ಬೆಂಗಳೂರಿನಲ್ಲಿ ಕಾವೇರಿ ನೀರಿನಿಂದ ಕಾರ್ ವಾಶ್ ಮಾಡಿದ ಮೂವರಿಗೆ ತಲಾ 5 ಸಾವಿರ ರೂ ದಂಡ ವಿಧಿಸಲಾಗಿದೆ.
ಬೆಂಗಳೂರು (ಮಾ.24): ಬೆಂಗಳೂರಿನಲ್ಲಿ ಕಾವೇರಿ ನೀರಿನಿಂದ ಕಾರ್ ವಾಶ್ ಮಾಡಿದ ಮೂವರಿಗೆ ತಲಾ 5 ಸಾವಿರ ರೂ ದಂಡ ವಿಧಿಸಲಾಗಿದೆ. ನೀರಿನ ಅಭಾವದ ಹಿನ್ನೆಲೆ ಮಿತವಾಗಿ ನೀರು ಬಳಸುವ ಬಗ್ಗೆ ಜಾಗೃತ ಕಾರ್ಯಕ್ರಮಗಳು ನಡೆಯುತ್ತಿದ್ದು, ನೀರಿನ ಅಭಾವದ ಬೆನ್ನಲ್ಲೇ ಕಾರು ವಾಶ್ ಮಾಡುತ್ತಿದ್ದ ಬೆಂಗಳೂರು ಜಲಮಂಡಳಿ ಮೂವರಿಗೆ ದಂಡ ವಿಧಿಸಿದೆ.
ಬೆಂಗ್ಳೂರಲ್ಲಿ ನೀರಿನ ಕೊರತೆ ನಡುವೆಯೂ ಹೋಟೆಲಲ್ಲಿ ಹೋಳಿ ಪೂಲ್ ಪಾರ್ಟಿ..!
undefined
ಸದಾಶಿವನಗರದಲ್ಲಿ ಕಾವೇರಿ ನೀರಿನಿಂದ ಕಾರ್ ವಾಶ್ ಮಾಡುತ್ತಿದ್ದ ಮಹಿಳೆಗೆ ₹5,000 ದಂಡ ವಿಧಿಸಿದ್ದು, ಜಲಮಂಡಳಿಯ ಅಧಿಕಾರಿಗಳು ಸ್ಥಳದಲ್ಲೇ ದಂಢ ಕಟ್ಟಿಸಿಕೊಂಡಿದ್ದಾರೆ. ಇನ್ನು ಮಹಾದೇವಪುರ ಮತ್ತು ಡಾಲರ್ಸ್ ಕಾಲೋನಿಯಲ್ಲಿ ಕೂಡ ಇಬ್ಬರಿಗೆ ದಂಡ ವಿಧಿಸಲಾಗಿದೆ.
ಬೆಂಗಳೂರಿನ 110 ಹಳ್ಳಿಗಳಿಗೆ ಜೂನ್ ವೇಳೆಗೆ 775 ಎಂಎಲ್‌ಡಿ ನೀರು ಪೂರೈಕೆ; ಸಿಎಂ ಸಿದ್ದರಾಮಯ್ಯ
ಕಾವೇರಿ ನೀರು ವ್ಯರ್ಥ ಮಾಡದಂತೆ ಜಲಮಂಡಳಿ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಾರ್ ವಾಶ್, ಹೂ ತೋಟಕ್ಕೆ ಕಾವೇರಿ ನೀರು ಬಳಸದಂತೆ ಸೂಚನೆ ನೀಡಿದೆ. ಸೂಚನೆ ಹೊರತಾಗಿಯೂ ಕಾರ್ ವಾಶ್ ಗೆ ಕಾವೇರಿ ನೀರು ಬಳಕೆ ಮಾಡಲಾಗಿದ್ದು, ದಂಢ ಬಿದ್ದಿದೆ