ಬೆಂಗಳೂರು: ಇನ್ಫೋಸಿಸ್ ಉದ್ಯೋಗಿ, ಬೈಕ್ ಟ್ಯಾಕ್ಸಿ ಡ್ರೈವರ್ ಆದ ಕಥೆ!

Published : Apr 08, 2025, 07:26 PM ISTUpdated : Apr 08, 2025, 08:09 PM IST
ಬೆಂಗಳೂರು: ಇನ್ಫೋಸಿಸ್ ಉದ್ಯೋಗಿ,  ಬೈಕ್ ಟ್ಯಾಕ್ಸಿ ಡ್ರೈವರ್ ಆದ ಕಥೆ!

ಸಾರಾಂಶ

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಬೈಕ್ ಟ್ಯಾಕ್ಸಿ ಬುಕ್ ಮಾಡಿದಾಗ, ಇನ್ಫೋಸಿಸ್ ಉದ್ಯೋಗಿಯೊಬ್ಬರು ಚಾಲಕರಾಗಿದ್ದರು. ಬಿಡುವಿನ ವೇಳೆಯಲ್ಲಿ ಹೆಚ್ಚುವರಿ ಹಣ ಗಳಿಸಲು ಮತ್ತು ಒಂಟಿತನ ಹೋಗಲಾಡಿಸಲು ಬೈಕ್ ಟ್ಯಾಕ್ಸಿ ಓಡಿಸಲು ನಿರ್ಧರಿಸಿದ್ದಾಗಿ ಅವರು ತಿಳಿಸಿದರು. ಆದರೆ, ಹೆಚ್ಚುತ್ತಿರುವ ಗಿಗ್ ಕೆಲಸಗಳು ಆಳವಾದ ಸಮಸ್ಯೆಗಳನ್ನು ಮುಚ್ಚಿಹಾಕುತ್ತಿವೆಯೇ ಎಂದು ಮಹಿಳೆ ಪ್ರಶ್ನಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿಗಳನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ಬೆಂಗಳೂರು (ಏ.8): ರಾಜಧಾನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯೊಬ್ಬರು ಆಫೀಸ್ ಗೆ ಹೋಗುವ ನಿಟ್ಟಿನಲ್ಲಿ ಬೈಕ್ ಟ್ಯಾಕ್ಸಿ ಬುಕ್‌ ಮಾಡಿದರು. ಆದರೆ ಟ್ಯಾಕ್ಸಿ ಬುಕ್‌ ಮಾಡಿದ ಮಹಿಳೆಗೆ ಅಚ್ಚರಿ ಕಾದಿತ್ತು. ಇನ್ಫೋಸಿಸ್‌ ನಲ್ಲಿ ಕೆಲಸ ಮಾಡುವ ಉದ್ಯೋಗಿ ಅವರ ಟ್ಯಾಕ್ಸಿ ಡ್ರೈವರ್ ಆಗಿದ್ದರು. ಲಿಂಕ್ಡ್‌ಇನ್‌ನಲ್ಲಿನಲ್ಲಿ, ಚಾರ್ಮಿಖಾ ನಾಗಲ್ಲ ಎಂಬುವವರು ಫೋಟೋ ಹಾಕಿ  ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.   "ನಾನು ಹೇಳುತ್ತಿರುವುದು ಕೇಳಿಸುತ್ತಿದೆಯೇ?" ಎಂಬ ಮಾತಿನಿಂದ ಪ್ರಯಾಣ ಪ್ರಾರಂಭವಾಯಿತು. ಅಲ್ಲದೆ  ಉತ್ತಮ ಕಾರ್ಪೊರೇಟ್ ಭಾಷೆಯಲ್ಲಿ ಈ ರೀತಿ ಕೇಳಿದ್ದಕ್ಕೆ ನಾನು ಕುತೂಹಲದಿಂದ  ಸಂಭಾಷಣೆ ನಡೆಸಿದೆ ಮತ್ತು ಬೈಕ್ ಟ್ಯಾಕ್ಸಿ ಸವಾರನಾಗಿ  ಅದು ಅವರ ಮೊದಲ ದಿನವಾಗಿತ್ತು.

