ಬೆಂಗಳೂರು: 9ನೇ ಮಹಡಿ ಕಟ್ಟಡವೇರಿದ ಯುವಕನ ಹೈಡ್ರಾಮಾ! ಇಳಿ ಮಗನೇ ಎಂದ ಅಮ್ಮನಿಗೆ ಹಳೇ ಲವರ್ ಬೇಕೆಂದು ಗೊಳೋ ಅಂದ!

Published : Apr 21, 2026, 06:22 PM IST
Man climbs building Bengaluru

ಸಾರಾಂಶ

ದೇವನಹಳ್ಳಿ ಹೊರವಲಯದಲ್ಲಿ, ಯುವಕನೊಬ್ಬ 9 ಮಹಡಿಗಳ ಕಟ್ಟಡವನ್ನೇರಿ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾನೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿರುವ ಈತ, ಈ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದು, ಅದೇ ವಿಚಾರವಾಗಿ ಮಾನಸಿಕ ಒತ್ತಡದಲ್ಲಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ಯುವಕನೊಬ್ಬ 9 ಮಹಡಿಗಳ ಕಟ್ಟಡದ ಮೇಲೆ ಏರಿ ಆತ್ಮ*ಹತ್ಯೆ ಬೆದರಿಕೆ ಹಾಕಿದ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ನನಗೆ ನ್ಯಾಯ ಬೇಕು, ಜಿಲ್ಲಾಧಿಕಾರಿ (ಡಿಸಿ) ಸ್ಥಳಕ್ಕೆ ಬರಬೇಕು ಎಂದು ಯುವಕ ಹೈಡ್ರಾಮ ನಡೆಸಿದ್ದಾನೆ.

ದೇವನಹಳ್ಳಿ ಬೈಪಾಸ್‌ನಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್ ಬಳಿ ಈ ಘಟನೆ ನಡೆದಿದೆ. ಆನಂದ್ ಎಂಬ ಯುವಕ ಕಟ್ಟಡದ ಮೇಲ್ಭಾಗಕ್ಕೆ ಏರಿ ಆತ್ಮ*ಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಧಾವಿಸಿದರು. ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಅಧಿಕಾರಿಗಳು ಹಲವು ಗಂಟೆಗಳ ಕಾಲ ಮನವೊಲಿಸಲು ಪ್ರಯತ್ನಿಸಿದರು.

ತಾಯಿ ಬೇಡಿಕೊಂಡರೂ ಕೇಳಲಿಲ್ಲ ಮಗ

ಪೊಲೀಸರ ಮನವೊಲಿಕೆಗೆ ಯುವಕ ಸ್ಪಂದಿಸದೇ, ಡಿಸಿ ಇಲ್ಲಿಗೆ ಬರಬೇಕು, ಅವರ ಮುಂದೆ ನನ್ನ ಸಮಸ್ಯೆಯನ್ನು ಹೇಳುತ್ತೇನೆ ಎಂದು ಪಟ್ಟು ಹಿಡಿದಿದ್ದನು. ಸ್ಥಳಕ್ಕೆ ಬಂದ ಯುವಕನ ತಾಯಿಯೂ ಕೆಳಗೆ ಇಳಿಯಪ್ಪ ಎಂದು ಅದೆಷ್ಟೇ ಮನವಿ ಮಾಡಿದರೂ, ಆನಂದ್ ತನ್ನ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ.

ಈ ಆನಂದ್ ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಕಾಲೋನಿ ನಿವಾಸಿ. ನಾಲ್ಕು ವರ್ಷಗಳ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದನು. ಜೈಲಿನಿಂದ ಬಿಡುಗಡೆಯಾದ ನಂತರವೂ ಆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರದಲ್ಲೇ ಆತ ಮಾನಸಿಕ ಒತ್ತಡದಲ್ಲಿದ್ದಾನೆ ಎನ್ನಲಾಗುತ್ತಿದೆ. ವಿಶೇಷವಾಗಿ, ಅದೇ ಯುವತಿಯನ್ನು ಮದುವೆಯಾಗಬೇಕು ಎಂಬ ಒತ್ತಾಯದಿಂದಲೇ ಈ ರೀತಿ ಮತ್ತೆ ಮಾಡಿದ್ದಾನೆ.

ಪೊಲೀಸರ ಹರಸಾಹಸ

ಯುವಕನ ವರ್ತನೆಯಿಂದ ಸ್ಥಳದಲ್ಲಿ ಭಾರೀ ಜನಸ್ತೋಮ ಸೇರಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ಎಷ್ಟೇ ಮನವೊಲಿಸಲು ಪ್ರಯತ್ನ ಮಾಡಿದರೂ ಯಾರ ಮಾತೂ ಕೇಳದ ಆನಂದ್‌ನ ನಡೆ ಪೊಲೀಸರಿಗೆ ತಲೆನೋವಾಗಿದ್ದು, ಕೊನೆಗೂ ಅವನನ್ನು ಸುರಕ್ಷಿತವಾಗಿ ಕೆಳಗಿಳಿಸುವ ಕಾರ್ಯಾಚರಣೆ ನಡೆಸಲು ಮುಂದಾದರೂ

ಈ ಘಟನೆ ಸಾರ್ವಜನಿಕ ಸುರಕ್ಷತೆ ಹಾಗೂ ಮಾನಸಿಕ ಆರೋಗ್ಯದ ಮಹತ್ವವನ್ನು ಮತ್ತೊಮ್ಮೆ ನೆನಪಿಸುವಂತಿದ್ದು, ಇಂತಹ ಸಂದರ್ಭಗಳಲ್ಲಿ ತಕ್ಷಣದ ಕೌನ್ಸೆಲಿಂಗ್ ಮತ್ತು ಬೆಂಬಲದ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.

PREV
Read more Articles on
click me!

Recommended Stories

ಅಂಗನವಾಡಿ ಸಿಬ್ಬಂದಿಗಳಿಂದ ಯೋಜನೆಗಳು ಜನರನ್ನು ತಲುಪುತ್ತಿದೆ: ಸ್ಪೀಕರ್‌ ಯು.ಟಿ.ಖಾದರ್
ಮಂಗಳೂರಿನ ಹೋಟೆಲ್‌ಗೂ ಬಂತು ರೋಬೋ ವೈಟರ್: ಪಾಕಶಾಲದಲ್ಲಿ ಗ್ರಾಹಕರಿಗೆ ಹೊಸ ಅನುಭವ