ತಿರುಪತಿ ಬಸ್‌ ಓಡಿಸಿದ ಭಟ್ಕಳ ಶಾಸಕ ನಾಯ್ಕ್!

Published : Dec 31, 2019, 07:57 AM IST
ತಿರುಪತಿ ಬಸ್‌ ಓಡಿಸಿದ ಭಟ್ಕಳ ಶಾಸಕ ನಾಯ್ಕ್!

ಸಾರಾಂಶ

ತಿರುಪತಿ ಬಸ್‌ ಓಡಿಸಿದ ಭಟ್ಕಳ ಶಾಸಕ ಸುನಿಲ್ ನಾಯ್ಕ್!| ಬಸ್ ಉದ್ಘಾಟನೆ ವೇಳೆ ಘಟನೆ

ಭಟ್ಕಳ[ಡಿ.31]: ಭಟ್ಕಳ ಬಸ್‌ ನಿಲ್ದಾಣದಲ್ಲಿ ಸೋಮವಾರ ಭಟ್ಕಳ-ತಿರುಪತಿ ನೂತನ ಬಸ್ಸನ್ನು ಉದ್ಘಾಟಿಸಿದ ಶಾಸಕ ಸುನೀಲ್‌ ನಾಯ್ಕ ಅದೇ ಬಸ್ಸನ್ನು ಕೆಲಕಾಲ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಶಾಸಕರು ಬಸ್ಸನ್ನು ಉದ್ಘಾಟನೆ ಮಾಡಿದ ಬಳಿಕ ಬಸ್ಸಿನೊಳಗೆ ಹೋಗಿ ಸೀದಾ ಚಾಲಕನ ಸೀಟಿನಲ್ಲಿ ಕುಳಿತು ಬಸ್ಸನ್ನು ಚಾಲೂ ಮಾಡಿಯೇಬಿಟ್ಟರು. ಬಸ್ಸನ್ನು ಚಾಲನೆ ಮಾಡುತ್ತಾ ನಿಲ್ದಾಣದಿಂದ ಪಟ್ಟಣದ ಹೃದಯ ಭಾಗವಾದ ಸಂಶುದ್ದೀನ ವೃತ್ತ ಒಯ್ದು ವಾಪಸ್‌ ನಿಲ್ದಾಣಕ್ಕೆ ತಂದು ನಿಲ್ಲಿಸಿದರು.

ಶಾಸಕರೂ ಚೆನ್ನಾಗಿಯೇ ಬಸ್‌ ಓಡಿಸುತ್ತಾರೆ ಎಂದು ಹಲವರು ಹರ್ಷ ವ್ಯಕ್ತಪಡಿಸಿದರು. ಶಾಸಕರು ಬಸ್‌ ಚಾಲನೆ ಸಂದರ್ಭದಲ್ಲಿ ಬಸ್ಸಿನೊಳಗೆ ಉದ್ಘಾಟನೆಗೆ ಬಂದಿದ್ದ ಮುಖಂಡರು, ಮತ್ತಿತರರಿದ್ದರು.

PREV
click me!

Recommended Stories

ಹಾಲು, ಬಸ್‌ ದರ ಏರಿಕೆಯ ಬಳಿಕ ದೀಪಾವಳಿ ಹಬ್ಬಕ್ಕೆ ಸರ್ಕಾರದಿಂದ ಮತ್ತೊಂದು ಬರೆ, ನಂದಿನಿ ತುಪ್ಪ ಲೀಟರ್‌ಗೆ 100 ರೂಪಾಯಿ ಏರಿಕೆ!
ನಾಳೆ ಬೆಳಗಾವಿಗೆ ಕೋಟಿ ಕೋಟಿ ಸಂಖ್ಯೆಯಲ್ಲಿ ರೈತರು? ಪ್ರತಿ ಟನ್‌ಗೆ 5000 ಘೋಷಿಸದ ಹಿನ್ನೆಲೆ ಹೋರಾಟ ತೀವ್ರ!