Mandya: ಹೈಕೋರ್ಟ್‌ ಅಂಗಳಕ್ಕೆ ಜಾಮೀಯಾ ಮಸೀದಿ ವಿವಾದ

By Kannadaprabha News  |  First Published Nov 2, 2022, 10:22 PM IST

ಶ್ರೀ​ರಂಗ​ಪ​ಟ್ಟಣ ಜಾ​ಮಿಯಾ ಮ​ಸೀದಿ ವಿ​ವಾದ ಹೈಕೋರ್ಟ್‌ ಮೆ​ಟ್ಟಿ​ಲಿಗೆ ಹೋ​ಗ​ಲಿದ್ದು, ಮಂದಿ​ರವೋ ಅ​ಥವಾ ಮ​ಸೀ​ದಿಯೋ ಎಂಬ ಇ​ತ್ಯರ್ಥಕ್ಕೆ ಕೊ​ನೆಯ ಸಿ​ದ್ಧ​ತೆ​ಗಳು ನ​ಡೆ​ದಿವೆ. ಮೂ​ರ್ನಾಲ್ಕು ದಿ​ನ​ಗ​ಳಲ್ಲಿ ರಾಜ್ಯ ಉಚ್ಚ ನ್ಯಾ​ಯಾ​ಲ​ಯ​ದಲ್ಲಿ ಹ​ನು​ಮಂತನ ಹೆ​ಸ​ರಿ​ನಲ್ಲಿ 108 ಭ​ಕ್ತರು ದಾವೆ ಹೂ​ಡ​ಲಿ​ದ್ದಾರೆ. 


ಮಂಡ್ಯ (ನ.02): ಶ್ರೀ​ರಂಗ​ಪ​ಟ್ಟಣ ಜಾ​ಮಿಯಾ ಮ​ಸೀದಿ ವಿ​ವಾದ ಹೈಕೋರ್ಟ್‌ ಮೆ​ಟ್ಟಿ​ಲಿಗೆ ಹೋ​ಗ​ಲಿದ್ದು, ಮಂದಿ​ರವೋ ಅ​ಥವಾ ಮ​ಸೀ​ದಿಯೋ ಎಂಬ ಇ​ತ್ಯರ್ಥಕ್ಕೆ ಕೊ​ನೆಯ ಸಿ​ದ್ಧ​ತೆ​ಗಳು ನ​ಡೆ​ದಿವೆ. ಮೂ​ರ್ನಾಲ್ಕು ದಿ​ನ​ಗ​ಳಲ್ಲಿ ರಾಜ್ಯ ಉಚ್ಚ ನ್ಯಾ​ಯಾ​ಲ​ಯ​ದಲ್ಲಿ ಹ​ನು​ಮಂತನ ಹೆ​ಸ​ರಿ​ನಲ್ಲಿ 108 ಭ​ಕ್ತರು ದಾವೆ ಹೂ​ಡ​ಲಿ​ದ್ದಾರೆ. ಕ​ಳೆದ ಹ​ಲ​ವಾರು ವರ್ಷಗ​ಳಿಂದಲೂ ಜಾ​ಮೀಯಾ ಮ​ಸೀದಿ ವಿವಾದದ ಕೇಂದ್ರ ಬಿಂದುವಾಗಿದೆ. ಅದು ಮ​ಸೀ​ದಿ​ಯಲ್ಲ ಮಂದಿರ ಎಂದು ಹಿಂದೂ ಸಂಘ​ಟ​ನೆ​ಗಳು ಪ್ರಬಲವಾಗಿ ವಾದ ಮಂಡಿಸುವುದರ ಜೊತೆಗೆ ಮಂದಿರದ ಮೇಲಿನ ಕೆಲವು ಹಿಂದೂ ದೇವರ ಚಿತ್ರಗಳಿರುವುದು ಕಂಡುಬಂದಿವೆ. 

