ಸಿಕ್ಸರ್ ಮೂಲಕ ಗ್ರೀನ್ ಝೋನ್ ರಾಯಚೂರಿನಲ್ಲಿ ಕೊರೋನಾ ಖಾತೆ ಓಪನ್

By Suvarna NewsFirst Published May 18, 2020, 2:23 PM IST
Highlights

ಇಷ್ಟು ದಿನ ಗ್ರೀನ್ ಝೋನ್‌ನಲ್ಲಿದ್ದ ರಾಯಚೂರು ಜಿಲ್ಲೆಯಲ್ಲಿ ದಿಢೀರ್ ಸಿಕ್ಸರ್ ಬಾರಿಸುವ ಮೂಲಕ ಕೊರೋನಾ ತನ್ನ ಖಾತೆ ಓಪನ್ ಮಾಡಿದೆ.

ರಾಯಚೂರು, (ಮೇ.18): ಇಡಿ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ವೈರಸ್, ಗ್ರೀನ್ ಝೋನ್ ರಾಯಚೂರು ಜಿಲ್ಲೆಗೆ ವಕ್ಕರಿಸಿದೆ. ಅದು ಒಂದೇ ಬಾರಿಗೆ ಸಿಕ್ಸರ್ ಮೂಲಕ ಕೊರೋನಾ ಖಾತೆ ಓಪನ್ ಆಗಿರುವುದು ಜಿಲ್ಲೆಯಲ್ಲಿ ಆತಂಕ ಮನೆಮಾಡಿದೆ.

ಹೌದು... ಕಳೆದ 50 ದಿನಗಳಿಂದ ಯಾವುದೇ ಕೊರೋನಾ ಪಾಸಿಟಿವ್‌ ಪ್ರಕರಣ ಇಲ್ಲದ ಜಿಲ್ಲೆಯಾಗಿದ್ದ ರಾಯಚೂರಿಗೆ ಇದೀಗ ದಿಢೀರ್ 6 ಕೊರೋನಾ ಕೇಸ್ ಪತ್ತೆಯಾಗಿವೆ.

ಬಸ್ ಸಂಚಾರಕ್ಕೆ ಸಿಕ್ತು ಗ್ರೀನ್ ಸಿಗ್ನಲ್: ಭಾನುವಾರ ಇನ್ನು ಫುಲ್ ಬಂದ್

ಮಹಾರಾಷ್ಟ್ರದಿಂದ ಮೇ 13 ರಂದು ರಾಯಚೂರು ಜಿಲ್ಲೆಗೆ ಆಗಮಿಸಿದವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇವರಲ್ಲಿ 6 ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ

ರಾಯಚೂರು ನಗರದ ಆಟೋನಗರದ ಒಂದೇ ಕುಟುಂಬದ ಇಬ್ಬರು‌ ಮಹಿಳೆ ಹಾಗೂ ಒಬ್ಬ ಪುರುಷನಿಗೆ ಸೋಂಕು ತಗುಲಿದ್ರೆ, ದೇವದುರ್ಗ ತಾಲೂಕಿನ ಸುಲ್ತಾನಪುರದ ಒಬ್ಬರಿಗೆ, ಮಸರಕಲ್ ಗ್ರಾಮದ ಒಬ್ಬ ಮಹಿಳೆ ( 36 ) ಹಾಗೂ ಒಬ್ಬ ಪುರುಷನಿಗೆ( 37 )  ವೈರಸ್ ಅಟ್ಯಾಕ್ ಆಗಿದೆ. 

ಈ ಪೈಕಿ ಇಬ್ಬರು ದೇವದುರ್ಗ ತಾಲೂಕಿನ ಮಸರಕಲ್ ಮೊರಾರ್ಜಿ ದೇಸಾಯಿ ಶಾಲೆಯ ಕ್ವಾರಂಟೈನ್ ನಲ್ಲಿದ್ದವರು, ಉಳಿದ ನಾಲ್ವರು ರಾಯಚೂರು ನಗರದಲ್ಲಿ ಕ್ವಾರಂಟೈನ್ ನಲ್ಲಿದ್ದರು. 

ಸದ್ಯ ಆರು ಜನರ ಆರೋಗ್ಯ ಚಿಕಿತ್ಸೆಗೆ ನಿಯೋಜಿತ ಕೋವಿಡ್ ಆಸ್ಪತ್ರೆಗೆ‌ ಸ್ಥಳಾಂತರಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ತಿಳಿಸಿದ್ದಾರೆ.

click me!