ಉಡುಪಿಯ 9 ಗ್ರಾಮ ಪಂಚಾಯ್ತಿಗಳಲ್ಲಿ ಭಾರತ್ ಪಂಪ್, ಭಾರತ್ ಕೆಫೆ, ಇವಿ ಸ್ಟೇಷನ್ ಆರಂಭ

Published : Jul 19, 2026, 02:38 PM IST
Bharat Petrol Bunks EV Charging Stations Bharat Cafes

ಸಾರಾಂಶ

ಉಡುಪಿ ಜಿಲ್ಲೆಯ 9 ಗ್ರಾಮ ಪಂಚಾಯಿತಿಗಳ ಹೆದ್ದಾರಿ ಬದಿಯಲ್ಲಿ ಭಾರತ್ ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್ ಸ್ಟೇಷನ್ ಹಾಗೂ ಭಾರತ್ ಕೆಫೆಗಳನ್ನು ಸ್ಥಾಪಿಸಲಾಗುತ್ತಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದ ಈ ಯೋಜನೆಯು, ಬಾಡಿಗೆ ಮತ್ತು ಕಮಿಷನ್ ಮೂಲಕ ಪಂಚಾಯಿತಿಗಳ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಗುರಿ ಹೊಂದಿದೆ.

ಉಡುಪಿ: ತೆಲಂಗಾಣದ ನಂತರ ಪ್ರಥಮ ಬಾರಿಗೆ ಕರ್ನಾಟಕದ ಉಡುಪಿ ಜಿಲ್ಲೆಯ 9 ಪಂಚಾಯಿತಿಗಳ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರತ್ ಪೆಟ್ರೋಲ್ ಬಂಕ್, ಇ.ವಿ. ಚಾರ್ಜಿಂಗ್ ಮತ್ತು ಭಾರತ್ ಕೆಫೆಗಳನ್ನು ಮುಂದಿನ ವರ್ಷದೊಳಗೆ ಆರಂಭಿಸಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಭಾರತ್ ಪೆಟ್ರೋಲಿಯಂ ಅಧಿಕಾರಿಗಳ ಮತ್ತು ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದ ಸಂಸದರು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಆರು ತಿಂಗಳ ಗುರಿ ನೀಡಿರುವ ಕೇಂದ್ರ ಸರ್ಕಾರ

ಜಿಲ್ಲೆಯ ಆಯ್ದ ಪಂಚಾಯಿತಿಗಳನ್ನು ಹಾದು ಹೋಗುವ ಹೆದ್ದಾರಿಗಳಲ್ಲಿ ಭಾರತ್ ಪೆಟ್ರೋಲಿಯಂ ಸಂಸ್ಥೆ ಮೂಲಕ ಪೆಟ್ರೋಲ್ ಬಂಕ್, ಇವಿ ಚಾಜಿಂಗ್ ಸ್ಟೇಷನ್, ಸಿಎನ್‌ಜಿ ಮತ್ತು ಭಾರತ್ ಕೆಫೆಗಳನ್ನು ನಿರ್ಮಿಸಲಾಗುವುದು. ಕನಿಷ್ಠ ಇನ್ನು ಆರು ತಿಂಗಳಲ್ಲಿ ಅವುಗಳು ಕಾರ್ಯರಂಭಿಸುವುದಕ್ಕೆ ಕೇಂದ್ರ ಸರ್ಕಾರ ಗುರಿ ನೀಡಿದೆ ಎಂದು ವಿವರಿಸಿದರು.

ಗ್ರಾಪಂಗೆ ಸೇರಿದ ಜಾಗದಲ್ಲಿ ಈ ಪಂಪ್‌, ಕೆಫೆಗಳು ಕಾರ್ಯನಿರ್ವಹಿಸಲಿದ್ದು, ಈ ಗ್ರಾಪಂಗಳಿಗೆ ಭಾರತ್ ಪೆಟ್ರೋಲಿಯಂ ಬಾಡಿಗೆ ಮತ್ತು ವ್ಯವಹಾರದಲ್ಲಿ ಕಮಿಷನ್ ನೀಡುತ್ತದೆ. ಇದರಿಂದ ಪಂಚಾಯಿತಿಗಳ ಆರ್ಥಿಕ ಮತ್ತು ಆಡಳಿತಾತ್ಮಕ ಶಕ್ತಿ ಹೆಚ್ಚಲಿದೆ ಎಂದು ಕೋಟ ಹೇಳಿದ್ದಾರೆ.