ಈ ವಿಷಯವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೆಲ ತಿಂಗಳ ಹಿಂದೆ​ಯಷ್ಟೇ ಶ್ರೀ​ರಂಗ​ಪ​ಟ್ಟ​ಣ​ದಲ್ಲಿ ಬೃ​ಹತ್‌ ಪ್ರ​ತಿ​ಭ​ಟ​ನೆ​ಯನ್ನೂ ನಡೆಸಿದ್ದರು. ಶ್ರೀರಂಗಪಟ್ಟಣದಲ್ಲಿರುವುದು ಜಾ​ಮೀಯಾ ಮ​ಸೀ​ದಿ​ಯಲ್ಲ ಅದು ಹ​ನುಮ ಮಂದಿರ ಎಂದು ಹೋ​ರಾ​ಟ​ಗಾ​ರರು ವಾ​ದಿ​ಸಿ​ದ್ದರು. ಮ​ಸೀದಿ ಜಾಗ ಹಿಂದೂ​ಗ​ಳಿಗೆ ಮ​ರಳಿ ನೀ​ಡು​ವಂತೆ ಸರ್ಕಾರಕ್ಕೆ ಗ​ಡುವು ನೀ​ಡಿ​ದ್ದರು. ಆ​ದ​ರೆ, ಸರ್ಕಾರ​ದಿಂದ ಯಾ​ವುದೇ ಪ್ರ​ತಿ​ಕ್ರಿಯೆ ಬಾ​ರದ ಕಾ​ರಣ ಇ​ದೀಗ ಕೋರ್ಟ್‌ ಮೊರೆ ಹೋ​ಗಲು ನಿರ್ಧರಿ​ಸಿ​ದ್ದಾರೆ. ಅ​ಯೋಧ್ಯೆ ಶ್ರೀ​ರಾಮ ಮಂದಿರ ರೀತಿ ಹ​ನುಮ ಮಂದಿ​ರ​ಕ್ಕಾಗಿ ನ್ಯಾ​ಯಾಂಗ ಹೋ​ರಾಟ ನ​ಡೆ​ಸಲು ಕೊ​ನೆಯ ಹಂತದ ಸಿ​ದ್ಧ​ತೆ​ಗ​ಳನ್ನು ಪೂರ್ಣಗೊ​ಳಿಸಿ 108 ಮಂದಿ ಹ​ನುಮ ಭ​ಕ್ತ​ರು ನ್ಯಾ​ಯಾ​ಲ​ಯದಲ್ಲಿ ದಾವೆ ಹೂ​ಡ​ಲಿ​ದ್ದಾರೆ.

Tap to resize

Latest Videos

Shivamogga: ಪ್ರಾಣ ರಕ್ಷಣೆ ಮಾಡುವ ವೈದ್ಯರಿಗೆ ಆಭಾರಿ: ಸಂಸದ ಬಿ.ವೈ.ರಾಘವೇಂದ್ರ

ದಾಖಲೆಗಳ ಸಂಗ್ರಹ: ಹ​ನು​ಮಂತನ ಹೆ​ಸ​ರಿ​ನಲ್ಲಿ ಭ​ಜ​ರಂಗ​ಸೇನೆ ರಾ​ಜ್ಯಾ​ಧ್ಯಕ್ಷ ಬಿ.ಮಂಜು​ನಾಥ್‌ ಅ​ವರು 108 ಹ​ನುಮ ಭ​ಕ್ತ​ರೊ​ಡ​ಗೂಡಿ ನ್ಯಾ​ಯಾ​ಲ​ಯ​ದಲ್ಲಿ ದಾವೆ ಹೂ​ಡ​ಲಿ​ದ್ದಾರೆ. ಅ​ದ​ಕ್ಕಾಗಿ ಎಲ್ಲ 108 ಭ​ಕ್ತರ ಆ​ದಾರ್‌ ಕಾರ್ಡ್‌ ಸೇ​ರಿ​ದಂತೆ ಅ​ಗತ್ಯ ದಾ​ಖ​ಲೆ​ಗ​ಳನ್ನು ಸಂಗ್ರ​ಹಿ​ಸುವ ಕಾರ‍್ಯ ಕೆಲ ದಿ​ನ​ಗ​ಳಿಂದ ನ​ಡೆ​ಸು​ತ್ತಿದ್ದು, ಇ​ದೀಗ ಪೂರ್ಣ ಹಂತಕ್ಕೆ ಬಂದಿದೆ. ನಾಳೆ ವ​ಕೀಲ ರ​ವಿ​ಶಂಕರ್‌ ಅ​ವ​ರ ಮೂ​ಲಕ ಉಚ್ಚ ನ್ಯಾ​ಯಾ​ಲ​ಯ​ದಲ್ಲಿ ದಾವೆ ಹೂ​ಡಲು ಸಿ​ದ್ಧತೆ ನ​ಡೆ​ಸಿ​ಲಾ​ಗಿದೆ ಎಂದು ಮಂಜು​ನಾಥ್‌ ತಿ​ಳಿ​ಸಿ​ದ್ದಾರೆ.

