Greater Bengaluru: ಬೆಂಗಳೂರಿನ ಖಾಲಿ ಸೈಟ್ ಮಾಲೀಕರೇ ಎಚ್ಚರ; ಈ ನಿಯಮ ಪಾಲಿಸದಿದ್ದರೆ ₹1,00,000 ದಂಡ ಖಚಿತ!

Published : Jul 28, 2026, 04:44 PM IST
bengaluru vacant plot owners fine

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ನಗರದ ಖಾಲಿ ನಿವೇಶನಗಳ ಮಾಲೀಕರಿಗೆ ಆಗಸ್ಟ್ 15ರೊಳಗೆ ತಮ್ಮ ಜಾಗವನ್ನು ಸ್ವಚ್ಛಗೊಳಿಸಲು ಗಡುವು ನೀಡಿದೆ. ತಪ್ಪಿದಲ್ಲಿ, ₹25,000 ದಿಂದ ₹1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಮತ್ತು ಸ್ವಚ್ಛತಾ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರು (ಜು.28): ಬೆಂಗಳೂರನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವನ್ನಾಗಿ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA - Greater Bengaluru Authority) ಬಿಗಿ ಕ್ರಮಕ್ಕೆ ಮುಂದಾಗಿದೆ. ನಗರದಲ್ಲಿರುವ ಖಾಲಿ ನಿವೇಶನಗಳ (Vacant Plots) ಮಾಲೀಕರು ತಮ್ಮ ಜಾಗದಲ್ಲಿ ಬೆಳೆದಿರುವ ಗಿಡಗಂಟಿ, ಶೇಖರಣೆಯಾಗಿರುವ ಕಸ ಹಾಗೂ ಡೆಬ್ರಿಸ್ ಅನ್ನು ಆಗಸ್ಟ್ 15ರೊಳಗಾಗಿ ಸ್ವತಃ ಸ್ವಚ್ಛಗೊಳಿಸಬೇಕು. ತಪ್ಪಿದ್ದಲ್ಲಿ ₹25,000 ದಿಂದ ಗರಿಷ್ಠ ₹1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ (Maheshwar Rao) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ:

ಬೆಂಗಳೂರು ನಗರದಲ್ಲಿ ಕಪ್ಪುಚುಕ್ಕೆಗಳು (Blackspots), ಕಟ್ಟಡ ಭಗ್ನಾವಶೇಷಗಳು, ಮರದ ಕೊಂಬೆಗಳು ಹಾಗೂ ರಸ್ತೆ ಬದಿಯಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳು ಮತ್ತು ಪೈಪುಗಳನ್ನು ತೆರವುಗೊಳಿಸಲು "ತ್ಯಾಜ್ಯದಿಂದ ಸ್ವಾತಂತ್ರ್ಯ" (Freedom from Waste) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020ರ (Solid Waste Management Bye-laws 2020) ನಿಯಮ 18(1)(ಬಿ) ರನ್ವಯ ಖಾಲಿ ಸೈಟ್‌ಗಳನ್ನು ನೈರ್ಮಲ್ಯಯುತವಾಗಿಡುವುದು ಮಾಲೀಕರ ಕಡ್ಡಾಯ ಜವಾಬ್ದಾರಿಯಾಗಿದೆ.

ಸ್ವಚ್ಛಗೊಳಿಸದಿದ್ದರೆ ಆಸ್ತಿ ತೆರಿಗೆಯೊಂದಿಗೆ ವೆಚ್ಚ ವಸೂಲಿ!

