ಬೀದರ್: ಮದುವೆ ಕಾರ್ಡ್ ಕೊಡಲು ಹೋದವನಿಗೆ ಮಕ್ಕಳ ಕಳ್ಳನೆಂಬ ಹಣೆಪಟ್ಟಿ!

ಬೀದರ್‌ನಲ್ಲಿ ಮದುವೆ ಕಾರ್ಡ್ ಕೊಡಲು ಹೋದ ಯುವಕನಿಗೆ ವಿಳಾಸ ಸಿಗದೆ ಮಕ್ಕಳ ಬಳಿ ವಿಚಾರಿಸಿದ್ದಕ್ಕೆ ಮಕ್ಕಳ ಕಳ್ಳನೆಂದು ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಮದುವೆ ಕಾರ್ಡ್ ಕೊಡಲು ಬಂದಿದ್ದು ಎಂದು ತಿಳಿದುಬಂದಿದೆ.

Bidar man child thief label who gone with wedding card sat

ಬೀದರ್ (ಏ.14): ಮದುವೆ ಸೀಸನ್ ಆರಂಭವಾಗಿದ್ದು, ಊರೂರಿಗೆ ಅಲೆದಾಡಿ ಮದುವೆ ಕಾರ್ಡ್ ಕೊಡುವುದಕ್ಕೆ ಹೋಗುವುದು ಸಾಮಾನ್ಯ. ಅದೇ ರೀತಿ ಬೀದರ್‌ನಲ್ಲಿ ಮದುವೆ ಕಾರ್ಡ್ ಕೊಡಲು ಹೋಗಿದ್ದ ಯುವಕ ಅಡ್ರೆಸ್ ಸಿಗದೇ ಅಲ್ಲಿ ಆಟವಾಡುತ್ತಿದ್ದ ಮಕ್ಕಳ ಬಳಿ ಅಡ್ರೆಸ್ ವಿವಾರಿಸಿದ್ದಾನೆ. ಆತನನ್ನೇ ಮಕ್ಕಳ ಕಳ್ಳನೆಂದು ಬೀದರ್‌ನ ಜನತೆ ಬಿಂಬಿಸಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಬೀದರ್‌ನಲ್ಲಿ ಹಾಡಹಗಲೇ ಮಕ್ಕಳನ್ನ ಅಪಹರಿಸಲು ಖದೀಮನೊಬ್ಬನು ಯತ್ನಿಸಿದ್ದಾರೆ. ಬೀದರ್‌ನ ವಿದ್ಯಾನಗರ ಬಡಾವಣೆ ಮನೆಯೊಂದಕ್ಕೆ ಅಪರಿಚಿತ ಯುವಕ ನುಗ್ಗಿದ್ದಾನೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಆಟ ಆಡುತ್ತಿರುವ ಮಕ್ಕಳನ್ನ ಮಾತನಾಡಿಸುತ್ತಾ ಮನೆಗೆ ನುಗ್ಗಿದ್ದಾನೆ. ಯುವಕನ ಅಸಭ್ಯ ವರ್ತನೆಗೆ ಕಂಡು ಪೋಷಕರ ಮಕ್ಕಳು ಗಮನಕ್ಕೆ ತಂದಿದ್ದಾರೆ. ಪೋಷಕರು ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆ ಸ್ಥಳದಿಂದ ಯುವಕ ಓಡಿ ಹೋಗಿದ್ದಾನೆ. ಯುವಕನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಅನುಮಾನಗೊಂಡ ಪೋಷಕರು ಬಿದರ್ ನಗರದ ಗಾಂಧಿ ಗಂಜ್ ಠಾಣೆಗೆ ದೂರು ನೀಡಿದ್ದರು.

Latest Videos

ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನು ಅಪಹರಿಸಿ, ಕೆಡಿಸಿ ಕೊಲೆ ಮಾಡಿದ ಘಟನೆ ನಡೆದಿದ್ದರಿಂದ, ಬೀದರ್ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಇನ್ನು ಪೊಲೀಸರು ಶಂಕಿತ ಯುವಕನನ್ನು ಪತ್ತೆ ಹಚ್ಚಿ ವಿಚಾರಣೆ ಮಾಡಿದ್ದಾರೆ. ಆಗ, ಬೀದರ್‌ ನಗರದಲ್ಲಿ ನಡೆದ ಬಾಲಕಿಯ ಅಪಹರಣಕ್ಕೆ ಯುವಕನ ಯತ್ನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಕುರಿತು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ (Bidar District Superintendent of Police Pradeep Gunti)  ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Narendra Modi: ಕರ್ನಾಟಕದಲ್ಲಿ SC/ST, ಒಬಿಸಿಗೆ ಅನ್ಯಾಯ ಮಾಡಿ, ಮುಸ್ಲಿಮರಿಗೆ ಕಾಂಗ್ರೆಸ್‌ ಮೀಸಲಾತಿ ನೀಡಿದೆ!

