'ಕಾಂಗ್ರೆಸ್, ಜೆಡಿಎಸ್‌ಗೆ ಆಪರೇಷನ್ ಕಮಲದ ಭಯ ಕಾಡ್ತಿದೆ'

By Suvarna News  |  First Published Dec 7, 2019, 2:27 PM IST

ನನ್ನ ಪ್ರಕಾರ ಬಿಜೆಪಿ ಸರ್ಕಾರ ಹೋಗಲ್ಲ ಎಂದ ಬಸವರಾಜ್ ಹೊರಟ್ಟಿ| ಬಿಜೆಪಿಗೆ ಏಳು ಸೀಟು ಗೆದ್ರೆ ಎಷ್ಟು ಜನ ಹೋಗ್ತಾರೆ ಗೊತ್ತಿಲ್ಲ| ಕಡಿಮೆ ಸೀಟು ಬಂದ್ರೆ ಮತ್ತ ಯಾರ್ಯಾರು ಸೇರಿ ಸರ್ಕಾರ ಉಳಿಸ್ತಾರೆ‌| ಬಿಜೆಪಿ ಹಾವಳಿಗೆ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಬಹಳ ಕಷ್ಟವಾಗಿದೆ| ಬಿಜೆಪಿಗೆ ಪಕ್ಷಾಂತರ ಮಾಡುವ ಕೆಟ್ಟ ಸಂಸ್ಕೃತಿ ಯಾಕೆ ಬಂದಿದೆ ಅನ್ನೋದೆ ಗೊತ್ತಾಗುತ್ತಿಲ್ಲ|


ಬಾಗಲಕೋಟೆ(ಡಿ.07): ಯಾವ ಸಮೀಕ್ಷೆಗಳು ಕರೆಕ್ಟಾಗಿಲ್ಲ, ಮಹಾರಾಷ್ಟ್ರದಲ್ಲಿ ಬಿಜೆಪಿ 180 ಸ್ಥಾನದಲ್ಲಿ ಗೆಲ್ಲುತ್ತೆ ಅಂತ ಹೇಳಾಗುತ್ತು. ಆದರೆ, ಅಲ್ಲಿ ಆಗಿದ್ದೆ ಬೇರೆ. ಉಪಚುನಾವಣೆಯಲ್ಲಿ ಜೆಡಿಎಸ್ 3 ಸ್ಥಾನವಂತೂ ಗೆಲ್ತೀವಿ, ಗೋಕಾಕ್‌ನಲ್ಲಿ ಜೆಡಿಎಸ್ ಗೆಲ್ಲುವ ವಿಶ್ವಾಸ ಇದೆ. ಬೈ ಎಲೆಕ್ಷನ್ ನಲ್ಲಿ ಬಿಜೆಪಿ 7 ಅಥವಾ 8 ಸ್ಥಾನ ಗೆದ್ರೆ ಏನು ಆಗೋಲ್ಲ. ನಾಲ್ಕೈದು ಸ್ಥಾನಗಳು ಬಿಜೆಪಿಗೆ ಬಂದ್ರೆ ಗಂಡಾಂತರವಿದೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ. 

ಶನಿವಾರ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರೂ ಪಕ್ಷದಲ್ಲಿ ಯಾವ ಶಾಸಕರಿಗೂ ಚುನಾವಣೆಗೆ ಹೋಗುವ ಮನಸ್ಸಿಲ್ಲ. ಚುನಾವಣೆಗೇ ಹೋಗುವ ಪರಿಸ್ಥಿತಿ ಬಂದ್ರೆ ಯಾರ್ಯಾರು ಎಲ್ಲಿಗೆ ಹೋಗ್ತಾರೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸುಪ್ರೀಂಕೋರ್ಟ್ ಅನರ್ಹರಿಗೂ ಸ್ಪರ್ಧೆಗೆ ಅವಕಾಶ ನೀಡಿದೆ. ಪಕ್ಷಾಂತರಕ್ಕೆ ಏನೂ ಅಭ್ಯಂತರವಿಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.ನನ್ನ ಪ್ರಕಾರ ಬಿಜೆಪಿ ಸರ್ಕಾರ ಹೋಗಲ್ಲ. ಬಿಜೆಪಿಗೆ ಏಳು ಸೀಟು ಗೆದ್ರೆ ಎಷ್ಟು ಜನ ಹೋಗ್ತಾರೆ ಗೊತ್ತಿಲ್ಲ. ಕಡಿಮೆ ಸೀಟು ಬಂದ್ರೆ ಮತ್ತ ಯಾರ್ಯಾರು ಸೇರಿ ಸರ್ಕಾರ ಉಳಿಸ್ತಾರೆ‌. ಬಿಜೆಪಿ ಹಾವಳಿಗೆ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಬಹಳ ಕಷ್ಟವಾಗಿದೆ. ಬಿಜೆಪಿಗೆ ಪಕ್ಷಾಂತರ ಮಾಡುವ ಕೆಟ್ಟ ಸಂಸ್ಕೃತಿ  ಯಾಕೆ ಬಂದಿದೆ ಅನ್ನೋದೆ ಗೊತ್ತಾಗುತ್ತಿಲ್ಲ. 17 ಶಾಸಕರ ಪಕ್ಷಾಂತರ ಮಾಡಿ ಏನು ಸಾಧನೆ ಮಾಡಿದ್ದೀರಿ ಎಂದು ಬಿಜೆಪಿಯವರಿಗೆ ಪ್ರಶ್ನಿಸಿದ್ದಾರೆ. 