ಒಂದು ವೇಳೆ ಆಗಸ್ಟ್ 15ರೊಳಗಾಗಿ ಮಾಲೀಕರು ಸೈಟ್ ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯೇ ತ್ಯಾಜ್ಯವನ್ನು ತೆರವುಗೊಳಿಸಲಿದೆ. ಅದಕ್ಕೆ ತಗುಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ಲೆಕ್ಕ ಹಾಕಿ, ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಅಡಿ ಆಸ್ತಿ ತೆರಿಗೆಯೊಂದಿಗೆ (Property Tax) ಸೇರಿಸಿ ವಸೂಲಿ ಮಾಡಲಾಗುತ್ತದೆ. ಇದನ್ನು ಪಾವತಿಸದಿದ್ದರೆ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಪ್ರಕಾರ ಆಸ್ತಿ ಮುಟ್ಟುಗೋಲು ಕ್ರಮ ಜರುಗಿಸಲಾಗುತ್ತದೆ.

ದಂಡದ ವಿವರ ಹೀಗಿದೆ:

  • ಮೊದಲ ಬಾರಿಗೆ ಉಲ್ಲಂಘನೆ ಮಾಡಿದರೆ: ₹25,000 ದಂಡ.
  • ನಂತರದ ಉಲ್ಲಂಘನೆಗಳಿಗೆ: ₹50,000 ದಿಂದ ಗರಿಷ್ಠ ₹1,00,000 (1 ಲಕ್ಷ ರೂ.) ವರೆಗೆ ದಂಡ ವಿಧಿಸಲಾಗುವುದು.
  • ದೂರು ನೀಡಲು ವಾಟ್ಸಾಪ್ ಚಾಟ್‌ಬಾಟ್ (WhatsApp Chatbot) ಲಭ್ಯ:
  • ಸಾರ್ವಜನಿಕರ ಸುತ್ತಮುತ್ತಲಿನ ಖಾಲಿ ನಿವೇಶನಗಳನ್ನು ಆಗಸ್ಟ್ 15ರೊಳಗೆ ಸ್ವಚ್ಛಗೊಳಿಸದಿದ್ದರೆ, ಸಾರ್ವಜನಿಕರೇ ಫೋಟೋ ತೆಗೆದು ಜಿಪಿಎಸ್ ಲೋಕೇಶನ್‌ನೊಂದಿಗೆ (GPS Co-ordinates) ದೂರು ನೀಡಬಹುದು.
  • ವಾಟ್ಸಾಪ್ ಸಂಖ್ಯೆ: +91-9448197197
  • ದೂರು ನೀಡಿದ ನಾಗರಿಕರ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿ (Confidential) ಇಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಕಾಂಪೌಂಡ್ ಹಾಕುವುದು ಕಡ್ಡಾಯ:

ಸೈಟ್ ಮಾಲೀಕರು ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿದ ನಂತರ ಇತರರು ಮತ್ತೆ ಅಲ್ಲಿ ಅನಧಿಕೃತವಾಗಿ ಕಸ ಹಾಕದಂತೆ ತಡೆಯಲು, ಸೈಟ್‌ ಸುತ್ತಲೂ ಬೇಲಿ ಅಥವಾ ಕಾಂಪೌಂಡ್ ಗೋಡೆ (Compound Wall) ನಿರ್ಮಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಬಿಎ ಸ್ಪಷ್ಟಪಡಿಸಿದೆ.

PREV
Read more Articles on
click me!

Recommended Stories

ಶಿಕ್ಷಣ ಕ್ಷೇತ್ರಕ್ಕೆ ಎಚ್ಚರಿಕೆ ಗಂಟೆ: ಬಿಹಾರ, ಉತ್ತರ ಪ್ರದೇಶಕ್ಕಿಂತ ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಶಾಲಾ ಡ್ರಾಪ್‌ಔಟ್ ಹೆಚ್ಚಳ
ಶಿವರಾಮ ಕಾರಂತ ಲೇಔಟ್ ಸೈಟ್‌ ದರ ಚದರಡಿಗೆ ₹6,000ಕ್ಕೆ ಹೆಚ್ಚಿಸಿದ ಬಿಡಿಎ, ಈಗ ಪ್ರತಿ 30X40 ಸೈಟ್‌ಗೆ 72 ಲಕ್ಷ!