ಮಹಾಲಿಂಗಪುರ ಬಳಿ ಬೈಕ್‌ಗಳ ನಡುವೆ ಡಿಕ್ಕಿ: ಮೂವರ ದುರ್ಮರಣ

Kannadaprabha News   | Asianet News
Published : Jan 18, 2020, 08:41 AM IST
ಮಹಾಲಿಂಗಪುರ ಬಳಿ ಬೈಕ್‌ಗಳ ನಡುವೆ ಡಿಕ್ಕಿ: ಮೂವರ ದುರ್ಮರಣ

ಸಾರಾಂಶ

ಮುಖಾಮುಖಿ ಡಿಕ್ಕಿ ಹೊಡೆದ ಬೈಕ್‌ಗಳು| ಮೂವರ ಸಾವು| ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಳಿ ನಡೆದ ದುರ್ಘಟನೆ| ಮಹಾಲಿಂಗಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು|

ಮಹಾಲಿಂಗಪುರ(ಜ.18): ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಹಾಗೂ ರನ್ನಬೆಳಗಲಿಯ ಮಧ್ಯ ಪಟೇಲ ಅವರ ಕಟ್ಟಿಗೆ ಅಡ್ಡೆಯ ಹತ್ತಿರ ರಾಜ್ಯ ಹೆದ್ದಾರಿ ಮೇಲೆ ಗುರುವಾರ ರಾತ್ರಿ ನಡೆದಿದೆ.

ಬೆಳಗಲಿ ಗ್ರಾಮದ ಗೋವಿಂದ ಬೀರಪ್ಪ ಕುಂಬಾಳಿ (22) ಹಾಗೂ ಬನಹಟ್ಟಿಯ ಮಹ್ಮದ ಇಲಿಯಾಸ ಶೌಕತ ಅತ್ತಾರ (36), ಮಹಿಬೂಬಸಾಬ ಸತ್ತಾರ ಜಕಾತಿ (45) ಮೃತಪಟ್ಟವರು. ಮಹ್ಮದ ಇಲಿಯಾಸ ಹಾಗೂ ಮಹಿಬೂಬಸಾಬ ಇಬ್ಬರೂ ಸೇರಿಕೊಂಡು ಮುಧೋಳದಿಂದ ಮಹಾಲಿಂಗಪುರದ ಕಡೆಗೆ ವೇಗವಾಗಿ ಹೋಗುತ್ತಿದ್ದಾಗ ವಾಹನವೊಂದನ್ನು ಹಿಂದಿಕ್ಕುವ ಬರದಲ್ಲಿ ಮಹಾಲಿಂಗಪುರ ಕಡೆಯಿಂದ ಬೆಳಗಲಿ ಕಡೆಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಗೋವಿಂದ ಬೀರಪ್ಪ ಕುಂಬಾಳಿ ಸ್ಥಳದಲ್ಲೇ ಮೃತಪಟ್ಟರೆ, ಮಹ್ಮದ ಇಲಿಯಾಸ ಶೌಕತ ಅತ್ತಾರ (36), ಮಹಿಬೂಬಸಾಬ ಸತ್ತಾರ ಜಕಾತಿ ಇವರು ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಈ ಕುರಿತು ಮಹಾಲಿಂಗಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು