಿ ಕತೆ, ಕಾದಂಬರಿ, ಆತ್ಮಕಥನ, ವಿಜ್ಞಾನ ವಿಷಯ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿಂತೆ ಓದಲು ಉತ್ತಮ ಸ್ಥಿತಿಯಲ್ಲಿರುವ ಹಳೆಯ ಮತ್ತು ಹೊಸ  ಪುಸ್ತಕಗಳನ್ನು ಸಾರ್ವಜನಿಕರು ದಾನ ಮಾಡಬಹುದೆಂದು ಡಿಸಿ ಮನವಿ ಮಾಡಿದ್ದಾರೆ. ಈ ಅಭಿಯಾನದಿಂದ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಎಂದರು. 

Udupi ; ಕೊಲ್ಲೂರು ವ್ಯಾಪ್ತಿಯಲ್ಲಿ ಡೆಂಗ್ಯೂ ನಿರ್ಮೂಲನಕ್ಕೆ ಅವಿರತ ಶ್ರಮ

ಮೊಬೈಲ್, ಕಂಪ್ಯೂಟರ್ ಸೆಳೆತದಿಂದ‌ ಓದುವ ಸಂಖ್ಯೆ ಕಡಿಮೆ
ಇತ್ತೀಚೆಗೆ ಕಂಪ್ಯೂಟರ್, ಮೊಬೈಲ್, ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಪುಸ್ತಕ ಓದುವುದನ್ನು ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಉತ್ತೇಜಿಸಿದರೆ ಉತ್ತಮ ಹವ್ಯಾಸವನ್ನು ರೂಢಿಸಿದಂತಾಗುವುದು ಹಾಗೂ ಜ್ಞಾನವೂ ವೃದ್ಧಿಯಾಗಲಿದೆ ಎಂದು ಡಿಸಿ ಹೇಳಿದ್ದಾರೆ.

ಪುಸ್ತಕಗಳನ್ನು ನೀಡಿ‌ ಮಾದರಿಯಾದ ಡಿಸಿ
ನೂತನ ‌ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ‌ಶ್ರೀನಿವಾಸ್ ಅವರೇ ಖುದ್ದು ಮಕ್ಕಳಿಗೆ ಅನುಕೂಲ ಆಗುವಂತಹ ಪುಸ್ತಕಗಳನ್ನು ನೀಡುವ ಮೂಲಕ ‌ಇತರೆ ಅಧಿಕಾರಿಗಳು ಪುಸ್ತಕ ದಾನ ಮಾಡುವಂತೆ  ಪ್ರೇರಣೆಯಾಗಿದ್ದಾರೆ.

click me!