ಮೈತ್ರಿ ಸರ್ಕಾರ ಇದ್ದಾಗ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿತ್ತು. ಶಾಸಕರನ್ನು ರಾಜೀನಾಮೆ ಕೊಡಿಸೋದು ಸರಿಯಲ್ಲ. ಬಿಜೆಪಿಗೆ ಬೈ ಎಲೆಕ್ಷನ್ ನಲ್ಲಿ ಕಡಿಮೆ ಸೀಟು ಬಂದ್ರೆ ಖಂಡಿತಾ ಮತ್ತೆ ಆಪರೇಷನ್ ಕಮಲ ಮಾಡ್ತಾರೆ ಎಂದು ಹೇಳಿದ್ದಾರೆ. 

ರಮೇಶ್ ಜಾರಕಿಹೊಳಿ ಸರ್ಕಾರ ನಾನೇ ಕೆಡವಿದ್ದೇನೆ ಅಂತಾನೆ.ಇದೇನು ದೊಡ್ಡ ದೊಡ್ಡ ಸಾಧನೆ ಏನಲ್ಲ. ಬಿಜೆಪಿ ಸರ್ಕಾರ ಬಂದಾಗೊಮ್ಮೆ ಆಪರೇಷನ್ ಕಮಲ ಮಾಡುವ ಪರಿಸ್ಥಿತಿ ಬಂದಿದೆ. ಬಿಜೆಪಿಗೆ ಕಡಿಮೆ ಸೀಟು ಬಂದ್ರೆ ಆಪರೇಷನ್ ಕಮಲ ಮಾಡ್ತಾರೆ. ಆಪರೇಷನ್ ಕಮಲ ಆಗ್ದಿದ್ರೆ ಜೆಡಿಎಸ್ ಬೆಂಬಲ ಕೇಳ್ತಾರೆ ಎಂದು ಹೇಳಿದ್ದಾರೆ. 

ಎಚ್ ಡಿ ಕುಮಾರಸ್ವಾಮಿ ಹಾಗೂ ಎಚ್ ಡಿ ದೇವೇಗೌಡ ಅವರು ಸರ್ಕಾರ ಬೀಳೋಲ್ಲ ಎಂದಿದ್ದಾರೆ. ಬೀಳೊಲ್ಲಂದ್ರೆ ಜಾದು ಮಾಡೋಕೆ ಆಗೋಲ್ಲ. ಅನಿವಾರ್ಯವಾಗಿ ಸರ್ಕಾರ ಉಳಿಸಬೇಕಾದ್ರೆ ಶಾಸಕರ ರಾಜೀನಾಮೆ ಕೊಡಿಸೋ ಬದಲಿಗೆ ನೀವು  ಸಪೋರ್ಟ್  ಮಾಡಿ ಎಂದು ಭಾಷೆಗಳು ಅಲ್ಲಲ್ಲಿ ನಡೀತಿವೆ. ನಾನು ಸತ್ಯವನ್ನೇ ಹೇಳ್ತೀನಿ ಅದು ನನಗೆ ಸಮಸ್ಯೆ ಆಗಿದೆ ಎಂದಿದ್ದಾರೆ. 

ಹಿಂದೆ ಮೈತ್ರಿ ಸರ್ಕಾರ ಇದ್ದಾಗ ಚುನಾವಣೆಗೆ ಹೋಗೋಣ ಎಂದಿದ್ದೆ ನನ್ನ ಮಾತು ಯಾರು ಕೇಳಲಿಲ್ಲ. ಸರ್ಕಾರ ಬೀಳಬಾರದು ಅಂದ್ರೆ ಮೂರು ಪಾರ್ಟಿಯವರು ಸಹಮತದಿಂದ ಮಾಡ್ತಾರಂತ ನನ್ನ ಅಭಿಪ್ರಾಯವಾಗಿದೆ. ಜೆಡಿಎಸ್ ಬಾಹ್ಯ ಬೆಂಬಲ ಕೊಡುವ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ನಾಳೆ, ನಾಡಿದ್ದು ಸೇರುತ್ತೇವೆ. ಆಗ ಚರ್ಚೆ ಮಾಡುತ್ತೇವೆ. ಕಾಂಗ್ರೆಸ್, ಜೆಡಿಎಸ್‌ಗೆ ಆಪರೇಷನ್ ಕಮಲದ ಭಯ ಇದೆ ಎಂದು ಹೇಳಿದ್ದಾರೆ. 

click me!