ಹೊಸ ವರ್ಷಕ್ಕೆ ರೈತರಿಗೆ ಬಂಪರ್ ಗಿಫ್ಟ್; ಹಾಲು ಖರೀದಿಯಲ್ಲಿ 2 ರೂ ಹೆಚ್ಚಳ!

Published : Dec 30, 2019, 03:58 PM ISTUpdated : Dec 30, 2019, 06:07 PM IST
ಹೊಸ ವರ್ಷಕ್ಕೆ ರೈತರಿಗೆ ಬಂಪರ್ ಗಿಫ್ಟ್; ಹಾಲು ಖರೀದಿಯಲ್ಲಿ 2 ರೂ ಹೆಚ್ಚಳ!

ಸಾರಾಂಶ

ಹೊಸ ವರ್ಷ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಆಫರ್ ಘೋಷಣೆ ಸಾಮಾನ್ಯ. ಆದರೆ ಬೆಂಗಳೂರು ಹಾಲು ಒಕ್ಕೂಟ, ರೈತರಿಗೆ ಭರ್ಜರಿ ಗಿಫ್ಟ್ ಘೋಷಿಸಿದೆ. 2020ರ ಜನವರಿಯಿಂದಲೇ ನೂತನ ಯೋಜನೆ ಜಾರಿಯಾಗುತ್ತಿದ್ದು, ಹಾಲು ಉತ್ಪಾದಕ ರೈತರ ಮೊಗದಲ್ಲಿ ಸಂತಸ ಮೂಡಿದೆ. 

ಬೆಂಗಳೂರು(ಡಿ.30): 2020ರ ಹೊಸ ವರ್ಷದಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಲು ಬೆಮುಲ್(ಬೆಂಗಳೂರು ಹಾಲು ಒಕ್ಕೂಟ) ನಿರ್ಧರಿಸಿದೆ.

"

ಇದನ್ನೂ ಓದಿ: ಕರ್ನಾಟಕ ಹಾಲು ಒಕ್ಕೂಟದಲ್ಲಿ ನೇಮಕಾತಿ: ಅರ್ಜಿ ಹಾಕಿ

ಕರ್ನಾಟಕದಲ್ಲಿ ಹಾಲು ಉತ್ಪಾದನೆಯನ್ನು ಪ್ರೋತ್ಸಾಹಿಸಲು ರೈತರಿಗೆ ಪ್ರತಿ ಲೀಟರ್ ಹಾಲಿನಲ್ಲಿ 2 ರೂಪಾಯಿ ಹೆಚ್ಚಳವಾಗಿ ನೀಡಲು ನಿರ್ಧರಿಸಲಾಗಿದೆ. ಸದ್ಯ ರೈತರಿಂದ ಪ್ರತಿ ಲೀಟರ್ ಹಾಲನ್ನು 26 ರೂಪಾಯಿಗೆ ಬೆಮುಲ್ ಖರೀದಿ ಮಾಡತ್ತಿದೆ. ನೂತನ ಯೋಜನೆಯಿಂದ ರೈತರಿಂದ 28 ರೂಪಾಯಿಗೆ ಹಾಲು ಖರೀದಿ ಮಾಡಲಿದೆ. 

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ರೈತರಿಗೆ ಹೆಚ್ಚುವರಿ ಹಣ ಬೆಮುಲ್ ನೀಡಲಿದೆ. 2020ರಿಂದ ಹೊಸ ದರ ಅನ್ವಯವಾಗಲಿದೆ. ಈ ಮೂಲಕ ಬೆಂಗಳೂರು ಹಾಗೂ ರಾಮನಗರ ಹಾಲು ಉತ್ಪಾದಕರಿಗೆ ಹೊಸ ಉತ್ತೇಜನ ಸಿಗಲಿದೆ. 

ಇದನ್ನೂ ಓದಿ: ಜನವರಿ 1ರಿಂದ ಹಾಲಿನ ದರ ಹೆಚ್ಚಳ.

ಕರ್ನಾಟಕದ ಹಾಲು ಉತ್ಪಾದಕ ರೈತರಿಗೂ ಇದೇ ರೀತಿ ಪ್ರತಿ ಲೀಟರ್‌ಗೆ ಹೆಚ್ಚುವರಿ ಹೆಚ್ಚುವರಿ ಹಣ ನೀಡಲು ಕೆಎಂಎಫ್(ಕರ್ನಾಟಕ ಮಿಲ್ಕ್ ಫೆಡರೇಶನ್) ಚಿಂತನೆ ನಡೆಸಿದೆ. ಕರ್ನಾಟಕದಲ್ಲಿ 22,000 ಹಳ್ಳಿಗಳಲ್ಲಿ ರೈತರು ಹಾಲು ಉತ್ಪಾದನೆ ಮಾಡಿ ಕೆಎಂಎಫ್‌ಗೆ ನೀಡುತ್ತಿದ್ದಾರೆ. ಪ್ರತಿ ದಿನ 84 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲನ್ನು ರೈತರಿಂದ ಖರೀದಿ ಮಾಡಲಾಗುತ್ತಿದೆ. 

ಇದನ್ನೂ ಓದಿ:ದೇಶಿ ಹಸು ಸಾಕುವವರೇ ಗಮನಿಸಿ! ಹಾಲಿಗೆ ಕೆಎಂಎಫ್ ಕೊಡುತ್ತೆ ಅಧಿಕ ಬೆಲೆ!

ಪ್ರತಿ ದಿನ ಸದ್ಯ 17 ಕೋಟಿ ರೂಪಾಯಿ ಹಣ ಕರ್ನಾಟಕದ ಹಾಲು ಉತ್ಪಾದಕ ರೈತರ ಕೈಸೇರುತ್ತಿದೆ. ಕರ್ನಾಟಕ ಹಾಲು ಉತ್ಪಾದಕ ರೈತರಿಗೂ ಇದೇ ರೀತಿ  2 ರುಪಾಯಿ ಹೆಚ್ಚಳ ಮಾಡಿದರೆ,  ಪ್ರತಿದಿನ ರೈತರಿಗೆ 1.68 ಕೋಟಿ ರೂಪಾಯಿ ಹೆಚ್ಚುವರಿಯಾಗಿ ನೀಡಲಿದೆ. 1 ತಿಂಗಳಿಗೆ 50 ಕೋಟಿ ರೂಪಾಯಿ ಹಾಗೂ ವಾರ್ಷಿಕವಾಗಿ 604 ಕೋಟಿ ರೂಪಾಯಿ ಹೆಚ್ಚುವರಿ ಹಣವ ರೈತರಿಗೆ ಸಂದಾಯವಾಗಲಿದೆ.

ಬೆಮುಲ್ ರೈತರಿಗೆ ಹೆಚ್ಚುವರಿ 2 ರೂಪಾಯಿ ನೀಡುವುದರಿಂದ, ಗ್ರಾಹಕರ ಖರೀದಿ ಹಾಲಿನ ದರದಲ್ಲಿ ಯಾವುದೇ ಏರಿಕೆ ಇಲ್ಲ. ಹೀಗಾಗಿ ರೈತರು ಮಾತ್ರವಲ್ಲ ಟಿ-ಕಾಫಿ ಕುಡಿಯುವವರು ಹೊಸ ವರ್ಷಕ್ಕೆ ಹ್ಯಾಪಿಯಾಗಿದ್ದಾರೆ.

 

PREV
click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!