Bengaluru: ರಸ್ತೆ ಬದಿ ವಾಹನ ನಿಲ್ಲಿಸುವ ಸವಾರರೇ ಎಚ್ಚರ: ನಂಬರ್‌ ಪ್ಲೇಟ್‌ ಸರಿಯಿಲ್ಲದಿದ್ದರೆ ಬೈಕ್ ಲಾಕ್‌

By Sathish Kumar KHFirst Published Dec 25, 2022, 10:46 AM IST
Highlights

ಬೆಂಗಳೂರಿನ ದ್ವಿಚಕ್ರ ವಾಹನ ಸವಾರರರೇ ನಿಮ್ಮ ಬೈಕ್‌ಗಳನ್ನು ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡುವಾಗ ಎಚ್ಚರದಿಂದಿರಿ. ಪೊಲೀಸರು ಬಂದು ನಿಮ್ಮ ಬೈಕ್‌ಗಳ ವ್ಹೀಲ್‌ಗಳನ್ನು ಲಾಕ್‌ ಮಾಡುತ್ತಾರೆ. ನಂಬರ್‌ ಪ್ಲೇಟ್‌ಗಳು ಸರಿಯಾಗಿರದಿದ್ದರೆ ಈಗಲೇ ಸರಿ ಮಾಡಿಸಿಕೊಳ್ಳಿ. 

ಬೆಂಗಳೂರು (ಡಿ.25) : ಸಿಲಿಕಾನ್‌ ಸಿಟಿ ಬೆಂಗಳೂರಿನ ದ್ವಿಚಕ್ರ ವಾಹನ ಸವಾರರರೇ ನಿಮ್ಮ ಬೈಕ್‌ಗಳನ್ನು ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡುವಾಗ ಎಚ್ಚರದಿಂದಿರಿ. ಪೊಲೀಸರು ಬಂದು ನಿಮ್ಮ ಬೈಕ್‌ಗಳ ವ್ಹೀಲ್‌ಗಳನ್ನು ಲಾಕ್‌ ಮಾಡುತ್ತಾರೆ. ನಂಬರ್‌ ಪ್ಲೇಟ್‌ಗಳು ಸರಿಯಾಗಿರದಿದ್ದರೆ ಈಗಲೇ ಸರಿ ಮಾಡಿಸಿಕೊಳ್ಳಿ. 

ಹೌದು, ಈವರೆಗೆ ಬೆಂಗಳೂರಿನಲ್ಲಿ ವ್ಹೀಲ್‌ ಲಾಕ್‌ ಮಾಡುವ ಪದ್ದತಿಯನ್ನು ಹೆಚ್ಚಾಗಿ ಕಾರುಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ, ಈಗ ಬೈಕ್‌ಗಳಿಗೂ ವ್ಹೀಲ್‌ ಲಾಕ್‌ ಮಾಡುವ ಪದ್ದತಿಯನ್ನು ಜಾರಿಗೆ ತಂದಿದ್ದಾರೆ. ಈಗ ಸಂಚಾರಿ ಪೊಲೀಸರು ಬೈಕ್‌ಗಳ ಮೇಲೆ ಕಣ್ಣಿಟ್ಟಿದ್ದು, ಬೈಕ್‌ಗಳ ಬಗ್ಗೆ ಯಾವುದಾದರೂ ಸಮಸ್ಯೆಗಳಿದ್ದರೆ ಅಲ್ಲಿಯೇ ಲಾಕ್‌ ಮಾಡಿ ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ. ಇದರಲ್ಲಿ ಬಹುಮುಖ್ಯವಾಗಿ ನಂಬರ್‌ ಪ್ಲೇಟ್‌ಗಳ ಮೇಲೆ ಕಣ್ಣಿಡಲಾಗಿದ್ದು, ನಂಬರ್‌ ಸರಿಯಾಗಿರದಿದ್ದರೆ ನಿಮ್ಮ ಬೈಕ್‌ ಲಾಕ್‌ ಆಗುವುದು ಗ್ಯಾರಂಟಿ ಆಗಿದೆ.