ಬೀದರ್ ನಗರದಲ್ಲಿ ಮಕ್ಕಳ ಕಿಡ್ನಾಪ್ ಮಾಡಲು ಬಂದಿದ್ದನೆಂಬ ಅಪರಿಚಿತ ಯುವಕ ಬೀದರ್ ತಾಲೂಕಿನ ಔರಾದ್ ಸಿರ್ಸಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ್. ತಂಗಿಯ ಮದುವೆ ನಿಮಿತ್ತು ವೆಡ್ಡಿಂಗ್ ಕಾರ್ಡ್ ಕೊಡಲು ಬೀದರ್‌ನ ವಿದ್ಯಾನಗರಕ್ಕೆ ಬಂದಿದ್ದನು. ಅಡ್ರೆಸ್ ಕನ್ಪ್ಯೂಸ್ ಆಗಿ ಮಕ್ಕಳನ್ನ ಕೇಳಿದ್ದಾನೆ. ಆ ಮಕ್ಕಳು ಹೋಗಿ ಪೋಷಕರಿಗೆ ತಿಳಿಸಿದ್ದು, ಪೋಷಕರು ಗಾಬರಿಯಿಂದ ಓಡಿ ಬಂದಿದ್ದಾರೆ. ಪೋಷಕರು ಜೋರಾಗಿ ಕೂಗಿಕೊಂಡು ಬಂದಿದ್ದಕ್ಕೆ ಹೆದರಿ, ಅಲ್ಲಿ ಬೇರೆ ಏನೋ ಘಟನೆ ನಡೆದಿರುಬೇಕು ಎಂದು ಯುವಕ ಅಲ್ಲಿಂದ ಹೊರಟು ಹೋಗಿದ್ದಾನೆ.

ಈ ಬಗ್ಗೆ ಯುವಕನನ್ನು ವಶಕ್ಕೆ ಪಡೆದು ಯುವಕನನ್ನು ವಿಚಾರಿಸಿದಾಗ ತಾನು ತಂಗಿಯ ಮದುವೆ ಕಾರ್ಡ್ ಕೊಡಲಿಕ್ಕೆ ಬಂದಿದ್ದಾಗಿ ತಿಳಿಸಿದ್ದಾನೆ. ಏಪ್ರಿಲ್ 23ನೇ ತಾರೀಖಿನಂದು ಚಿಕ್ಕಪ್ಪನ ಮಗಳ ಮದುವೆ ಇದೆ. ಈ ಹಿನ್ನೆಲೆಯಲ್ಲಿ ಮದುವೆ ಆಮಂತ್ರಣ ಪತ್ರಿಕೆ ಕೊಡಲು ಬಂದಿದ್ದಾಗಿ ತಿಳಿಸಿದ್ದಾನೆ. ಆದರೆ, ಬಾಲಕಿ ಅಪಹರಣ, ಅಸಭ್ಯ ವರ್ತನೆ ನಡೆದಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬಡವರನ್ನು ಬಗೆದಿದ್ದಾಯ್ತು, ಪ್ರಕೃತಿಯ ಒಡಲನ್ನೂ ಬಗೆದ ಕಾಂಗ್ರೆಸ್‌ ಸರ್ಕಾರ!

ರಾಜ್ಯದಲ್ಲಿ ಮಕ್ಕಳ ಕಳ್ಳರದ್ದೇ ಭಯ: ರಾಜ್ಯದಲ್ಲಿ ಇದೀಗ ಬೇಸಿಗೆ ರಜೆ ಆರಂಭವಾಗಿದ್ದು, ಕೆಲಸಗಳು ಸೇರಿದಂತೆ ಮಕ್ಕಳನ್ನು ದಿನಪೂರ್ತಿ ಕಾಳಜಿ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಹೀಗಾಗಿ, ಪೋಷಕರು ತಮ್ಮ ದೈನಿಕ ಕೆಲಸದ ಜೊತೆಗೆ ಮಕ್ಕಳನ್ನೂ ಕೂಡ ಕಾಳಜಿ ಮಾಡಬೇಕು. ಇಲ್ಲವಾದಲ್ಲಿ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಾಜ್ಯದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಕಡೆಗೆ ಮಕ್ಕಳು ನದಿ, ಕೆರೆ, ಕೃಷಿ ಹೊಂಡ ಅಥವಾ ಬಾವಿಗಳಲ್ಲಿ ಈಜಾಡಲು ಹೋಗು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿರುವ ಘಟನೆಗಳು ವರದಿ ಆಗುತ್ತಲೇ ಇವೆ. ಜೊತೆಗೆ, ಇದೀಗ ಹುಬ್ಬಳ್ಳಿಯಲ್ಲಿ 5 ವರ್ಷದ ಮಗುವನ್ನು ಕಿಡ್ನಾಪ್ ಮಾಡಿ ರಕ್ಕಸ ದಾಳಿ ಮಾಡಿದ ಕಾಮುಕ ಮಗುವನ್ನು ಕೊಲೆ ಮಾಡಿ ಪರಾರಿ ಆಗಿದ್ದಾನೆ. ಈ ಘಟನೆಯ ಬೆನ್ನಲ್ಲಿಯೇ ರಾಜ್ಯದ ಜನ ಭಯಭೀತರಾಗಿದ್ದಾರೆ.

vuukle one pixel image
click me!