Bengaluru: ಕಟ್ಟಡ ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳ ದಾರುಣ ಸಾವು

By Sathish Kumar KHFirst Published Oct 29, 2023, 8:18 PM IST
Highlights

ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ನೀರಿನ ತೊಟ್ಟಿಗೆ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಬೆಂಗಳೂರು (ಅ.29): ನಿರ್ಮಾಣ ಹಂತದ ಕಟ್ಟಡದ ಬೇಸ್‌ಮೆಂಟ್‌ ನೀರಿನಲ್ಲಿ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ. 

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಕ್ಕಳನ್ನು ಆಡುವುದಕ್ಕೆ ಬಿಡುವ ಮುನ್ನ ಎಚ್ಚರವಹಿಸಬೇಕು. ಕಾರಣ ಮಕ್ಕಳು ಆಟವಾಡುತ್ತಾ ಬಿದ್ದು ಅಪಘಾತಕ್ಕೆ ಒಳಗಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅದೇ ರೀತಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ನಿರ್ಮಿಸಲಾಗಿದ್ದ ನೀರಿನ ತೊಟ್ಟಿಯಲ್ಲಿ ಇಬ್ಬರು ಮಕ್ಕಳು ಬಿದ್ದು ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಘಟನೆ ನಡೆದ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಮಕ್ಕಳನ್ನು ಹುಡುಕಾಡಿದ್ದು, ಮಕ್ಕಳು ಆಟವಾಡುವ ಎಲ್ಲ ಸ್ಥಳದಲ್ಲಿ ಶೋಧ ಮಾಡಿದಾಗ ಕಟ್ಟಡದ ಕಡೆಗೆ ಹೋಗಿರಬಹುದು ಎಂದು ಪೋಷಕರು ನೋಡಿದ್ದಾರೆ. ಈ ವೇಳೆ ಕಟ್ಟಡದ ಬೇಸ್ಮೆಂಟ್‌ನ ಸಂಪ್‌ನಲ್ಲಿ ಮಕ್ಕಳ ಚಪ್ಪಲಿ ತೇಲಾಡುತ್ತಿದ್ದು ಮಕ್ಕಳು ಇದರಲ್ಲಿ ಮುಳುಗಿರಬಹುದು ಎಂದು ಅನುಮಾನಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಿದಾಗ ಮಕ್ಕಳ ಮೃತದೇಹಗಳನ್ನು ತೆಗೆಯಲಾಗಿದೆ.

Latest Videos

ಬಟ್ಟ ಬಯಲಿನಲ್ಲಿ ಮಹಿಳೆಯ ಸೀರೆ ಹಿಡಿದೆಳೆದ ಪರಪುರುಷ: ಮನನೊಂದು ಆತ್ಮಹತ್ಯೆಗೆ ಶರಣಾದ ಗೃಹಿಣಿ

ಕಟ್ಟಡದಲ್ಲಿ ನೀರನ್ನು ಬಿಡಲು ಬೇಸ್ಮೆಂಟ್‌ನಲ್ಲಿ ನೀರು ಸಂಗ್ರಹಣೆ ಮಾಡಲಾಗಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಕಟ್ಟಡ ನಿರ್ಮಾಖ ಕಾರ್ಯ ಸ್ಥಗಿತಗೊಂಡಿದ್ದರಿಂದ ಮಕ್ಕಳು ಅಲ್ಲಿಗೆ ಆಟವಾಡಲು ಹೋಗುತ್ತಿದ್ದರು. ಅದೇ ರೀತಿ ಭಾನುವಾರ ಕೂಡ ಆಟವಾಡಲು ಹೋದ ಮಕ್ಕಳಾದ ಅರ್ಷಲನ್ ಖಾನ್(9) ಹಾಗೂ ಅಮೀನ್ ಖಾನ್ (7) ನೀರಿನ ತೊಟ್ಟಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಬನ್ನೇರುಘಟ್ಟ ರಸ್ತೆಯ ಪಕ್ಕದಲ್ಲಿರುವ ಕಟ್ಟಡದಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಸುದ್ದಗುಂಟೆ ಪಾಳ್ಯ ಪೊಲೀಸರ ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ.

ಹಾಡಹಗಲೇ ಪೊಲೀಸ್‌ ಮನೆಗೆ ಕನ್ನ ಹಾಕಲು ಬಂದ ಕಳ್ಳರು: 
ತುಮಕೂರು (ಅ.29):
ಹಾಡಹಗಲೇ ಪೊಲೀಸ್ ಮನೆಗೆ ಕನ್ನ ಹಾಕಲು ಯತ್ನ ಮಾಡಿದ ಖದೀಮರು ಮನೆಯ ಒಳಗೆ ಇದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ವಿದ್ಯಾನಗರದಲ್ಲಿ ನಡೆದಿದೆ.  ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿರೋ ಮಹೇಶ್ ಮನೆಯಲ್ಲಿ ಕಳ್ಳತನಕ್ಕೆ ಯತ್ನ ಮಾಡಲಾಗಿದೆ. ಭಾನುವಾರ ಬೆಳಗ್ಗೆ ಮನೆ ಬಾಗಿಲು ಬೀಗ ಹಾಕಿಕೊಂಡು ಕುಟುಂಬ ಸಮೇತವಾಗಿ ಹೆಡ್‌ಕಾನ್ಸ್‌ಸ್ಟೇಬಲ್‌ ಮಹೇಶ್‌ ಹೊರಗೆ ಹೋಗಿದ್ದರು.

ಮನೆಗೆ ಬೀಗ ಹಾಕಿರೋದನ್ನ ಗಮನಿಸಿದ ನಾಲ್ವರು ಖದೀಮರು, ಒಂದು ಕಾರಿನಲ್ಲಿ ಮಾರಕಾಸ್ತ್ರಗಳ ಸಮೇತ ಬಂದಿದ್ದರು. ಈ ಪೈಕಿ ಇಬ್ಬರು ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ಮುಂದಾಗಿದ್ದರು. ಖದೀಮರ ಫೈಕಿ ಇಬ್ಬರು ಮನೆಯೊಳಗೇ ನುಗ್ಗಿದರೆ, ಮತ್ತಿಬ್ಬರು ಮನೆ ಹೊರಗಡೆ ವಾಚ್ ಮಾಡುತ್ತಿದ್ದರು.ಪೊಲೀಸರ ಮನೆಗೆ ಅಪರಿಚಿತರು ಕಾರಿನಲ್ಲಿ ಬಂದಿರುವುದನ್ನು ಗಮನಿಸಿದ ಸ್ಥಳೀಯರು ಖದೀಮರ ಚಲನವಲನ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸಿ: ಸರ್ಕಾರಕ್ಕೆ ಶಾಸಕ ಅರವಿಂದ ಬೆಲ್ಲದ ಮನವಿ

ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆಗ, ಮನೆಯ ಹೊರಗೆ ಕಾರಿನಲ್ಲಿ ಕುಳಿತಿದ್ದ ಇಬ್ಬರು ಖದೀಮರು ಎಸ್ಕೇಪ್ ಆಗಿದ್ದಾರೆ. ಆದರೆ, ಮನೆಯೊಳಗಿದ್ದ ಇಬ್ಬರನ್ನ ಪೊಲೀಸರು ಸೀನಿಮಿಯ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ. ಈ ವೇಳೆ ಕಳ್ಳರು, ಪೋಲೀಸರ ಮೇಲೆಯೇ ಡ್ರ್ಯಾಗರ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಆದರೂ, ಅವರನ್ನು ಬಿಡದೇ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 

click me!