108 ಹ​ನುಮ ಭ​ಕ್ತರು ಮಂಜು​ನಾಥ್‌ ಅ​ವ​ರಿಗೆ ಸಂಪೂ​ರ್ಣ ಜ​ವಾ​ಬ್ದಾ​ರಿ​ಯನ್ನು ನೀ​ಡಿದ್ದು, ನ್ಯಾ​ಯಾ​ಲ​ಯದ ಪ್ರ​ಕ​ರ​ಣ​ದಲ್ಲಿ ವಿ​ಚಾ​ರಣೆ ವೇಳೆ ಹಾ​ಜ​ರಿ​ರಲು ಸ​ಹ​ಮತ ವ್ಯ​ಕ್ತ​ಪ​ಡಿ​ಸಿ​ದ್ದಾರೆ. ಅ​ದ​ರಂತೆ ವ​ಕೀ​ಲರು ಸಹ ದಾವೆ ಸ​ಲ್ಲಿ​ಸಲು ಸಿದ್ಧತೆ ನ​ಡೆ​ಸಿದ್ದು, ನ್ಯಾ​ಯಾ​ಲ​ಯ​ಕ್ಕೆ ನಾಳೆ ಅ​ಥವಾ ನಾ​ಡಿದ್ದು ವ​ಕೀ​ಲರ ಮೂ​ಲಕ ನ್ಯಾ​ಯಾ​ಲ​ಯಕ್ಕೆ ಅರ್ಜಿ ಸ​ಲ್ಲಿ​ಸ​ಲಾ​ಗು​ವುದು ಎಂದು ತಿ​ಳಿ​ಸಿ​ದ್ದಾರೆ.

ದೇಗುಲ ಕೆಡವಿದ್ದ ಟಿಪ್ಪು: ಶ್ರೀ​ರಂಗ​ಪ​ಟ್ಟ​ಣ​ದಲ್ಲಿ ಆ​ಡ​ಳಿತ ನ​ಡೆ​ಸು​ತ್ತಿದ್ದ ಟಿಪ್ಪು 1784ರಲ್ಲಿ ಮೂ​ಡ​ಲ​ಬಾ​ಗಿಲು ಆಂಜ​ನೇ​ಯ​ಸ್ವಾಮಿ ದೇ​ವಾ​ಲ​ಯ​ವನ್ನು ಕೆ​ಡವಿ ಮ​ಸೀ​ದಿ​ಯ​ನ್ನಾಗಿ ಪ​ರಿ​ವರ್ತಿಸಿದ್ದನು. ಅ​ದರ ಮೇಲೆ ಎ​ರಡು ಗೋ​ಪು​ರ​ (​ವಾಚ್‌ ಟ​ವರ್‌)ಗಳನ್ನು ನಿರ್ಮಿಸಿದ್ದ ಎಂದು ಹೇ​ಳ​ಲಾ​ಗಿದೆ. ಶ್ರೀಆಂಜ​ನೇ​ಯ​ಸ್ವಾಮಿ ಮೂಲ ವಿ​ಗ್ರ​ಹ​ವನ್ನು ಕಾ​ವೇರಿ ಹೊ​ಳೆ​ಗೆ ಬಿ​ಸಾ​ಡಿದ್ದ ಎಂದು ಹೇ​ಳ​ಲಾ​ಗಿ​ದ್ದು, ಹೊ​ಳೆ​ಯಲ್ಲಿ ಬಿ​ದ್ದಿದ್ದ ಮೂಲ ವಿ​ಗ್ರ​ಹ​ವನ್ನು ಹಿಂದೂ​ಗಳು ತೆ​ಗೆ​ದು​ಕೊಂಡು ಪ​ಟ್ಟ​ಣದ ಪೇಟೆ ಬೀ​ದಿ​ಯಲ್ಲಿ ಗುಡಿ ನಿರ್ಮಿಸಿ ಪ್ರ​ತಿ​ಷ್ಠಾ​ಪಿ​ಸಿ​ದ್ದರು. ಇಂದಿಗೂ ಅದು ಪೇ​ಟೆ ಬೀ​ದಿ​ಯಲ್ಲಿ ಮೂ​ಡ​ಲ​ಬಾ​ಗಿಲು ಶ್ರೀಆಂಜ​ನೇ​ಯ​ಸ್ವಾಮಿ ದೇ​ಗುಲ ಎಂದು ಕ​ರೆ​ಯ​ಲ್ಪ​ಡು​ತ್ತಿದೆ.

