ಮೊಬೈಲ್ ಬಿಟ್ಟು ಪರೀಕ್ಷೆಗೆ ಓದಿಕೋ ಎಂದಿದ್ದಕ್ಕೆ 20ನೇ ಮಹಡಿಯಿಂದ ಹಾರಿದ SSLC ಆವಂತಿಕ!

Published : Feb 12, 2025, 04:05 PM ISTUpdated : Feb 12, 2025, 04:09 PM IST
ಮೊಬೈಲ್ ಬಿಟ್ಟು ಪರೀಕ್ಷೆಗೆ ಓದಿಕೋ ಎಂದಿದ್ದಕ್ಕೆ 20ನೇ ಮಹಡಿಯಿಂದ ಹಾರಿದ SSLC ಆವಂತಿಕ!

ಸಾರಾಂಶ

ಬೆಂಗಳೂರಿನ ಕಾಡುಗೋಡಿಯಲ್ಲಿ 15 ವರ್ಷದ ಬಾಲಕಿ ಮೊಬೈಲ್ ಬಳಕೆಗೆ ತಾಯಿ ಬೈದಿದ್ದಕ್ಕೆ 20ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹತ್ತಿರವಿರುವಾಗ ಓದಿನ ಬದಲು ಮೊಬೈಲ್ ಬಳಸುತ್ತಿದ್ದಕ್ಕೆ ತಾಯಿ ಬುದ್ಧಿ ಹೇಳಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ಬೆಂಗಳೂರು (ಫೆ.12): ಎಸ್‌ಎಸ್‌ಎಲ್‌ಸಿ ಪರೀಕ್ಷಗಳು ಹತ್ತಿರ ಬಂದಿವೆ. ಪ್ರತಿದಿನ ಮೊಬೈಲ್ ಹಿಡಿದುಕೊಂಡು ನೋಡುವುದನ್ನು ಬಿಟ್ಟು ಪುಸ್ತಕ ಹಿಡುದು ಓದಿಕೋ ಎಂದು ಅಮ್ಮ ಬುದ್ಧಿ ಹೇಳಿದ್ದಕ್ಕೆ 20ನೇ ಮಹಡಿಯಿಂದ ಜಿಗಿದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಬೆಂಗಳೂರಿನ ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್ ಮೆಂಟ್‌ನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಮೃತ ಬಾಲಕಿ ಆವಂತಿಕ ಚೌರಾಸಿಯಾ (15) ಆಗಿದ್ದಾಳೆ. ಇದೀಗ ದೇಶದಾದ್ಯಂತ ಎಲ್ಲ ಪ್ರೌಢಶಿಕ್ಷಣ ಮತ್ತು ಪದವು ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿದೆ. ಎಲ್ಲ ತಂದೆ-ತಾಯಂದಿರು ಮಕ್ಕಳ ಓದಿನ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಅದೇ ರೀತಿ ಪರೀಕ್ಷೆ ಸಮಯದಲ್ಲಿ ಮಗಳು ಓದುವುದನ್ನು ಬಿಟ್ಟು ಮೊಬೈಲ್ ನೋಡುತ್ತಾ ಕುಳಿತಿದ್ದಕ್ಕೆ ಅಮ್ಮ ಬಂದು ಬೈದು ಬುದ್ಧಿ ಹೇಳಿದ್ದಾರೆ. ಮೊಬೈಲ್ ಬಿಟ್ಟು ಪರೀಕ್ಷೆಗಾಗಿ ಪುಸ್ತಕ ಹಿಡಿದು ಓದಿಕೋ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಂಬಾಕು ಸೇವನೆ ಬಿಟ್ಟುಬಿಡು ಎಂದು ಬುದ್ಧಿ ಹೇಳಿದ್ದಕ್ಕೆ ಪ್ರಾಣಬಿಟ್ಟ 18 ವರ್ಷದ ಬೇಬಿಜಾನ್

ಇದರಿಂದ ಮನನೊಂದ ಬಾಲಕಿ ತಾನಿರುವುದೇ ಅಪ್ಪ-ಅಮ್ಮನಿಗೆ ಹೊರೆಯಾಗಿದೆ. ನಾನು ಮೊಬೈಲ್ ನೋಡುತ್ತಾ ಖುಷಿಯಾಗಿರಲು ಬಿಡುತ್ತಿಲ್ಲ ಎಂದು ಕೋಪಗೊಂಡಿದ್ದಾಳೆ. ಇದಾದ ನಂತರ ತಾವು ವಾಸವಾಗಿರುವ ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್ ಮೆಂಟ್ 20ನೇ ಮಹಡಿಯಿಂದ ಜಿಗಿದು ಸಾವಿಗೀಡಾಗಿದ್ದಾಳೆ. ಈ ಘಟನೆಯ ಬೆನ್ನಲ್ಲಿಯೇ ಅವರ ತಾಯಿ ಶಾಕ್‌ಗೆ ಒಳಗಾಗಿದ್ದಾರೆ. ಕೂಡಲೇ ಅಪಾರ್ಟ್‌ಮೆಂಟ್ ರಕ್ಷಣಾ ಸಿಬ್ಬಂದಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಜೊತೆಗೆ, ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಬಂದು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

PREV
Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!