ಬೆಂಗಳೂರಿನಿಂದ ಸ್ನೇಹಿತರೊಂದಿಗೆ ಅಬ್ಬೆ ಜಲಪಾತದ ವೀಕ್ಷಣೆಗೆಂದು ಹೋಗಿದ್ದ ಪ್ರವಾಸಿಗ ಸಾಫ್ಟ್‌ವೇರ್ ಇಂಜನಿಯರ್ ಕಾಲುಜಾರಿ ನೀರಿನಲ್ಲಿ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ.
ಶಿವಮೊಗ್ಗ (ಜೂ.23): ರಾಜ್ಯಾದ್ಯಂತ ಉತ್ತಮವಾಗಿ ಮುಂಗಾರು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೈದುಂಬಿ ಹರಿಯುತ್ತಿದ್ದ ಅಬ್ಬೆ ಜಲಪಾತದ ವೀಕ್ಷಣೆಗೆಂದು ಬಂದು ಈಜಾಡಲು ತೆರಳಿದ್ದ ಪ್ರವಾಸಿಗ ಸಾಫ್ಟ್‌ವೇರ್ ಇಂಜನಿಯರ್ ನೀರಿನಲ್ಲಿ ಕೊಚ್ಚಿ ಹೋಗಿ ದಾರುಣವಾಗಿ ಸಾವನ್ನಪ್ಪಿದ್ದಾನೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು, ಈಗ ಮುಂಗಾರು ಮಳೆಯೂ ಚುರುಕುಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಲಪಾತಗಳು ಮರುಜೀವ ಪಡೆದುಕೊಂಡಿವೆ. ಕಳೆದ ವರ್ಷ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಜಲಪಾತಗಳ ವೀಕ್ಷಣೆ ಹಾಗೂ ಪ್ರಕೃತಿ ಸೌಂದರ್ಯ ಸವಿಯುವುದಕ್ಕೆ ಪ್ರವಾಸಿಗರಿಗೆ ನಿರಾಸೆ ಉಂಟಾಗಿತ್ತು. ಆದರೆ, ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆ ಪ್ರವಾಸಿಗರ ದಂಡು ಕೂಡ ಎಲ್ಲೆಡೆ ಕಾಣತೊಡಗಿದೆ. ಅದೇ ರೀತಿ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪದ ಅಬ್ಬೆ ಫಾಲ್ಸ್ ವೀಕ್ಷಣೆಗೆ ಬಂದಿದ್ದ 12 ಜನ ಪ್ರವಾಸಿಗರು ನೀರಿನ ರಭಸವನ್ನು ಅರಿಯದೇ ಈಜಲು ತೆರಳಿದ್ದಾರೆ. ಆಗ ಒಬ್ಬ ಪ್ರವಾಸಿಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
undefined
ತುಮಕೂರು ಕಾಲೇಜು ವಿದ್ಯಾರ್ಥಿನಿ ಅಂಕಲ್‌ನೊಂದಿಗೆ ಪರಾರಿ; ನಾಲ್ಕು ದಿನದ ಬಳಿಕ ಶವವಾಗಿ ಪತ್ತೆಯಾದ ಕುವರಿ
ಬೆಂಗಳೂರಿನಿಂದ ಅಬ್ಬೆ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರವಾಸಿಗ ವಿನೋದ್ ಕುಮಾರ್ (26) ನೀರು ಪಾಲಾದ ವ್ಯಕ್ತಿಯಾಗಿದ್ದಾನೆ. ಈ ವಿನೋದ್ ಬಳ್ಳಾರಿ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಖಾಸಗಿ ಸಂಸ್ಥೆಯಿಂದರಲ್ಲಿ ಕೆಲಸ ಮಾಡುತ್ತಿದ್ದನು. ಮಳೆಗಾಲದ ಹಿನ್ನೆಲೆಯಲ್ಲಿ 12 ಜನ ಸ್ನೇಹಿತರು ಪ್ರವಾಸಕ್ಕೆಂದು ಬಂದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ದಾರುಣವಾಗಿ ಮೃತಪಟ್ಟಿದ್ದಾನೆ.
ಸೂರಜ್ ರೇವಣ್ಣ ಸಲಿಂಗ ಕಾಮ ಕೇಸ್ ಸಿಐಡಿಗೆ ಹಸ್ತಾಂತರ; ಹಾಸನದಿಂದ ಬೆಂಗಳೂರಿಗೆ ಸೂರಜ್ ಶಿಫ್ಟ್
ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಸ್ನೇಹಿತನನ್ನು ಕಾಪಾಡುವಷ್ಟೂ ಗುಂಪಿನಲ್ಲಿದ್ದ ಯಾರೊಬ್ಬರಿಗೂ ಈಜು ಬರುತ್ತಿರಲಿಲ್ಲ. ಜಲಪಾತ ಆಗಿದ್ದರಿಂದ ನೀರಿನ ರಭಸಕ್ಕೆ ಯಾವುದಾದರೂ ಕಲ್ಲು ಬಂಡೆಗಳಿಗೆ ಹೋಗಿ ಬಿದ್ದರೆ ಭಯವೆಂದು ಯಾರೊಬ್ಬರೂ ಆತನನ್ನು ನೀರಿಗಿಳಿದು ರಕ್ಷಣೆ ಮಾಡುವ ಧೈರ್ಯವನ್ನೂ ಮಾಡಿಲ್ಲ. ಆದರೆ, ಸ್ನೇಹಿತ ನೀರಿನಲ್ಲಿ ಕೊಚ್ಚಿಕೊಂಡು ಹೋದ ನಂತರ ಪೊಲೀಸರಿಗೆ ತೀರ್ಥಹಳ್ಳಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ ನಗರ ಠಾಣೆ ಪಿಎಸ್ಐ ರಮೇಶ್ ಮೃತ ವಿನೋದ್ ಅವರ ದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಇನ್ನೂ ಮೃತದೇಹ ಹುಡುಕಾಟ ಕಾರ್ಯಾಚರಣೆ ಸಾಗಿದೆ.