ದೇಶದ ಐಕ್ಯತೆ, ಸಮಗ್ರತೆಗಾಗಿ ರಾಹುಲ್‌ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3600 ಕಿ.ಮೀ ದೂರದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಇದು ಇತಿಹಾಸದಲ್ಲಿ ಬೃಹತ್ ಪಾದಯಾತ್ರೆಯಾಗಿದೆ.
ತಿಪಟೂರು (ಸೆ.11): ಪ್ರಧಾನಿ ಮೋದಿಯವರು ದೇಶವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯುವಂತಹ ಕೆಲಸಗಳನ್ನು ಮಾಡದೆ ಕೇವಲ ಅಧಿಕಾರದ ಆಸೆಗಾಗಿ ದೇಶದ ಜನರಿಗೆ ಆಶ್ವಾಸನೆ, ಭರವಸೆಗಳ ನೀಡುತ್ತಾ ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಇಬ್ಭಾಗ ಮಾಡಲು ಹೊರಟಿರುವುದನ್ನ ಖಂಡಿಸಿ ಇದರಿಂದ ಜನರನ್ನು ರಕ್ಷಿಸಲು ಎಐಸಿಸಿ ಉಪಾಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ರಾಹುಲ್‌ಗಾಂಧಿ ಭಾರತ್ ಜೋಡೋ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದೇಶದ ಐಕ್ಯತೆ, ಸಮಗ್ರತೆಗಾಗಿ ರಾಹುಲ್‌ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3600 ಕಿ.ಮೀ ದೂರದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಇದು ಇತಿಹಾಸದಲ್ಲಿ ಬೃಹತ್ ಪಾದಯಾತ್ರೆಯಾಗಿದೆ. ಈ ಪಾದಯಾತ್ರೆ ರಾಹುಲ್‌ಗಾಂಧಿ ಪ್ರಧಾನಿಯಾಗಲೆಂದಲ್ಲ ದೇಶದ ಜನರನ್ನು ರಕ್ಷಿಸುವಂತಹದ್ದಾಗಿದೆ. ಬಿಜೆಪಿ ಸರ್ಕಾರ ಭ್ರಷ್ಟಸರ್ಕಾರವಾಗಿದ್ದು ಪ್ರಧಾನಿ ಮೋದಿ ಇಲ್ಲದ ಸುಳ್ಳು ಭರವಸೆ ನೀಡುತ್ತಾ ಜನರ ಮೇಲೆ ತೆರಿಗೆ ಹಣದ ಹೊರೆ ಹೊರಿಸಿ ಜೀವನವನ್ನು ನರಕ ಮಾಡುತ್ತಿದ್ದಾರೆ.
ಬಿಜೆಪಿಯ ಜನಸ್ಪಂದನ ಸಮಾವೇಶಕ್ಕೆ ಬಂದಿದ್ದ ವ್ಯಕ್ತಿ ಸಾವು
ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆಂದು ಹೇಳಿ ವಿದ್ಯಾವಂತರನ್ನು ನಿರುದ್ಯೋಗಿಗಳನ್ನಾಗಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆಂದು ಜನರ ಬಳಿ ಹಣ ವಸೂಲಿ ಮಾಡುವ ದಂಧೆ ನಡೆಸಿದರು. ದೇಶದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಜನರು ಸಾಯುತ್ತಿದ್ದರೆ ಪ್ರಧಾನಿ ಕಾಂಗ್ರೆಸ್ ಪಕ್ಷವನ್ನು ನಿಮೂರ್ಲನೆ ಮಾಡಬೇಕೆಂದು ಹೊರಟಿದ್ದಾರೆ. 70 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಹೆಮ್ಮರವಾಗಿ ಬೆಳೆದಿದ್ದು ಯಾರು ಏನೂ ಮಾಡುವುದಕ್ಕೆ ಆಗುವುದಿಲ್ಲ. ಬಿಜೆಪಿಗೆ ಸ್ವಾತಂತ್ರ್ಯದ ಅರಿವು ಇಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತಿಳಿಯದೆ ಜಾತಿ, ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ.