ಸರ್ಕಾರದಿಂದ ಪ್ರತಿಕ್ರಿಯೆ ಇಲ್ಲ: ಕ​ಳೆದ ಕೆಲ ವರ್ಷಗ​ಳಿಂದ ಜಾ​ಮೀಯಾ ಮ​ಸೀ​ದಿ​ಯನ್ನು ಮತ್ತೆ ಮಂದಿ​ರ​ವ​ನ್ನಾಗಿ ಪ​ರಿ​ವರ್ತಿಸಲು ಹಿಂದೂ ಸಂಘ​ಟ​ನೆ​ಗಳು ಹೋ​ರಾಟ ನ​ಡೆ​ಸು​ತ್ತಿವೆ. ಸರ್ಕಾರ ಇ​ದಕ್ಕೆ ಸೊಪ್ಪು ಹಾ​ಕು​ತ್ತಿಲ್ಲ. ಇ​ದ​ರಿಂದ ಆ​ಕ್ರೋ​ಶ​ಗೊಂಡ ಹೋ​ರಾ​ಟ​ಗಾ​ರರು ಭಾರೀ ಪ್ರ​ತಿ​ಭ​ಟನೆಗ​ಳನ್ನು ನ​ಡೆಸಿ ಸರ್ಕಾರಕ್ಕೆ ಎ​ಚ್ಚ​ರಿ​ಕೆ​ಯನ್ನೂ ನೀ​ಡಿ​ದ್ದರು. ಸರ್ಕಾರ ಈ ಬಗ್ಗೆ ಪ​ರಿ​ಶೀ​ಲಿಸಿ ಕ್ರಮ ಕೈ​ಗೊ​ಳ್ಳುವ ಭ​ರ​ವಸೆ ನೀ​ಡಿತ್ತು. ಆ​ದರೆ ಯಾವುದೇ ಪ್ರ​ತಿ​ಕ್ರಿಯೆ ಬಾ​ರದ ಕಾ​ರಣ ಈ ವಿ​ವಾದ ನ್ಯಾ​ಯಾ​ಲ​ಯದ ಅಂಗ​ಳಕ್ಕೆ ಬಂದು ನಿ​ಲ್ಲು​ವಂತಾ​ಗಿದೆ ಎಂದು ಮಂಜು​ನಾಥ್‌ ತಿ​ಳಿ​ಸಿ​ದ್ದಾರೆ.

ರಾಜ್ಯದ ಸಮಗ್ರ ಅಭಿವೃದ್ಧಿಯೇ ‘ಪಂಚರತ್ನ’ ಗುರಿ: ಎಚ್‌.ಡಿ.ಕುಮಾರಸ್ವಾಮಿ

ಮೈಸೂರು ಗೆಜೆಟಿಯರ್‌, ಮಸೀದಿಯಲ್ಲಿನ ಹಿಂದೂ ವಾಸ್ತುಶಿಲ್ಪ, ಮೂರ್ತಿ ಕೆತ್ತನೆ, ಕಂಬಗಳ ಮೇಲಿನ ದೇವರ ಚಿತ್ರಕಲೆ, ಕಲ್ಯಾಣಿ ಸೇರಿದಂತೆ ಕೆಲ ಬ್ರಿಟಿಷ್‌ ಅಧಿಕಾರಿಗಳು ಉಲ್ಲೇಖಿಸಿರುವ ದಾಖಲೆಗಳ ಸಂಗ್ರಹ ಮಾಡಲಾಗಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ದಾಖಲೆ ಹಾಗೂ ಸಾಕ್ಷಿಗಳ ಸಮೇತ ಹೈಕೋರ್ಟ್‌ ದಾವೆ ಹೂಡಲು 108 ಹನುಮ ಭಕ್ತರು ಸಿದ್ಧರಾಗಿದ್ದು, ಹನುಮ ಮಂದಿರ ಕೆಡವಿ ಟಿಪ್ಪು ಮಸೀದಿ ಕಟ್ಟಿರುವುದಾಗಿ ಆರೋಪಿಸಿ ಈ ನ್ಯಾಯಾಂಗ ಹೋರಾಟ ನಡೆಯಲಿದೆ ಎಂದು ಮಂಜುನಾಥ್‌ ತಿಳಿಸಿದ್ದಾರೆ.

click me!