ಡೆಲ್ಲಿಯಿಂದ ನಡೆದೇ ಬಂದ್ರೂ ಮನೆ ಸೇರಿಸಿಕೊಳ್ಳದ ಹೆತ್ತವರು; ಆಮೇಲೆ ಆಗಿದ್ದು ಬೇರೆಯದ್ದೇ ಕಥೆ..!

By Naveen Kodase  |  First Published May 18, 2020, 2:27 PM IST

ಡೆಲ್ಲಿಯಿಂದ ಬಂದಿದ್ದ ಮಗನನ್ನು ಮನೆಯಿಂದ ಹೊರಗಿಟ್ಟ ಪೋಷಕರು. ಮೊದಲು ಕೊರೋನಾ ಟೆಸ್ಟ್ ಮಾಡಿಸಿಕೋ ಎಂದ ಹೆತ್ತವರು. ಮಾತು ಕೇಳದೇ 10 ದಿನ ಅಜ್ಜಿ ಮನೆಯಲ್ಲೇ ಉಳಿದುಕೊಂಡಿದ್ದ 31 ವರ್ಷದ ವ್ಯಕ್ತಿ. ಕೊನೆಗೂ ಕೊವಿಡ್ 19 ಟೆಸ್ಟ್ ಮಾಡಿಕೊಂಡ. ಆಮೇಲೇನಾಯ್ತು? ನೀವೇ ನೋಡಿ.


ಮಂಗಳೂರು(ಮೇ.18): ದೆಹಲಿಯಿಂದ ಕಾಲುನಡಿಗೆಯಲ್ಲೇ ಮಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಭಾನುವಾರ ಕೊರೋನಾ ಸೋಂಕಿರುವುದು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ವೊಂದು ಸಿಕ್ಕಿದ್ದು, ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ.

ಹೌದು, ಕಳೆದ 10 ದಿನಗಳ ಹಿಂದಷ್ಟೇ P 1094 ವ್ಯಕ್ತಿಯು ದೆಹಲಿಯಿಂದ ಕಾಲು ನಡಿಗೆಯಲ್ಲೇ ಹೊರಟು ಅಲ್ಲಲ್ಲಿ ಸಿಕ್ಕಸಿಕ್ಕ ವಾಹನಗಳಿಂದ ಡ್ರಾಪ್ ಪಡೆದು ಚೆಕ್ ಪೋಸ್ಟ್‌ಗಳನ್ನು ವಂಚಿಸಿ ಊರು ಸೇರಿಕೊಂಡಿದ್ದ. ಮಂಗಳೂರಿನ ಹೊರ ವಲಯದಲ್ಲಿರುವ ಜೆಪ್ಪು ಪಟ್ಣದಲ್ಲಿರುವ  ತಮ್ಮ ಮನೆಗೆ ಬಂದಾಗ ಆತನ ತಂದೆ-ತಾಯಿ ಮನೆಯೊಳಗೆ ಬರಲು ಅವಕಾಶ ನೀಡಿರಲಿಲ್ಲ. ಮೊದಲು ಹೋಗಿ ಕೋವಿಡ್ ಟೆಸ್ಟ್ ಮಾಡಿಸಿ, ಆ ಬಳಿಕ ಮನೆಗೆ ಬಾ ಎಂದು ಮಗನಿಗೆ ತಿಳಿ ಹೇಳಿದ್ದರು.

Tap to resize

Latest Videos

ಬಳಿಕ 31 ವರ್ಷದ ಸೋಂಕಿತ ತಮ್ಮ ಅಜ್ಜಿಯ ಮನೆಯಲ್ಲಿ ಕಳೆದ 10 ದಿನಗಳಿಂದ ವಾಸವಾಗಿದ್ದ. ಬಳಿಕ ಮನೆಯವರ ಒತ್ತಾಯದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಭಾನುವಾರ ಬಂದ ಕೊರೋನಾ ಟೆಸ್ಟ್ ಫಲಿತಾಂಶದಲ್ಲಿ ಆ ವ್ಯಕ್ತಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ದುಬೈನಿಂದ ಮಂಗಳೂರಿಗೆ ಆಗಮಿಸಲಿದೆ ಮತ್ತೊಂದು ವಿಮಾನ

ದೆಹಲಿಯಿಂದ ಬಂದ ವ್ಯಕ್ತಿ ಬಂಟ್ವಾಳ ಸೇರಿದಂತೆ ಹಲವೆಡೆ ಓಡಾಡಿದ್ದಾನೆ ಎನ್ನಲಾಗಿದೆ. ಸೋಂಕಿತರ ವ್ಯಕ್ತಿಯ ಈ ಕೃತ್ಯದಿಂದಾಗಿ ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ. 
 
 

click me!