ದೇಶವನ್ನು ಛಿದ್ರ ಛಿದ್ರ ಮಾಡಲು ಇವರು ಹೊರಟಿದ್ದು, ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಿದ್ದು ಶ್ರೀಲಂಕಾ, ರಷ್ಯಾದ ಸ್ಥಿತಿ ನಮಗೂ ಬರಲಿದೆ. ಆದ್ದರಿಂದ ದೇಶದ ಜನರು ಚಿಂತನೆ ಮಾಡಬೇಕಿದೆ. ಇವೆಲ್ಲವುದಕ್ಕೂ ಪರಿಹಾರವಾಗಿ ರಾಹುಲ್‌ಗಾಂಧಿಯವರು ಭಾರತ್ ಜೋಡೋ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು ರಾಜ್ಯದಲ್ಲಿ 21 ದಿನಗಳ ಕಾಲ ಪಾದಯಾತ್ರೆ ಸಂಚರಿಸಲಿದ್ದು ತುಮಕೂರು ಜಿಲ್ಲೆಗೆ ಬರುವ ದಿನದಂದು ಹೆಚ್ಚಿನ ಕಾರ್ಯಕರ್ತರು, ಮುಖಂಡರು ಭಾಗವಹಿಸಿ ಯಶಸ್ವಿಯಾಗಿ ನಡೆಸಬೇಕು. ಭವ್ಯ ಪರಂಪರೆ, ಇತಿಹಾಸ ಹೊಂದಿರುವ ಶಾಂತಿ, ಸಹಬಾಳ್ವೆಯಿಂದ ಕೂಡಿರುವ ಭಾರತ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದರು.
ಭಾರತ್ ಜೋಡೋ ಯಶಸ್ವಿಯಾಗಲೆಂದು ಮುಸ್ಲಿಂ ಧರ್ಮದ ಅರಿಯಾಜ್, ಕ್ರೈಸ್ಥ ಧರ್ಮದ ಜಾಯ್ ಜೇಕಬ್, ಹಿಂದು ಧರ್ಮದ ಷಡಕ್ಷರಿಗೆ ಸನ್ಮಾನಿಸುವ ಮೂಲಕ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು. ಪೂರ್ವಭಾವಿ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಡೆನೂರು ಕಾಂತರಾಜು, ನಗರಸಭೆ ಮಾಜಿ ಅಧ್ಯಕ್ಷ ಆರ್.ಡಿ. ಬಾಬು, ತಾಪಂ ಮಾಜಿ ಅಧ್ಯಕ್ಷ ಸುರೇಶ್, ನಗರಸಭೆ ಉಪಾಧ್ಯಕ್ಷ ಸೊಪ್ಪುಗಣೇಶ್, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಸೈಫುಲ್ಲಾ ಸೇರಿದಂತೆ ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.
ನನಗೆ ಗುಟಾನು ಹೊಡೆದಿದ್ರು: ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆ ಬಗ್ಗೆ MP ಹೇಳಿದ್ದೀಗೆ!
ದೇಶದ ಐಕ್ಯತೆ, ಸಮಗ್ರತೆ, ಅಖಂಡತೆಗಾಗಿ, ಸಂವಿಧಾನ ರಕ್ಷಣೆಗಾಗಿ ರಾಹುಲ್‌ಗಾಂಧಿಯವರ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಬಿಜೆಪಿಯ ದುರಾಡಳಿತದಿಂದ ಜನರು ರೋಸಿಹೋಗಿದ್ದು ಕಾಂಗ್ರೆಸ್ ಪಕ್ಷದ ಹೊಸ ಪರ್ವ ಈಗ ಹುಟ್ಟಿಕೊಂಡಿದ್ದು ಜನರೇ ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದು ರಾಹುಲ್‌ಗಾಂಧಿಯವರಿಗೆ ಶಕ್ತಿ ನೀಡಬೇಕು. ರಾಜ್ಯಕ್ಕೆ ಪಾದಯಾತ್ರೆ ಆಗಮಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು.
-ಮರಿಚೆನ್ನಮ್ಮ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