ರೈಲಿನಲ್ಲಿ ಮಹಿಳೆ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಸಲಿ ಕಾರಣ ಕೇಳಿ ಪೊಲೀಸರು ಕಕ್ಕಾಬಿಕ್ಕಿ..!

By Suvarna News  |  First Published Jan 12, 2022, 10:23 AM IST

*    ರೈಲ್ವೆ ಪೊಲೀಸರು ಮಹಿಳೆಯನ್ನು ವಿಚಾರಿಸಿದಾಗ ಅಸಲಿ ಸಂಗತಿ ಬೆಳಕಿಗೆ
*    ಮಗುವನ್ನು ಮಲಗಿಸಲು ತನ್ನದೇ ವೇಲ್‌ನಿಂದ ಜೋಲಿ ಮಾಡಿಕೊಂಡು ಬೋಗಿಗೆ ಕಟ್ಟಿದ್ದ ಮಹಿಳೆ
*    ಮಕ್ಕಳ ಜತೆ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಎಂದು ಭಾವಿಸಿದ್ದ ರೈಲ್ವೆ ಇಲಾಖೆಯ ಸ್ವಚ್ಚತಾ ಸಿಬ್ಬಂದಿ


ಶಿವಮೊಗ್ಗ(ಜ.12):  ಜಿಲ್ಲೆಯ ಸಾಗರ(Sagara) ತಾಲೂಕಿನ ತಾಳಗುಪ್ಪದ(Talaguppa) ರೈಲಿನಲ್ಲಿ ಮಹಿಳೆ ಆತ್ಮಹತ್ಯೆ(Suicide) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.  ಹೌದು, ಈ ಪ್ರಕರಣ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು.  ಈ ಮೊದಲು ಬೋಗಿಯಲ್ಲೇ ಮಹಿಳೆ(Woman) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಹೇಳಲಾಗಿತ್ತು. ಆದರೆ, ಅಸಲಿ ಕಾರಣವೇ ಬೇರೆಯಾಗಿದೆ. ಪ್ರಕರಣದ ಸತ್ಯಾಸತ್ಯತೆ ಬಯಲಿಗೆ ಬಂದ ವೇಳೆ ರೈಲ್ವೆ ಪೊಲೀಸರಿಗೆ(Railway Police) ತುಸು ಇರಿಸು ಮುರಿಸಾಗಿದೆ. 

ಏನಿದು ಪ್ರಕರಣ?

Tap to resize

Latest Videos

ನಿವೇದಿತಾ ಎಂಬ ಮಹಿಳೆ ತನ್ನ ಮಗನ ಚಿಕಿತ್ಸೆಗಾಗಿ ಬೆಂಗಳೂರಿನಿಂದ(Bengaluru) ಶಿವಮೊಗ್ಗಕ್ಕೆ(Shivamogga) ಇಬ್ಬರು ಮಕ್ಕಳೊಂದಿಗೆ ರೈಲಿನಲ್ಲಿ(Train) ಹೊರಟಿದ್ದಳು. ರೈಲಿನಲ್ಲಿ ಮಕ್ಕಳೊಂದಿಗೆ ಬಂದ ತಾಯಿ ಗಾಡ ನಿದ್ದೆಗೆ ಜಾರಿದ್ದಳು. ಶಿವಮೊಗ್ಗದಲ್ಲಿ ಇಳಿಯಬೇಕಿದ್ದ ಆಕೆ ನಿದ್ರೆ ಕಾರಣಕ್ಕೆ ಸೀದಾ ತಾಳಗುಪ್ಪದವರೆಗೆ ಬಂದಿದ್ದಳು. ಬೆಳಿಗ್ಗೆ 7.30 ಕ್ಕೆ ರೈಲು ತಾಳಗುಪ್ಪ ತಲುಪಿದಾಗ ಆಕೆಗೆ ಎಚ್ಚರವಾಗಿದೆ. ಶಿವಮೊಗ್ಗದಲ್ಲಿ ಇಳಿಯಬೇಕಾದ ಆಕೆ ತಾಳಗುಪ್ಪದಲ್ಲಿ ಇಳಿದಾಗ ಆತಂಕಗೊಂಡಿದ್ದಳು. ಪ್ರಯಾಣಿಕರು(Passengers) ರೈಲು ಇಳಿದ ಮೇಲೆ ಸಿಬ್ಬಂದಿ ಬೋಗಿಯನ್ನು ಬಂದ್ ಮಾಡಿದ್ದರು. ಮಗುವನ್ನು ಮಲಗಿಸಲು ತನ್ನದೇ ವೇಲ್ ನಿಂದ ಜೋಲಿ ಮಾಡಿಕೊಂಡು ಬೋಗಿಗೆ ಕಟ್ಟಿದ್ದಳು. ಇದನ್ನ ನೋಡಿದ ರೈಲ್ವೆ ಇಲಾಖೆಯ ಸ್ವಚ್ಚತಾ ಸಿಬ್ಬಂದಿ ಮಕ್ಕಳ ಸಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಎಂದು ಭಾವಿಸಿ ಬಾಗಿಲು ತೆಗೆಯುವಂತೆ ಒತ್ತಾಯಿಸಿದ್ದರು.

