Vijayapura Rain; ಗುಮ್ಮಟನಗರಿಯಲ್ಲಿ ಕಂಡು ಕೇಳರಿಯದ ಮಳೆ!

By Suvarna News  |  First Published Sep 11, 2022, 7:03 AM IST

ಕಂಡು ಕೇಳರಿಯದ ಮಳೆಗೆ ವಿಜಯಪುರ ನಗರದ ಜನ ಬೆಚ್ಚಿಬಿದ್ದಿದ್ದಾರೆ. ಸತತ ಮೂರ್ನಾಲ್ಕು ಗಂಟೆಗಳ ಕಾಲ‌ ಸುರಿದ ಮಳೆಯಿಂದ ನಗರದ ರಸ್ರೆಗಳೆಲ್ಲ ನೀರುಮಯವಾಗಿ ಜನರು ಪರದಾಡಿದ ಘಟ‌ನೆ ನಡೆದಿದೆ.


ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಸೆ. 11): ಕಂಡು ಕೇಳರಿಯದ ಮಳೆಗೆ ವಿಜಯಪುರ ನಗರದ ಜನ ಬೆಚ್ಚಿಬಿದ್ದಿದ್ದಾರೆ. ಸತತ ಮೂರ್ನಾಲ್ಕು ಗಂಟೆಗಳ ಕಾಲ‌ ಸುರಿದ ಮಳೆಯಿಂದ ನಗರದ ರಸ್ರೆಗಳೆಲ್ಲ ನೀರುಮಯವಾಗಿ ಜನರು ಪರದಾಡಿದ ಘಟ‌ನೆ ನಡೆದಿದೆ. ಸಾಯಂಕಾಲ ಸಮಯದಲ್ಲಿ ಸುರಿದ ಮಹಾಮಳೆಗೆ ವಿಜಯಪುರ ನಗರದ ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ಸತತವಾಗಿ ಮೂರ್ನಾಲ್ಕು ಗಂಟೆಗಳ ಕಾಲ ಸುರಿದ ಮಳೆಯಿಂದ ರಸ್ತೆಗಳೆಲ್ಲ ಹಳ್ಳಗಳಂತೆ ಬಾಸವಾದ್ವು. ಎಲ್ಲಿ ನೋಡಿದ್ರು ನೀರೆನೀರು ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸತತ ಮಳೆಯಿಂದ ನಗರದ ಕೆ.ಸಿ ಮಾರ್ಕೆಟ್ ಸಂಪೂರ್ಣ ಜಲಾವೃತ್ತವಾಗಿತ್ತು. ಕೆ.ಸಿ ಮಾರ್ಕೆಟ್‌ನ ರಸ್ತೆಗಳು ಮಳೆ ನೀರಲ್ಲಿ ಮುಳುಗಿ ಹೋಗಿದ್ವು. ಜನರ ನಡೆದಾಡೋದಕ್ಕು ಪರದಾಡುವಂತಾಯ್ತು. ರಸ್ತೆ ಬದಿಗಿದ್ದ ದ್ವಿಚಕ್ರವಾಹನಗಳು ನೀರಲ್ಲೆ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು. ಕೆ.ಸಿ ಮಾರ್ಕೆಟ್ ನಲ್ಲಿ ಮೊಳಕಾಲಿನ ವರೆಗು ನೀರು ನಿಂತಿದ್ದರಿಂದ ಹಣ್ಣು ವ್ಯಾಪಾರಸ್ಥರು ನೀರಲ್ಲೆ ನಿಂತು ವ್ಯಾಪಾರ ನಡೆಸುವಂತಾಯ್ತು.ನಗರದ ಲಕ್ಣ್ಮೀ ಹಾಗೂ ಅಪ್ಸರಾ ಸಿನಿಮಾ ಮಂದಿರಗಳು ಜಲಾವೃತ್ತಗೊಂಡಿದ್ದವು. ತಗ್ಗು ಪ್ರದೇಶದಲ್ಲಿರು  ಅಪ್ಸರಾ ಟಾಕೀಸ್‌ಗೆ ಮಳೆ ನೀರು ನುಗ್ಗಿ ಇಡೀ ಆವರಣ ಅಕ್ಷರಶಃ ನದಿಯಂತೆ ಮಾರ್ಪಾಡಾಗಿತ್ತು.

Latest Videos

undefined

ಸಿನಿಮಾ ನೋಡಲು ಬಂದಿದ್ದವರ ಬೈಕ್ ಕಾರ್ ‌ಗಳು ಜಲಾವೃತ್ತಗೊಂಡ ನೀರಲ್ಲೆ ಮುಳುಗಿದ ಘಟನೆಯು ನಡೆದಿದೆ. ಇನ್ನು ಸಿನಿಮಾ ಮಂದಿರದ ಆವರಣದಲ್ಲಿ ನಿಂತ ಮಳೆನೀರಲ್ಲೆ ಯುವಕರು ಈಜಾಡಿದ ಘಟನೆಯು ನಡೆಯಿತು. ಒಂದು ಕಡೆಗೆ ಬೈಕ್, ಕಾರ್ ಗಳು ನೀರಲ್ಲೆ ನಿಂತಿದ್ರೆ, ಕೆಲ ಯುವಕರು ಅದೆ ನೀರಲ್ಲಿ ಈಜು ಹೊಡೆದು ಕೇ...ಕೆ ಹಾಕಿದ್ರು. 

