ಇಂದು ‘ಬೀದರ್‌ ಉತ್ಸವ’ಕ್ಕೆ ಅದ್ಧೂರಿ ಚಾಲನೆ

By Kannadaprabha News  |  First Published Jan 7, 2023, 2:30 AM IST

ಉತ್ಸವ ಉದ್ಘಾಟನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಕೃಷ್ಣಾ ರೆಡ್ಡಿ, ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಆಗಮನ. ಖ್ಯಾತ ಕಲಾವಿದರಿಂದ ಕಲೆ, ಸಾಹಿತ್ಯ ಸಂಗೀತದ ರಸದೌತಣ. ನೂತನ ಅನುಭವ ಮಂಟಪದ ಮಾದರಿಯಲ್ಲಿ ವೇದಿಕೆಯ ನಿರ್ಮಾಣ ಕಾರ್ಯ. 


ಬೀದರ್‌(ಜ.07):  ಇಂದಿನಿಂದ ಬೀದರ್‌ ಉತ್ಸವಕ್ಕೆ ಚಾಲನೆ ಸಿಗಲಿದ್ದು, ಕಳೆದ 9 ವರ್ಷಗಳಿಂದ ಈ ಉತ್ಸವಕ್ಕಾಗಿ ಕಾಯುತ್ತಿದ್ದ ಜನರಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಉತ್ಸವವು ಜ. 7, 8 ಮತ್ತು 9ರಂದು ಮೂರು ದಿನಗಳ ಕಾಲ ನಡೆಯಲಿದ್ದು ಹಬ್ಬದ ವಾತಾವರಣ ಎಲ್ಲೆಡೆ ನಿರ್ಮಾಣವಾಗಿದೆ.

ಜ.7ರಂದು ಸಂಜೆ 5.30ರಿಂದ ಬೀದರ್‌ ಕೋಟೆಯ ಆವರಣದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಸುಮಾರು 20 ಸಾವಿರ ಆಸನಗಳ ವ್ಯವಸ್ಥೆ ಇರುವ ಇಲ್ಲಿಗೆ ಸಾರ್ವಜನಿಕರು ಆದಷ್ಟುಬೇಗ ಕೋಟೆಯೊಳಗೆ ಆಗಮಿಸಬೇಕು. ಇಲ್ಲವಾದಲ್ಲಿ ವಾಹನ ದಟ್ಟಣೆ, ಜನದಟ್ಟಣೆಯಿಂದ ಬೇಗ ಕಾರ್ಯಕ್ರಮ ವೀಕ್ಷಿಸಲು ಆಗಲಿಕ್ಕಿಲ್ಲ. ಉತ್ಸವದಲ್ಲಿ ರೈತ ಉತ್ಸವ, ಗಾಳಿಪಟ ಉತ್ಸವ, ಸ್ಥಳೀಯ ಸಂಗೀತ ನೃತ್ಯ ಉತ್ಸವ, ಉದ್ಯೋಗ ಮೇಳ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆæ. ಉತ್ಸವದ ಮುಖ್ಯ ವೇದಿಕೆಯಲ್ಲಿ ಸ್ಥಳೀಯ ಕಲಾವಿದರ ಪ್ರದರ್ಶನಕ್ಕಾಗಿ ಸಂಜೆ 5.30ರಿಂದ 7.15ರ ವರೆಗೆ ಕಾರ್ಯಕ್ರಮಗಳು ನಡೆಯಲಿವೆ.

Latest Videos

undefined

ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ: ಕೇಂದ್ರ ಸಚಿವ ಖೂಬಾ

ಶನಿವಾರ ಸಂಜೆ 7.15ರ ನಂತರ ಬೀದರ್‌ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರದ ಪ್ರವಾಸೋದ್ಯಮ ಸಚಿವ ಕಿಶನ್‌ರೆಡ್ಡಿ ಅವರು ಆಗಮಿಸಲಿದ್ದಾರೆ ಹಾಗೂ ಬೀದರ್‌ ಉತ್ಸವದ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ.

ಇಂದಿನ ಹೈಲೈಟ್ಸ್‌ ಸಂಜೀತ್‌ ಹೆಗ್ಡೆ, ಆಸೀಸ್‌ ಕೌರ್‌:

ರಾತ್ರಿ 8ಕ್ಕೆ ಸಂಗೀತ ಸಂಜೆಯನ್ನು ಖ್ಯಾತ ಹಿನ್ನೆಲೆ ಗಾಯಕ ಸಂಜಿತ ಹೆಗಡೆ ಬೆಂಗಳೂರು, ಆಸಿಸ್‌ ಕೌರ್‌ ಮುಂಬಯಿ ಅವರು ನಡೆಸಿಕೊಡಲಿದ್ದಾರೆ. ಹಾಗೂ ರಾತ್ರಿ 10ಕ್ಕೆ ಖವ್ವಾಲಿ ಸಾಬರಿ ಬ್ರರ್‌ಸ್‌ ಜೈಪೂರ ಅವರು ನಡೆಸಿಕೊಡಲಿದ್ದಾರೆ.
ಬೀದರ್‌ ಕೋಟೆಯ ಮುಖ್ಯ ಪ್ರವೇಶ ದ್ವಾರದ ಮೂಲಕ ಸಾರ್ವಜನಿಕರಿಗೆ ಪ್ರವೇಶವಿದ್ದು ದಿಲ್ಲಿ ದರ್ವಾಜದ ಮೂಲಕ ಕಾರ್ಡ್‌ದಾರರಿಗೆ ಪ್ರವೇಶವಿರುತ್ತದೆ. ಈ ಸಲದ ವಿಶೇಷತೆ ಮುಖ್ಯ ವೇದಿಕೆಯ ಬ್ಯಾಕ್‌ ಡ್ರಾಪ್‌ ನೂತನ ಅನುಭವ ಮಂಟಪ ಇರುತ್ತದೆ. 90ಕೋಟಿ ರು. ವೆಚ್ಚದಲ್ಲಿ ಬೀದರ್‌ ನಗರದಲ್ಲಿ ಕೆಲಸ ಕಾರ್ಯಗಳು ನಡೆದಿವೆ.

ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಬೀದರ್‌ ನಗರದಲ್ಲಿ ಸಿಟಿ ಬಸ್‌ಗಳು ಮತ್ತು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಉತ್ಸವಕ್ಕೆ ಬಂದು ಹೋಗಲು ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಉತ್ಸವಕ್ಕೆ ಬಂದು ಹೋಗುವ ಸಾರ್ವಜನಿಕರಿಗೆ 45ರು.ನಲ್ಲಿಯೇ ಊಟ ಕೊಡಲು ಹೋಟೆಲ್‌ ಮಾಲೀಕರು ಒಪ್ಪಿಕೊಂಡಿರುತ್ತಾರೆ. ಬೀದರ್‌ ಉತ್ಸವವು ಜನರ ಉತ್ಸವವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಕರೆ ನೀಡಿದ್ದಾರೆ.

click me!