ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದ ಮೂರು ಹೊಸ ವಿಸ್ತರಣೆಗಳನ್ನು 2023 ರಲ್ಲಿ ಪಡೆಯಲು ಸಜ್ಜಾಗಿದೆ. ಮುಖ್ಯವಾಗಿ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರಿನ ಎರಡು ಟೆಕ್ ಹಬ್‌ಗಳಾದ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುವ ನಿವಾಸಿಗಳು ಮತ್ತು ಉದ್ಯೋಗಿಗಳು ಶೀಘ್ರದಲ್ಲೇ ನೆಮ್ಮದಿಯ ನಿಟ್ಟುಸಿರು ಬಿಡಬಹುದು.
ಬೆಂಗಳೂರು(ಡಿ.10): ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ (BMRCL) ನಮ್ಮ ಮೆಟ್ರೋದ ಮೂರು ಹೊಸ ವಿಸ್ತರಣೆಗಳನ್ನು 2023 ರಲ್ಲಿ ಪಡೆಯಲು ಸಜ್ಜಾಗಿದೆ. ಇದು ನಗರದ ಹಲವಾರು ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಪ್ರಯಾಣವನ್ನು ಸುಲಭಗೊಳಿಸುತ್ತದೆ. ಮುಖ್ಯವಾಗಿ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರಿನ ಎರಡು ಟೆಕ್ ಹಬ್‌ಗಳಾದ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುವ ನಿವಾಸಿಗಳು ಮತ್ತು ಉದ್ಯೋಗಿಗಳು ಶೀಘ್ರದಲ್ಲೇ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಈ ಹಿಂದೆ ನೀಡಿದ ಗಡುವು ಮೀರಿದ ಬಳಿಕ ಇದೀಗ ಬಿಎಂಆರ್‌ಸಿಎಲ್ ಮುಂದಿನ ವರ್ಷ ಈ ಪ್ರದೇಶಗಳಲ್ಲಿ ನಮ್ಮ ಮೆಟ್ರೋ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಎರಡನೇ ಹಂತದ ಅಡಿಯಲ್ಲಿ, ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ 13 ನಿಲ್ದಾಣಗಳೊಂದಿಗೆ 15 ಕಿ.ಮೀ ವರೆಗೆ ಜಾಲವನ್ನು ವಿಸ್ತರಿಸಲಾಗಿದೆ. ಅಕ್ಟೋಬರ್‌ನಲ್ಲಿ, ಬಿಎಂಆರ್‌ಸಿಎಲ್ ವೈಟ್‌ಫೀಲ್ಡ್ ಮತ್ತು ಕೆ.ಆರ್. ಪುರಂ ಮಧ್ಯೆ ಪ್ರಯೋಗ ನಡೆಸಿದೆ.
ನೇರಳೆ ಮಾರ್ಗ:
ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋದ ನೇರಳೆ ಮಾರ್ಗವು ಫೆಬ್ರವರಿ-ಮಾರ್ಚ್ 2023 ರ ವೇಳೆಗೆ ಕಾರ್ಯನಿರ್ವಹಿಸಲಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಅಕ್ಟೋಬರ್‌ನಲ್ಲಿ ಇದರ ಪ್ರಾಯೋಗಿಕ ರನ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು. ಈ ಮಾರ್ಗವು ಮಹದೇವಪುರ, ಗರುಡಾಚಾರ್ಪಾಳ್ಯ, ಹೂಡಿ ಜಂಕ್ಷನ್, ಸೀತಾರಾಮ ಪಾಳ್ಯ, ಕುಂದಲಹಳ್ಳಿ, ನಲ್ಲೂರಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ, ಚನ್ನಸಂದ್ರ ಮತ್ತು ವೈಟ್‌ಫೀಲ್ಡ್‌ನಲ್ಲಿ ನಿಲುಗಡೆಗಳನ್ನು ಒಳಗೊಂಡಿರುತ್ತದೆ.
undefined
ಹಸಿರು ಮಾರ್ಗ:
ಈ ಮಧ್ಯೆ ನಾಗಸಂದ್ರದವರೆಗೆ ಅಸ್ತಿತ್ವದಲ್ಲಿರುವ ಹಸಿರು ಮಾರ್ಗವನ್ನು ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (BIEC) ವರೆಗೆ ವಿಸ್ತರಿಸಲಾಗುತ್ತಿದೆ ಮತ್ತು 2023ನೇ ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಮಾರ್ಗವು ಮಂಜುನಾಥ್ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರದಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಹೊಂದಿರುತ್ತದೆ.
ಹಳದಿ ಮಾರ್ಗ:
ಮೆಟ್ರೋದ ಎಲೆಕ್ಟ್ರಾನಿಕ್ಸ್ ಸಿಟಿ ಭಾಗವನ್ನು ಜೂನ್ 2023 ರಲ್ಲಿ ಸಾರ್ವಜನಿಕರಿಗೆ ತೆರೆಯಲು ನಿರ್ಧರಿಸಲಾಗಿದೆ. ಇದು ಬೊಮ್ಮಸಂದ್ರ ದಿಂದ ಹೆಚ್ಚು ದಟ್ಟಣೆಯಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕಿಸುತ್ತದೆ. ಆರ್ ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಸಿಂಗಸಂದ್ರ, ಇಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಸೇರಿದಂತೆ ಹಲವು ಕಡೆ ನಿಲ್ದಾಣಗಳು ಹೊಂದಿದೆ.
Bengaluru: ಅಪಾರ್ಟ್ಮೆಂಟ್ಗಳ ಗೇಟ್‌ನಿಂದಲೇ ಮೆಟ್ರೋ ಫೀಡರ್ ಬಸ್ ಸೇವೆ ಆರಂಭ
ಆದಾಗ್ಯೂ, ನಗರದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ವರೆಗಿನ ಬ್ಲೂ ಲೈನ್‌ನ 37 ಕಿಮೀ ಉದ್ದದ ವಿಮಾನ ನಿಲ್ದಾಣ-ಲಿಂಕ್ ವಿಭಾಗವು 2025 ರ ವೇಳೆಗೆ ಮಾತ್ರ ಕಾರ್ಯನಿರ್ವಹಿಸಲಿದೆ. ಹಂತ 2ಬಿ ಯೋಜನೆಯಡಿಯಲ್ಲಿ 19 ನಿಲ್ದಾಣಗಳಿವೆ. ಇತ್ತೀಚೆಗಷ್ಟೇ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 16328 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹಂತ-3 ಯೋಜನೆಗೆ ಅನುಮೋದನೆ ನೀಡಿದ್ದು, ಇದೀಗ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ.
Bengaluru: ಪೆಟಿಎಂ, ಯಾತ್ರಾ ಅಪ್ಲಿಕೇಶನ್ ಮೂಲಕವೂ ಮೆಟ್ರೋ ಟಿಕೆಟ್ ಲಭ್ಯ
BMRC ಅಧಿಕಾರಿಗಳ ಪ್ರಕಾರ, BMRC ಜೂನ್ 2025 ರ ವೇಳೆಗೆ ನಗರದಲ್ಲಿ 175 ಕಿಮೀ ಮೆಟ್ರೋ ವಿಸ್ತರಣೆಯ ಕಾರ್ಯಾಚರಣೆಯನ್ನು ಮಾಡುವ ನಿರೀಕ್ಷೆಯಿದೆ ಮತ್ತು 2041 ರ ವೇಳೆಗೆ ನಗರವು 314 ಕಿಮೀ ಮೆಟ್ರೋ ರೈಲು ಸಂಪರ್ಕವನ್ನು ಹೊಂದಿರುತ್ತದೆ.