ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು 11 ಹೊಸ ಫ್ಲೈಓವರ್; ₹3,055 ಕೋಟಿ ಮೆಗಾ ಪ್ಲ್ಯಾನ್!

Published : May 22, 2026, 05:14 PM IST
Flyovers

ಸಾರಾಂಶ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಿಸಲು, ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮ್ಲೈಲ್) 3,055 ಕೋಟಿ ರು. ವೆಚ್ಚದಲ್ಲಿ 11 ಹೊಸ ಫ್ಲೈಓವರ್‌ಗಳನ್ನು ನಿರ್ಮಿಸಲು ಮುಂದಾಗಿದೆ. ನಗರದ ಕೇಂದ್ರ ಭಾಗ, ಮೈಸೂರು ರಸ್ತೆ, ಯಲಹಂಕ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಈ ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಬೆಂಗಳೂರು: ಸಂಚಾರ ದಟ್ಟಣೆ ನಿವಾರಣೆಗಾಗಿ 3,055 ಕೋಟಿ ರು. ವೆಚ್ಚದಲ್ಲಿ ನಗರದಲ್ಲಿ 11 ಹೊಸ ಫ್ಲೈಓವರ್‌ಗಳ (ಮೇಲ್ಸೇತುವೆ) ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮ್ಲೈಲ್) ಮುಂದಾಗಿದೆ. ನಗರದ ಕೇಂದ್ರ ಭಾಗದಲ್ಲಿನ ಜಂಕ್ಷನ್‌ಗಳು, ವೃತ್ತಗಳು, ಪ್ರಮುಖ ರಸ್ತೆಗಳಲ್ಲಿ ಫ್ಲೈಓವರ್‌ಗಳು ತಲೆ ಎತ್ತಲಿವೆ. ಟೆಂಡರ್ ಅಂತಿಮಗೊಂಡು ಕಾಮಗಾರಿಗೆ ಚಾಲನೆ ನೀಡಿದ ಬಳಿಕ 18 ತಿಂಗಳಲ್ಲಿ ಕಾಮಗಾರಿ ಮುಗಿಸುವ ಗಡುವು ನೀಡಲಾಗಿದೆ. ಈ ಕಾಮಗಾರಿ ಅವಧಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಫ್ಲೈಓವರ್‌ಗಳು

ನಗರದ ಕೇಂದ್ರ ಭಾಗದಲ್ಲಿ ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ, ಮೈಸೂರು ರಸ್ತೆಯಲ್ಲಿ ಬಾಲ ಗಂಗಾಧರನಾಥ ಫ್ಲೈಓವರ್‌ನಿಂದ ಟೌನ್‌ಹಾಲ್‌ವರೆಗೆ ಲೂಪ್ ಮೇಲ್ಸೇತುವೆ ಹಾಗೂ ಆನಂದರಾವ್ ಸರ್ಕಲ್ ಫ್ಲೈಓವರ್‌ನಿಂದ ನೃಪತುಂಗ ರಸ್ತೆವರೆಗೆ (ಕೆ.ಆರ್.ವೃತ್ತದ ಬಳಿ) ನೂತನ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಒಟ್ಟು 7 ಕಿ.ಮೀ ಉದ್ದದ ಮೂರು ಫ್ಲೈಓವರ್‌ಗಳ ನಿರ್ಮಾಣಕ್ಕೆ 557 ಕೋಟಿ ರು. ವೆಚ್ಚವಾಗುವ ಅಂದಾಜು ಮಾಡಲಾಗಿದೆ.

