ರಾಷ್ಟ್ರೀಯ ಹೆದ್ದಾರಿಯಲ್ಲೇ ಬೃಹತ್ ಹೊಂಡಗಳು : ಪದೇ ಪದೇ ಅವಘಡ

By Kannadaprabha News  |  First Published Jul 22, 2021, 2:14 PM IST
  • ರಾಜಧಾನಿಯನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಮಂಗಳೂರು -  ಬೆಂಗಳೂರು ರಾಷ್ಟ್ರೀಯ ಹೆದ್ದಾರಿ
  • ಮಂಗಳೂರು -  ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಈ ದೇಶದ ಪ್ರಮುಖ ಹೆದ್ದಾರಿಗಳಲ್ಲೊಂದು
  • ಕುಂಟುತ್ತಾ ತೆವಳುತ್ತಾ ಸಾಗಿರುವ ಕಾಮಗಾರಿಯಿಂದ ವಾಹನ ಸವಾರರ ಪರದಾಟ

ಹಾಸನ (ಜು.22): ರಾಜಧಾನಿಯನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಮಂಗಳೂರು -  ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಈ ದೇಶದ ಪ್ರಮುಖ ಹೆದ್ದಾರಿಗಳಲ್ಲೊಂದು. ಹಾಗಾಗಿ ಇಲ್ಲಿ ವಾಹನ ದಟ್ಟಣೆಯೂ ಹೆಚ್ಚು. 

ಆದ್ದರಿಂದ ಈ ಹೆದ್ದಾರಿಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಆದರೆ ಕುಂಟುತ್ತಾ ತೆವಳುತ್ತಾ ಸಾಗಿರುವ ಕಾಮಗಾರಿ ಹಾಗು  ಕಾಮಗಾರಿಯ ಗುತ್ತಿಗೆದಾರರ ಬೇಜವಾಬ್ದಾರಿತನದಿಂದಾಗಿ  ಹೆದ್ದಾರಿಯ ಕೆಲ ಭಾಗಗಳಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಇದರಿಂದಾಗಿ ಹಲವರು ಜೀವ ಕಳೆದುಕೊಳ್ಳುವಂತಾಗಿದೆ. 

Tap to resize

Latest Videos

ಹೇಮಾವತಿ ನಾಲೆಗೆ ಕುಸಿದ ಭಾರೀ ಮಣ್ಣು : ಅಕ್ಕಪಕ್ಕದ ಗ್ರಾಮಗಳಲ್ಲಿ ಆತಂಕ

ಈಗಾಗಲೇ ನೆಲಮಂಗಲದಿಂದ ಹಾಸನದವರೆಗೆ ನಾಲ್ಕು ಪಥದ ರಸ್ತೆ ಪೂರ್ಣಗೊಂಡಿದೆ. ಶಿರಾಡಿ ಘಾಟಿಯಲ್ಲೂ  ಗುಂಡ್ಯವರೆಗೆ ಕಾಂಕ್ರೀಟ್ ರಸ್ತೆ ಇದೆ. ಇನ್ನು ಹಾಸನದಿಂದ ಸಕಲೇಶಪುರವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 

ಹಾಸನದ ಬೈಪಾಸ್‌ನಿಂದ ಆರಂಭವಾದರೆ  ಮಾವನೂರು ಭತರವಳ್ಳಿ, ಆಲೂರು ಬೈಪಾಸ್ ಚೌಲಗೆರೆ, ಸಿಂಗಾಪುರ, ಈಶ್ವರಹಳ್ಳಿ ಕೂಡಿಗೆ ಹಾಗೂ ಬಾಗೆ ಸಮೀಪ  ಒಂದು ಬದಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ.  ಕೆಲವೆಡೆ ಬಲ ಭಾಗದಲ್ಲಿ ರಸ್ತೆ ಆಗಿದೆ. ಹಾಗಾಗಿ ವಾಹನಗಳು ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೂ ಸಂಚರಿಸಬೇಕಾಗುತ್ತದೆ. ಹೀಗೆ ಅತ್ತಿಂದಿತ್ತ  ಚಲಿಸುವ ಸವಾರರಿಗೆ ಅವೈಜ್ಞಾನಿಕ ಕಾಮಗಾರಿ ಬೇಜವಾಬ್ದಾರಿತನ ಗೊಂದಲಕ್ಕೀಡು ಮಾಡಿದೆ. ಇದೇ ಇಲ್ಲಿನ ಅವಘಡಗಳಿಗೆ ಕಾರಣವಾಗಿದೆ. 

 ಕೆಲವೆಡೆ ನಾಮಫಲಕಗಳೂ ಕೂಡ ಇಲ್ಲ. ಇದ್ದರೂ ಹಲವೆಡೆ ಕಣ್ಣಿಗೆ ಕಾಣಲ್ಲ.  ರಸ್ತೆಗಳ ಮಧ್ಯೆಯೇ ಬೃಹತ್ ಹೊಂಡಗಳಾಗಿವೆ. ಇದಕ್ಕೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. 

click me!