Bengaluru: ಖರೀದಿಗೆ ಬಂದು 16 ಲಕ್ಷದ ಬಿಎಂಡಬ್ಲ್ಯೂ ಬೈಕ್‌ ಎಗರಿಸಿದರು

ದಂಡ ಹಾಕುವುದನ್ನು ತಡೆಯಲು ಕಳ್ಳಾಟ ಆಡಬೇಡಿ: ಹೀಗಾಗಿ ರೋಡ್ ಸೈಡ್ ಬೈಕ್ ಪಾರ್ಕ್ ಮಾಡೋ ಸವಾರರು ಎಚ್ಚರಿಕೆವಹಿಸಬೇಕು. ನಂಬರ್ ಪ್ಲೇಟ್ ನಲ್ಲಿ ಸ್ವಲ್ಪ ಡೌಟ್ ಬಂದ್ರೂ ನಿಂತಲ್ಲೇ ಬೈಕ್‌ ಮತ್ತು ಕಾರು ನಿಂತಲ್ಲೇ ಲಾಕ್‌ ಮಾಡಲಾಗುತ್ತದೆ. ವಾಹನ ಸಂಚಾರ ಮಾಡುವ ವೇಳೆ ಸಿಗ್ನಲ್‌ ಜಂಪ್‌, ಹೆಲ್ಮೆಟ್‌ ಧರಿಸದಿರುವುದು, ತ್ರಿಬಲ್‌ ರೈಡಿಂಗ್ ಸೇರಿ ನಿಯಮ ಉಲ್ಲಂಘನೆ ವೇಖೆ ಪೊಲೀಸರು ಫೋಟೋ ತೆಗೆಯುತ್ತಿದ್ದಾರೆ. ಗಾಡಿ ಮೇಲೆ ಬೀಳುವ ಫೈನ್ ತಪ್ಪಿಸೋಕೆ ನಂಬರ್‌ ಪ್ಲೇಟ್‌ಗಳಲ್ಲಿ ಒಂದು ನಂಬರ್‌ ಅಳಿಸಿ ಹಾಕುವುದು ಅಥವಾ ಒಂದು ಮೂಲೆಯ ಪ್ಲೇಟ್‌ ಮಡಚುವುದು, ಮುರಿಯುವುದು ಹೀಗೆ ಅನೇಕ ರೀತಿಯ ಕಳ್ಳಾಟ ಆಡುತ್ತಿದ್ದಾರೆ. ಇಂಥವರಿಗೆ ಪಾಠ ಕಲಿಸಲೆಂದೇ ಪೊಲೀಸರು ನಂಬರ್‌ ಪ್ಲೇಟ್‌ ಸರಿಯಿಲ್ಲದ ಬೈಕ್‌ಗಳನ್ನು ಲಾಕ್‌ ಮಾಡಿ ದಂಡ ವಸೂಲಿ ಮಾಡುತ್ತಿದ್ದಾರೆ.

ದೋಷಪೂರಿತ ನಂಬರ್‌ ಪ್ಲೇಟ್‌ಗಳ ಬೈಕ್‌ ಹೆಚ್ಚಳ:
ನಗರದಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಹೊಂದಿರುವ ಬೈಕ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಕೆಲ ಕ್ರಿಮಿನಲ್ ಗಳು ದೋಷಪೂರಿತ ನಂಬರ್ ಪ್ಲೇಟ್ ಬಳಸಿ ಗಾಡಿ ಬಳಕೆ ಮಾಡುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ಫೇಕ್ ನಂಬರ್ ಪ್ಲೇಟ್, ದೋಷಪೂರಿತ ನಂಬರ್ ಪ್ಲೇಟ್ ಬಳಸಿ ಕೃತ್ಯ ಎಸಗುತ್ತಿದ್ದಾರೆ. ಮತ್ತೊಂದಡೆ ಯುವಕರು  ಸ್ಟೈಲಿಷ್ ಆಗಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ನಂಬರ್ ಸ್ಟೈಲಿಷ್, ಎಕ್ಸ್‌ಟ್ರಾ ಸ್ಟಿಕ್ಕರ್ ಹಾಕಿಸಿ ಬಳಕೆ ಮಾಡುತ್ತಿದ್ದಾರೆ. ಈ ರೀತಿ ಮಾಡೋರ ಮೇಲೆ ಸಂಚಾರಿ ಪೊಲೀಸರು ಕಣ್ಣಿಟ್ಟಿದ್ದಾರೆ. 

ಪೊಲೀಸರು ಕಳುಹಿಸಿದ ಡಿಜಿಟಲ್ ಚಲನ್‌ ನೋಡಿ ಬೈಕ್ ಸವಾರ ಫುಲ್ ಖುಷ್...!

ಲಾಕ್‌ ಆದರೆ ಕೋರ್ಟ್ ಗೆ ಹೋಗುವುದು ಪಕ್ಕಾ:
ಈಗಾಗಲೇ ರಾಜಧಾನಿಯ ಪಶ್ಚಿಮ‌ ವಿಭಾಗದ ಸಂಚಾರಿ  ಪೊಲೀಸರು ಇಂತಹ ನಂಬರ್‌ ಪ್ಲೇಟ್‌ ಸೂಕ್ತವಾಗಿಲ್ಲದ ಬೈಕ್‌ಗಳ ವ್ಹೀಲ್‌ಗಳನ್ನು ಲಾಕ್‌ ಮಾಡುತ್ತಿದ್ದಾರೆ. ಗಾಡಿ ಲಾಕ್ ಮಾಡಿದ್ಮೇಲೆ ಕೋರ್ಟ್ ನಲ್ಲಿಯೇ ದಂಡವನ್ನು ಕಟ್ಟು ವಾಹನವನ್ನು ವಾಪಸ್‌ ಪಡೆಯಬೇಕು. ಯಾಕೆ ಆ ರೀತಿ ಸ್ಟಿಕ್ಕರ್ ಹಾಕಿಸಿದ್ದು, ದೋಷಪೂರಿತ ಪ್ಲೇಟ್ ಯಾಕೆ? ಎನ್ನುವುದಕ್ಕೂ ಅಲ್ಲಿ ಉತ್ತರಿಸಬೇಕಾಗುತ್ತದೆ. ಈ ಎಲ್ಲಾ ಉತ್ತರದ ಜೊತೆಗೆ ಪಕ್ಕಾ ಡಾಕ್ಯುಮೆಂಟ್, ಲೈಸೆನ್ಸ್ ಸಮೇತ ಗಾಡಿ ತೆಗೆದುಕೊಂಡು ಬರಬೇಕು.

click me!