ಅದೇ ರೀತಿ ಹಳೇ ಮದ್ರಾಸ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ವರೆಗೆ 5.2 ಕಿ.ಮೀ. ಉದ್ದದ ಫ್ಲೈಓವರ್‌ಗೆ 852 ಕೋಟಿ ರು., ಶೋಲೆ ಸರ್ಕಲ್‌ನಿಂದ ಸೆಂಟ್ ಜಾನ್ ಆಸ್ಪತ್ರೆ ರಸ್ತೆಯವರೆಗೆ 5.3 ಕಿ.ಮೀ ಉದ್ದದ ಫ್ಲೈಓವರ್‌ಗೆ 519 ಕೋಟಿ ರು. ಹಾಗೂ ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ಪೊಲೀಸ್ ಸ್ಟೇಷನ್ ಜಂಕ್ಷನ್‌ನಿಂದ ಕೋಗಿಲು ಸರ್ಕಲ್‌ವರೆಗೆ 103 ಕೋಟಿ ರು. ವೆಚ್ಚದಲ್ಲಿ 1.50 ಕಿ.ಮೀ ಉದ್ದದ ಫ್ಲೈಓವರ್ ನಿರ್ಮಾಣವಾಗಲಿದೆ.

ಮೈಸೂರು ರಸ್ತೆಯಲ್ಲಿ ಸಿರ್ಸಿ ಸರ್ಕಲ್‌ನಿಂದ ನಾಯಂಡಹಳ್ಳಿವರೆಗೆ 538 ಕೋಟಿ ರು. ವೆಚ್ಚದಲ್ಲಿ 5.20 ಕಿ.ಮೀ ಫ್ಲೈಓವರ್, ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್‌ನಲ್ಲಿ 77 ಕೋಟಿ ರು. ವೆಚ್ಚದಲ್ಲಿ 1.50 ಕಿ.ಮೀ, ರಘುವನಹಳ್ಳಿ ಕ್ರಾಸ್ ಬಳಿ 42 ಕೋಟಿ ರು. ವೆಚ್ಚದಲ್ಲಿ 900 ಮೀಟರ್ ಫ್ಲೈಓವರ್, ಮಹಾಲಕ್ಷ್ಮೀ ಲೇಔಟ್‌ನ ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ರಿಂಗ್ ರಸ್ತೆವರೆಗಿನ ಪೈಪ್‌ಲೈನ್ ರಸ್ತೆಯಲ್ಲಿ 327 ಕೋಟಿ ರು. ವೆಚ್ಚದಲ್ಲಿ 2 ಕಿ.ಮೀ ಫ್ಲೈಓವರ್ ಹಾಗೂ ತುಮಕೂರು ರಸ್ತೆಯ ಆರ್‌ಎನ್‌ಎಸ್ ಶಾಂತಿನಿಕೇತನ ಎದುರಿನ ಎಂಇಐ ಜಂಕ್ಷನ್‌ನಲ್ಲಿ 40 ಕೋಟಿ ರು. ವೆಚ್ಚದಲ್ಲಿ ಅರ್ಧ ಕಿ.ಮೀ ಉದ್ದದ ಫ್ಲೈಓವರ್‌ ನಿರ್ಮಿಸಲಾಗುತ್ತದೆ.

PREV
Read more Articles on
click me!

Recommended Stories

ಕರ್ನಾಟಕ ಮಣ್ಣಲ್ಲಿ ಜಪಾನ್‌ 'ಮಿಯಾಜಾಕಿ' ಕಮಾಲ್: ಕೊಪ್ಪಳ ಬಳಿಕ ಬೀದರ್‌ನಲ್ಲೂ ದುಬಾರಿ ಮಾವು? ರೇಟ್ ಸಿಕ್ಕಿದ್ದೆಷ್ಟು?
ಸುಹಾಸ್ ಸುಧಾಕರ್‌ ರಾಜಕೀಯ ಅಖಾಡ ಪ್ರವೇಶಿಸುವುದು ಖಚಿತ, ಕೈ ಶಾಸಕರ ಬಾಯಿಂದಲೇ ಸುಧಾಕರ್ ಕುಟುಂಬಕ್ಕೆ ಟಿಕೇಟ್ ಸಂದೇಶ