ಇನ್ಮುಂದೆ ಕರ್ನಾಟಕದಲ್ಲಿ ಓಲಾ ಊಬರ್ ರ್ಯಾಪಿಡೊ ಬೈಕ್‌ ಸೇವೆ ಬಂದ್‌! ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಮಧ್ಯೆ ನಾನು  10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ  ಕಚೇರಿಗೆ ತಲುಪಬೇಕೆಂಬ ಕಾರಣಕ್ಕೆ ನಾನು ಬೈಕ್ ಟ್ಯಾಕ್ಸಿಗಳನ್ನು ಪ್ರಯೋಗಿಸುತ್ತಿದ್ದೇನೆ. ಆದರೆ ಈ ಬಾರಿ, ಚಾಲಕ (ಅಥವಾ ಸವಾರ) ತುಂಬಾ ಉತ್ಸಾಹಭರಿತನಾಗಿ ಕಾಣುತ್ತಿದ್ದ. ಸ್ಪಷ್ಟವಾಗಿ, ಇದು ಅವನ ಮೊದಲ ದಿನ, ಆದ್ದರಿಂದ ನಾನು ಅವನನ್ನು  ಮಾತನಾಡಿಸಿದೆ. ಅವರು ಇನ್ಫೋಸಿಸ್‌ನಲ್ಲಿ ಗುತ್ತಿಗೆ ನಿರ್ವಹಣಾ ತಂಡದಲ್ಲಿ ಕೆಲಸ ಮಾಡುತ್ತಾರೆ," ಎಂದು ನಾಗಲ್ಲ ತನ್ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸವಾರನು ತನ್ನ ಬಿಡುವಿನ ವೇಳೆಯನ್ನು ಡೂಮ್-ಸ್ಕ್ರೋಲಿಂಗ್‌ನಲ್ಲಿ ಕಳೆಯುವ ಬದಲು ಸ್ವಲ್ಪ ಹೆಚ್ಚುವರಿ ಹಣವನ್ನು ಗಳಿಸಲು ಮತ್ತು  ವಾರಾಂತ್ಯ , ಕಚೇರಿಗೆ ಹೋಗುವ ಮೊದಲು ಬೈಕ್‌ ಟ್ಯಾಕ್ಸಿ  ಓಡಿಸಲು ನಿರ್ಧರಿಸಿದ್ದಾಗಿ ನಾಗಲ್ಲ ಅವರ ಬಳಿ ಹಂಚಿಕೊಂಡಿದ್ದಾನೆ. ಬೈಕ್‌ ಟ್ಯಾಕ್ಸಿ ಓಡಿಸಲು ಗಾಡಿಯನ್ನು ಪ್ರೀಮಿಯಂ ಬೈಕ್ ಆಗಿ ಬದಲಾಗಿದೆ, ಇದು ಉನ್ನತ ಮಟ್ಟದ ಗೇರ್ ಮತ್ತು ಸುಂದರವಾಗಿ ಅಲಂಕೃತವಾಗಿದೆ.  ಕೆಲಸದಿಂದ ಮನೆಗೆ ಒಬ್ಬಂಟಿಯಾಗಿ ಏಕೆ ಡ್ರೈವ್ ಮಾಡಬೇಕು? ಒಂದು ರೈಡ್ ಅನ್ನು ಪೂರ್ಣಗೊಳಿಸಿದರೆ ಅದು ಕೂಡ ದುಡಿಮೆಯೇ ಅಲ್ಲವೆ? ಬೆಂಗಳೂರು ನನ್ನನ್ನು ಎಂದಿಗೂ ಅಚ್ಚರಿಗೊಳಿಸಲು ವಿಫಲವಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಓಲಾ, ಉಬರ್‌ ರೀತಿಯಲ್ಲಿ ದೇಶದಲ್ಲಿ ಕೇಂದ್ರ ಸರ್ಕಾರದಿಂದಲೇ ಸಹಕಾರಿ ಟ್ಯಾಕ್ಸಿ ಸೇವೆ: ಅಮಿತ್ ಶಾ ಘೋಷಣೆ!

ನಾಗಲ್ಲ ತನ್ನ ಪೋಸ್ಟ್ ಅನ್ನು ಕಳವಳಕಾರಿ ಸಂದೇಶದೊಂದಿಗೆ ಮುಗಿಸಿದ್ದಾರೆ. ಹೆಚ್ಚಿನ ಜನರು ಗಿಗ್ ಕೆಲಸವನ್ನು ಸ್ವೀಕರಿಸುವುದನ್ನು ನೋಡುವುದು ಸಂತೋಷವಾದರೂ, ನಾನು ಆಶ್ಚರ್ಯ ಪಡದೆ ಇರಲಾರೆ.  ಇತ್ತೀಚೆಗೆ ಒಂಟಿತನವು ಸಾಂಕ್ರಾಮಿಕ ರೋಗವಾಗುತ್ತಿದೆಯೇ? ಒಂಟಿತನವನ್ನು  ಹೋಗಲಾಡಿಸಲು ವಾರಾಂತ್ಯದಲ್ಲಿ ಆಟೋ ಚಾಲಕನಾಗಿ ಮೈಕ್ರೋಸಾಫ್ಟ್ ಉದ್ಯೋಗಿ ದುಡಿಯುತ್ತಿರುವ ಮೂನ್‌ಲೈಟ್ ಅನ್ನು ನಾವು ನೋಡಿದ್ದೇವೆ.   ನಾವು 'ಹಸ್ಲಿಂಗ್' ಮೂಲಕ ಆಳವಾದ ಸಮಸ್ಯೆಗಳನ್ನು ಒಳಗೊಳ್ಳುತ್ತಿದ್ದೇವೆಯೇ? ಎಂದು  ನನ್ನನ್ನು ಯೋಚಿಸುವಂತೆ ಮಾಡಿದೆ ಎಂದಿದ್ದಾರೆ.

ಇನ್ನು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೈಕ್‌ ಟ್ಯಾಕ್ಸಿ ಓಡಿಸಿ ಜೀವನ ಮಾಡುವವರ ಭವಿಷ್ಯವೇನು ಎಂಬುದನ್ನು ನೋಡಬೇಕಿದೆ.

 

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