ವೈದ್ಯನಿಂದ ಲೈಂಗಿಕ ಕಿರುಕುಳ: ಆಸ್ಪತ್ರೆ ಮಹಿಳೆ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಇಬ್ಬರು ಮಕ್ಕಳನ್ನು ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾ ಎಂದು ಭಾವಿಸಿ ಸಿಬ್ಬಂದಿ ಗರಂ ಆಗಿ ಮಹಿಳೆಯ ಕಪಾಳಕ್ಕೆ ಬಾರಿಸಿದ್ದರು.  ಆದರೆ ಆಕೆ ಮಕ್ಕಳು ರೈಲು ಬೋಗಿಯನ್ನು ದಾಟಿ ಹೋಗಬಾರದು ಎಂದು ಬಾಗಿಲು ಹಾಕಿರುವುದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾಳೆ. ಆದ್ರೆ ನಿವೇದಿತಾಳನ್ನು ರೈಲಿನಿಂದ ಹೊರತರಲು ಸಿಬ್ಬಂದಿ ನಡೆಸಿದ ಪ್ರಯತ್ನವನ್ನ ಸ್ಥಳೀಯರು ವಿಡಿಯೋ ಮಾಡಿದ್ದರು. ಇದರಿಂದ ನಿವೇದಿತಾ ರೈಲು ಬೋಗಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದಳು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ(Social Media) ಹರದಾಡಿತ್ತು. ರೈಲ್ವೆ ಸಿಬ್ಬಂದಿ ರಕ್ಷಣೆ ಮಾಡಿ ಮಹಿಳೆ ಕಾಪಾಡಿದರು ಎಂದು ವೈರಲ್‌ ಆಗಿತ್ತು. 

ರೈಲ್ವೆ ಪೋಲಿಸರು ವಿಚಾರಣೆ ನಡೆಸಿದ ಬಳಿಕ ನಿವೇದಿತಾ ಹಾಗೂ ಇಬ್ಬರು ಮಕ್ಕಳನ್ನು ಕಳುಹಿಸಿದ್ದಾರೆ. ನಿವೇದಿತಾ ಮೂಲತಃ ದಾವಣಗೆರೆ(Davanagere) ಜಿಲ್ಲೆಯ ಹೊನ್ನಾಳಿಯವರಾಗಿದ್ದು(Honnali) ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಗನ ಕೈ ಮೂಳೆ ಮುರಿದಿದ್ದರಿಂದ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಹೊರಟಿದ್ದಳು ಎಂದು ತಿಳಿದು ಬಂದಿದೆ. ಇದೀಗ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ(Meggan Hospital) ಚಿಕಿತ್ಸೆಗೆ ಮಗನನ್ನು ದಾಖಲಿಸಿದ್ದಾರೆ.

ನನ್ನ ಸಾವಿಗೆ ನನ್ನ ಪಕ್ಷದ ಮುಖಂಡರೇ ಕಾರಣ : ಸ್ಟೇಟಸ್ ಹಾಕಿ ಕೈ ಸದಸ್ಯೆ ಆತ್ಮಹತ್ಯೆ ಯತ್ನ

ಪ್ರೀತಿಸಿ ಕೈಕೊಟ್ಟ ಯುವತಿ: ಮನನೊಂದು ಪ್ರಿಯಕರ ಆತ್ಮಹತ್ಯೆಗೆ ಯತ್ನ

ಹಾಸನ: ಪ್ರೀತಿಸಿದ(Love) ಯುವತಿ‌ ಕೈಕೊಟ್ಟ ಹಿನ್ನೆಲೆಯಲ್ಲಿ ಮನನೊಂದ‌ ಪ್ರೇಮಿಯೊಬ್ಬ ವಿಷ(Poison) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನ(Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷದ ನ.27 ರಂದು ನಡೆದಿತ್ತು. ಜೀವಿತ್(29) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಯಾಗಿದ್ದಾನೆ. 

ಕಳೆದ 9 ವರ್ಷಗಳಿಂದ ಪ್ರೀತಿಸಿ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾಳೆ ಎಂದು ಯುವತಿ ವಿರುದ್ಧ ಜೀವಿತ್ ಆರೋಪಿಸಿದ್ದಾನೆ(Allegation). ಜೀವಿತ್ ತಮ್ಮದೇ ಗ್ರಾಮದ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದನು. ಈಗ ಮನೆಯವರ ಒತ್ತಡದಿಂದ ಆಕೆ ತನ್ನನ್ನು ನಿರಾಕರಿಸುತ್ತಿದ್ದಾಳೆ ಎಂದು ಆರೋಪಿದ್ದನು.  ಕಳೆದ 9 ವರ್ಷಗಳಿಂದ ಜೀವಿತ್‌ ಆಕೆಯ ಹುಟ್ಟು ಹಬ್ಬಕ್ಕೆ(Birthday) ತಾನೇ ಕೇಕ್‌‌ಕಟ್ ಮಾಡಿಸುತ್ತಿದ್ದನು. ನಾನೇ ಆಕೆಗೆ ಮೊದಲ ಶುಭಾಶಯ(Wish) ಹೇಳುತ್ತಿದ್ದೆ, ನಿನ್ನೆ ಆಕೆಯ ಹುಟ್ಟು ಹಬ್ಬದಂದು ಸಿಗಲಿಲ್ಲ ಎಂಬ ಕಾರಣಕ್ಕೆ ನೊಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದನು. 
 

click me!