ರಾಜ್ಯ ಮಟ್ಟದ ಕರಾಟೆಯಲ್ಲಿ ಭಟ್ಕಳದ ಬಿ.ವಿ. ರಾಹುಲ್‌ಗೆ ಚಿನ್ನದ ಪದಕ: ರಾಷ್ಟ್ರ ಮಟ್ಟಕ್ಕೆ ಆಯ್ಕೆ!

Published : Nov 22, 2026, 07:39 PM IST
bhatkal student bv rahul wins gold

ಸಾರಾಂಶ

ದೇವನಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ ಬಿ.ವಿ. ರಾಹುಲ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಸಾಧನೆಯ ಮೂಲಕ ಇವರು ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ (ನ.22): ದೇವನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ-2026ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ವಿದ್ಯಾರ್ಥಿ ಬಿ.ವಿ. ರಾಹುಲ್ ಚಿನ್ನದ ಪದಕ ಮುಡಿಗೇರಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಮೂಲಕ ಅವರು ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ದೇವನಹಳ್ಳಿಯ ಜೂನಿಯರ್ ಕಾಲೇಜು ಆವರಣದಲ್ಲಿ ನವೆಂಬರ್ 21 ಮತ್ತು 22ರಂದು ನಡೆದ 17 ವರ್ಷದೊಳಗಿನ ಬಾಲಕರ -66 ಕೆಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಿ.ವಿ. ರಾಹುಲ್, ಎದುರಾಳಿಗಳನ್ನು ಮಣಿಸಿ ಪ್ರಥಮ ಸ್ಥಾನದೊಂದಿಗೆ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರು.

ಭಟ್ಕಳದ ಪ್ರತಿಭೆ

ಸಾಧಕ ಬಿ.ವಿ. ರಾಹುಲ್ ಭಟ್ಕಳದ ಆನಂದ್ ಆಶ್ರಮ ಶಾಲೆಯ 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ಭಟ್ಕಳದ ಯುವ ಉದ್ಯಮಿ ಹಾಗೂ ನಾಮಧಾರಿ ಸಮಾಜದ ಉಪಾಧ್ಯಕ್ಷ ವಿನಾಯಕ್ ನಾಯ್ಕ್ ಮತ್ತು ಕಮಲಾ ನಾಯ್ಕ್ ದಂಪತಿಯ ಪುತ್ರರಾಗಿದ್ದಾರೆ.

ರಾಜ್ಯ ಮಟ್ಟದಲ್ಲಿ ಸ್ವರ್ಣ ಸಾಧನೆ ಮೆರೆದು ರಾಷ್ಟ್ರ ಮಟ್ಟಕ್ಕೆ ಲಗ್ಗೆ ಇಟ್ಟಿರುವ ವಿದ್ಯಾರ್ಥಿ ರಾಹುಲ್‌ಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.

PREV
Read more Articles on
click me!

Recommended Stories

ಊರಿಗೆ ಹೋಗಲು ತಪ್ಪಿದ ಬಸ್​ ಟಿಕೆಟ್‌ನಿಂದ ಹುಟ್ಟಿತು 800 ಕೋಟಿಯ ಉದ್ಯಮ: 25 ವರ್ಷ ಎಂಜಿನಿಯರ್​ನ RedBus ಸ್ಟೋರಿ
ಸರ್ಕಾರ ಮಹಿಳಾ ಸಚಿವರಿಲ್ಲದೇ ಸದನ ನಡೆಸುವುದು ಹೆಣ್ಣುಕುಲಕ್ಕೆ ಅಗೌರವ: ಡಾ. ನಾಗಲಕ್ಷ್ಮಿ ಚೌಧರಿ