ಕಾವಿ ಪ್ಲಾಟ್‌‌ಗೆ ನುಗ್ಗಿದ ಮಳೆನೀರು..!
ನಗರದ ಗೋಲಗುಮ್ಮಟ ಹಿಂಭಾಗದ ಕಾವಿ ಪ್ಲಾಟ್ ಗು ಮಳೆ ನೀರು ನುಗ್ಗಿ ಅವಾಂತರ ಉಂಟಾಗಿದೆ. ಇಲ್ಲಿನ ಹತ್ತಾರು ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡುವಂತಾಯ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸ್ಥಳೀಯರಿಗೆ ಸಮಾಧಾನ ಹೇಳಿದ್ರು. ಈ ವೇಳೆ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನರು ಆಕ್ರೋಶಗೊಂಡು ಮಾತನಾಡಿದ ಘಟನೆಯು ನಡೆಯಿತು. ಈ ವೇಳೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾಗಳು ವಿಜಯಮಹಾಂತೇಶ ದಾನಮ್ಮನವರ್ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿ ಸೂಚನೆ ನೀಡಿದರು.. ಇತ್ತ ಲಿಂಗದ ಗುಡಿ ರಸ್ತೆ, ಶಿಕಾರಖಾನೆ ರಸ್ತೆ, ಕಟ್ಟಡ, ಅಂಗಡಿ ಮುಂಗಟ್ಟಗಳು ಜಲಾವೃತ್ತಗೊಂಡು ಜನರು ಪರದಾಡುವಂತಾಯ್ತು.

ಒಂದಡಿ ನೀರಲ್ಲಿ ಎನ್‌ ಮಹೇಶ್‌ ದೋಣಿ ಪ್ರಯಾಣ: ಜ್ವರವಿತ್ತು ಅದಕ್ಕೇ ದೋಣಿ ಹತ್ತಿದೆ ಎಂದ ಶಾಸಕ

ಆಂಜನೇಯ ದೇಗುಲ ಜಲಾವೃತ್ತ..!
ನಗರದ ಗೋಳಗುಮ್ಮಟ ರಸ್ತೆಯಲ್ಲಿನ ಪುರಾತನ ಆಂಜನೇಯ ದೇಗುಲಕ್ಕು ಮಳೆನೀರು ನುಗ್ಗಿ ಅವಾಂತರ ಸೃಷ್ಟಿಯಾಯ್ತು. ಗರ್ಭಗುಡಿ ಸಂಪೂರ್ಣವಾಗಿ ಜಲಾವೃತ್ತಗೊಂಡು ಆಂಜನೇಯನ ಮೂರ್ತಿ ಅರ್ಧದಷ್ಟು ನೀರಲ್ಲಿ ಮುಳುಗಿದೆ. ಇದರಿಂದ ಪ್ರತಿ ಶನಿವಾರ ಸಾಯಂಕಾಲ ನಡೆಯುತ್ತಿದ್ದ ಪಲ್ಲಕ್ಕಿ ಸೇವೆ, ಪೂಜಾ ಕೈಂಕರ್ಯಗಳಿಗೆ ಬ್ರೇಕ್ ಬಿದ್ದಿದೆ.

Bengaluru Flood: ಬೆಂಗಳೂರಿನಲ್ಲೀಗ ಗುಂಡಿ ಬಿದ್ದ ರಸ್ತೆಗಳಿಂದಲೇ ಸಮಸ್ಯೆ..!

ಹೊಟೇಲ್-ಅಂಗಡಿಗಳಿಗೆ ನುಗ್ಗಿದ ಮಳೆ ನೀರು.!
ಇನ್ನು ನಗರದ ಹಲವೆಡೆ ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕೆ.ಸಿ ಮಾರ್ಕೆಟ್, ಗೋಳಗುಮ್ಮಟ ರಸ್ತೆ, ಲಿಂಗದ ಗುಡಿ ರೋಡ್ ಸೇರಿದಂತೆ ಕೆಳ ಹಂತದ ಅಂಗಡಿ ಮುಂಗಟ್ಟು, ಹೊಟೇಲ್ ಗಳಿಗೆ ಅಪಾರ ಪ್ರಮಾಣದಲ್ಲ ನೀರು ನುಗ್ಗಿದೆ. ಇದರಿಂದ ಅಂಗಡಿ, ಹೊಟೇಲ್ ಮಾಲಿಕರು ಪರದಾಡುವಂತಾಯ್ತು.

click me!