ಕೆಎಸ್ಆರ್ಟಿಸಿ ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಸ್ ಚಾಲಕನೊಬ್ಬ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಡಿಪೋದಲ್ಲಿ ನಡೆದಿದೆ.
ಬಾಗಲಕೋಟೆ (ನ.19): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿನ (ಕೆಎಸ್ಆರ್‌ಟಿಸಿ) ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಸ್ ಚಾಲಕನೊಬ್ಬ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಡಿಪೋದಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿಯಲ್ಲಿ ಮೇಲಧಿಕಾರಿಗಳ ಕಿರುಕುಳ ಹೊಸದೇನಲ್ಲ. ರಾಜ್ಯದಲ್ಲಿ ಮೇಲಧಿಕಾರಿಗಳ ಕಿರುಕುಳಕ್ಕೆ ಕೆಳ ಹಂತದ ನೌಕರು ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಅನೇಕ ಘಟನೆಗಳು ನಡೆದಿವೆ. ಕೆಲವು ಪ್ರಕರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿ ಸಾವಿನ ದವಡೆಯಿಂದ ಪಾರಾಗಿರುವ ಘಟನೆಗಳೂ ನಡೆದಿವೆ. ಅದೇ ರೀತಿ ಮೇಲಾಧಿಕಾರಿಗಳ ಕಿರುಕಳ ಹಿನ್ನೆಲೆ ಕೆ ಎಸ್ ಆರ್ ಟಿಸಿ ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.
undefined
ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಣಂತಿ ತಾಯಿ, 9 ತಿಂಗಳ ಹಸುಗೂಸು ಬಲಿ: ಹೆಂಡ್ತಿ-ಮಗು ಜೀವ ಹೋಗ್ತಿದ್ರೂ ರಕ್ಷಿಸಲಾಗಲಿಲ್ಲ
ಬೀಳಗಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ, ಮೇಲಧಿಕಾರಿಗಳ ನಿರಂತರ ಕಿರುಕಳದಿಂದ ಮೂರು ದಿನಗಳಿಂದ ಕೆಲಸ ಮಾಡುತ್ತಾ ಡಿಪೋದಲ್ಲಿಯೇ ಇದ್ದನು. ಮೂರು ದಿನಗಳಾದರೂ ಮನೆಗೆ ಬಾರದೇ ಇದ್ದ ಕೆಲಸ ಮಾಡುತ್ತಿದ್ದನು. ಇಷ್ಟಾದರೂ ರಜೆ ಕೊಡದೇ ಮನೆಗೆ ಹೋಗಲು ಸಮಯ ಹೊಂದಾಣಿಕೆ ಮಾಡಿ ಡ್ಯೂಟಿಯನ್ನು ಹಾಕಿಕೊಡದೇ ಮೇಲಧಿಕಾರಿ ಕಿರುಕುಳ ನೀಡಿದ್ದಾರಂತೆ. ಹೀಗಾಗಿ, ಮನನೊಂದು ಚಾಲಕ ಮಲ್ಲಿಕಾರ್ಜುನ ಭಾನುವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ವಿಷ ಸೇವನೆ ಮಾಡಿದ ಮಾಹಿತಿಯನ್ನು ಸಂಬಂಧಿಕರೊಂದಿಗೆ ಹೇಳಿಕೊಂಡಿದ್ದಾನೆ. ತಕ್ಷಣ ಮಲ್ಲಿಕಾರ್ಜುನ ಇದ್ದ ಸ್ಥಳಕ್ಕೆ ಬಂದ ಆತನ ಸಂಬಂಧಿಕರು ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಸ್ಥಳೀಯ ಬೀಳಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕನಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. ಇನ್ನು ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಮಲ್ಲಿಕಾರ್ಜುನ, ತನ್ನ ಸ್ಥಿತಿಗೆ ಕಿರುಕಳ ನೀಡಿದ ಡಿಪೋದ ಮೇಲಧಿಕಾರಿ ಕಾಡರಕೊಪ್ಪ ಎಂಬುವವರೇ ಕಾರಣ ಎಂದು ಹೇಳಿಕೊಂಡದ್ದಾರೆ.
ಕೆಆರ್‌ಎಸ್ ಜಲಾಶಯದ ಹಿನ್ನೀರಿನಲ್ಲಿ ಕಾರುಣ್ಯ ಟ್ರಸ್ಟ್‌ನ ಮೂವರು ಮುಳುಗಿ ಸಾವು!
ಪತಿ ಅನಾರೋಗ್ಯದ ಸ್ಥಿತಿಗತಿ ಬಗ್ಗೆ ಪತ್ನಿ ಶಶಿಕಲಾ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಾಗಲಕೋಟೆ ಜಿಲ್ಲೆಯ ಬೀಳಗಿ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಂಡನ ಚೇತರಿಕೆ ನಂತರ ಪೊಲೀಸ್ ಠಾಣೆಗೆ ತೆರಳಿ ಮೆಲಧಿಕಾರಿ ವಿರುದ್ಧ ದೂರು ನೀಡುವುದಾಗಿ ಶಶಿಕಲಾ ತಿಳಿಸಿದ್ದಾರೆ.