ಗ್ರಾಪಂಗಳಲ್ಲಿ ನಡೆಸುವ ಪೆಟ್ರೋಲ್ ಪಂಪ್‌ಗಳಲ್ಲಿ ಇವಿ ಚಾಜಿಂಗ್, ಸಿಎನ್‌ಜಿ ವಿತರಣೆಯ ಜೊತೆಗೆ ಡೀಸೆಲ್ ಸಹಿತ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟಕ್ಕೂ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಆಯ್ಕೆಯಾದ ಪಂಚಾಯಿತಿಗಳ ನಿವೇಶನ ದಾಖಲೆಗಳನ್ನು ಸಂಸದರು ಕೋಟ ಭಾರತ್ ಪೆಟ್ರೋಲಿಯಂ ಅಧಿಕಾರಿಗಳಿಗೆ ಹಸ್ತಾಂತರಿಸಿ ಶೀಘ್ರವೇ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಭಾರತ್ ಪೆಟ್ರೋಲಿಯಂನ ಪ್ರಾದೇಶಿಕ ವ್ಯವಸ್ಥಾಪಕ ವಿಪಿನ್ ದಾಸ್ ವಂಶ್ವಾಲ್, ಉಡುಪಿ ಜಿಪಂ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸಹಾಯಕ ಕಾರ್ಯದರ್ಶಿ ಜೇಮ್ಸ್ ಡಿಸಿಲ್ವಾ, ಕಾರ್ಕಳ ತಾಪಂ ಇಓ ಪ್ರಶಾಂತ್ ಎಂ.ಎನ್, ಉಡುಪಿ ತಾಪಂ ಇಓ ವಿಜಯ ಮತ್ತಿತರರು ಉಪಸ್ಥಿತರಿದ್ದರು.

ಪಂಚಾಯಿತಿ ಮೂಲಕ ಪೆಟ್ರೋಲ್ ಪಂಪ್ ಗಳ ನಿರ್ಮಾಣದ ಯೋಜನೆ ವೈಯಕ್ತಿಕವಾಗಿ ತನಗೆ ಖುಷಿ ತಂದಿದೆ ಎಂದು ಸಂಸದ ಕೋಟ ಮಾಧ್ಯಮಗಳಿಗೆ ತಿಳಿಸಿದರು.

ಇದನ್ನೂ ಓದಿ: ಮೂಡುಬಿದಿರೆಯ ಅನುಷಾ ಆಚಾರ್ ಸ್ಟಾರ್ಟಪ್‌ಗೆ ರಾಷ್ಟ್ರಪತಿ ಭವನದಿಂದ ಅಹ್ವಾನ! ರಾಷ್ಟ್ರೀಯ ಮನ್ನಣೆ

ಎಲ್ಲೆಲ್ಲಿ ಪಂಪ್-ಕೆಫೆ-ಸ್ಟೇಷನ್ ?

ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ, ಬೆಳ್ವೆ, ಅಲ್ಬಾಡಿ, ಕಾರ್ಕಳ ತಾಲೂಕಿನ ಮುಡಾರು ಬೆಳ್ಮಣ್ಣು, ಸಾಣೂರು, ಕುಕ್ಕಂದೂರು, ಬೈಲೂರು, ಉಡುಪಿ ತಾಲೂಕಿನ ತೆಂಕನಿಡಿಯೂರು ಪಂಚಾಯಿತಿಗಳಲ್ಲಿ ನಿವೇಶನ ಗುರುತಿಸಲಾಗಿದೆ. ಜಿಲ್ಲೆಯ ಇತರ ತಾಲೂಕುಗಳಲ್ಲಿ ಸಮೀಕ್ಷೆ ನಡೆಯುತ್ತಿದ್ದು. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಪಂಚಾಯಿತಿ ಪೆಟ್ರೋಲ್ ಬಂಕ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಕೋಟ ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು-ಮಂಗಳೂರು-ಉಡುಪಿ-ಕಾರವಾರ ನಡುವೆ ವಂದೇ ಭಾರತ್ ರೈಲು: ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದೇನು?

PREV
Read more Articles on
click me!

Recommended Stories

ಜಪಾನ್‌ ದೈತ್ಯ ಕಂಪನಿಗೆ ತಾಂತ್ರಿಕ ಸಲಹೆಗಾರರಾಗಿ ಮಂಗಳೂರಿನ ಪ್ರೊ.ಡಾ. ಗೋಪಾಲ್ ಮುಗೇರಾಯ ನೇಮಕ
ಪೊಲೀಸರ ಮೇಲೆ ಅನುಮಾನ.. 3 ತಿಂಗಳ ಹಿಂದೆ ಹೂತಿಟ್ಟಿದ್ದ ಅಮ್ಮನ ಶವ ತೆಗೆದು ಆಸ್ಪತ್ರೆಗೆ ಬಂದ ಅಣ್ಣ, ತಮ್ಮ!