ಬೆಂಗಳೂರು; 30 ರಿಂದ 39 ವಯೋಮಾನದ ಪುರುಷರೇ ಕೊರೋನಾ ಟಾರ್ಗೆಟ್!

By Suvarna NewsFirst Published Aug 27, 2020, 7:14 PM IST
Highlights

ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸ/ ಯುವಕರನ್ನೇ ಗುರಿಯಾಗಿಸಿಕೊಂಡಿರುವ ಮಾರಕ ವೂರಸ್/ ಮಕ್ಕಳು ಹಿರಿಯರನ್ನು ಬಿಟ್ಟು ಯುವಕರನ್ನ ಹಿಡಿದುಕೊಂಡ ಚೀನಾ ವೈರಸ್

ಬೆಂಗಳೂರು(ಆ.  27) ಸರ್ಕಾರ ಅನ್ ಲಾಕ್ ಘೋಷಣೆ ಮಾಡಿರಬಹುದು ಆದರೆ ಕೊರೋನಾ ಮಾತ್ರ ಆವರಿಸುತ್ತಲೇ ಇದೆ. ಬೆಂಗಳೂರಿನಲ್ಲಿ ಪ್ರತಿದಿನ ದಾಖಲಾಗುತ್ತಿದ್ದ ಕೇಸುಗಳು ಎರಡು ಸಾವಿರ ಸರಾಸರಿಯಿಂದ ಮೂರು ಸಾವಿರಕ್ಕೆ ಏರಿವೆ. ಆದರೆ ಇದರೊಂದಿಗೆ ಇನ್ನೊಂದು ಬೆಚ್ಚಿ ಬೀಳಿಸುವ ಅಂಶವೂ ಹೊರಗೆ ಬಂದಿದೆ.

ಮಕ್ಕಳು ಮತ್ತು 60  ವರ್ಷ ಮೇಲ್ಪಟ್ಟವರಿಗೆ  ಕೊರೋನಾ ಹೆಚ್ಚಿನ ಕಾಟ ಕೊಡುತ್ತದೆ ಎಂಬು ಆರಂಭದಲ್ಲಿ ಭಾವಿಸಿದ್ದ ಸತ್ಯಗಳೆಲ್ಲ ತಲೆಕೆಳಗಾಗುತ್ತಿವೆ.  ಸುಮ್ಮನೆ ಬೆಂಗಳೂರಿನ  ಅಂಕಿ ಅಂಸಗಳನ್ನು ನೋಡಿಕೊಂಡು ಬನ್ನಿ.

Latest Videos

ಬೆಂಗಳೂರಿನಲ್ಲಿ ಬುಧವಾರ ದಾಖಲಾಗಿದ್ದು ಬರೋಬ್ಬರಿ  3,284 ಹೊಸ ಕೊರೋನಾ ಕೇಸುಗಳು ಇದಕ್ಕೂ ಮೊದಲು ಸ್ವಾತಂತ್ರ್ಯ ದಿನದಂದೂ ಬೆಂಗಳೂರಿನಲ್ಲಿ ಕೊರೋನಾ  ಹೊಸ ಸೋಂಕಿತರ ಸಂಖ್ಯೆ ಮೂರು ಸಾವಿರ ದಾಟಿತ್ತು.

ಕಂಟೈನ್ ಮೆಂಟ್ ಝೋನ್ ಗಳಿಗೆ ಸಂಬಂಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಳಿ ಯಾವುದೇ ಮಾಹಿತಿ ಇಲ್ಲ. 198 ರಲ್ಲಿ 192 ವಾರ್ಡ್ ಗಳಲ್ಲಿ ಕೊರೋನಾ ತಾಂಡವವಿದೆ, ಬೆಂಗಳೂರು ದಕ್ಷಿಣ ಅತಿ ಹೆಚ್ಚು ಸೋಂಕಿತರನ್ನು ಹೊಂದಿದೆ.

ವದಂತಿಗಳಿಗೆ ಕಿವಿ ಕೊಡಬೇಡಿ; ಮಾಸ್ಕ್ ಕಡ್ಡಾಯ

ಒಂದು ವಾರದಿಂದ ಬೆಂಗಳೂರು ಪಶ್ಚಿಮ ವಲಯದಿಂದ ಅತಿಹೆಚ್ಚಿನ ಕೇಸುಗಳು ಬರುತ್ತಿವೆ(ಶೇ. 23) , ದಕ್ಷಿಣ ಶೇ. 17 ಬೊಮ್ಮನಹಳ್ಳಿ ಶೇ. 16,  ಪೂರ್ವ ಶೇ. 14, ಆರ್ ಆರ್ ನಗರ ಶೇ.  10, ಮಹದೇವಪುರ ಮತ್ತು ದಾಸರಹಳ್ಳಿ ಶೇ.  7 ಹಾಗೂ ಯಲಹಂಕ ವಲಯದಲ್ಲಿ ಶೇ. 5 ರಷ್ಟು ಕೇಸುಗಳಿವೆ.

ಇದೆಲ್ಲದರ ಜತೆಗೆ ಇನ್ನೊಂದು ಆತಂಕಕಾರಿ ಮಾಹಿತಿ. ಸೋಂಕಿತರಲ್ಲಿ ಅತಿಹೆಚ್ಚಿನವರು 30 ರಿಂದ 39 ವಯೋಮಾನಕ್ಕೆ ಸೇರಿದ ಪುರುಷರು. ಇದಾದ ನಂತರದ ಸ್ಥಾನದಲ್ಲಿ  20 ರಿಂದ 29 ವರ್ಷ ವಯೋಮಾನದವರು ನಂತರ  40 ರಿಂದ  49 ವಯೋಮಾನದವರು ಇದ್ದಾರೆ. ಸಾವಿಗೆ ಗುರಿಯಾದವರಲ್ಲಿ  50 ರಿಂದ  59 ವರ್ಷ ವಯೋಮಾನದ ಪುರುಷರ ಸಂಖ್ಯೆ ಅಧಿಕ. 

ಕೊರೋನಾ ಕಂಡುಹಿಡಿಯುವ ಮೂರು ವಿಧಾನಗಳು

ಆರ್ ಆರ್ ನಗರ ಮತ್ತು ದಾಸರಹಳ್ಳಿಯಲ್ಲಿ ಕೊರೋನಾ ನಿಧಾನಕ್ಕೆ ಕಡಿಮೆಯಾಗುವ ಲಕ್ಷಣ ತೋರಿದ್ದರೆ ಉಳಿದ ಕಡೆ ವ್ಯಾಪಿಸುತ್ತಿದೆ.  ಬೆಂಗಳೂರಿನಲ್ಲಿ ಕೊರೋನಾ ಸೋಂಕಿತ ಶೇಕಡಾ ಪ್ರಮಾಣ   ಶೇ. 32 ಇದ್ದರೆ ಪಾಸಿಟಿವ್ ಗೆ ಸಿಲುಕುತ್ತಿರುವವರ ಸಂಖ್ಯೆ ಶೇ.  15.6 ಇದೆ. ರಿಕವರಿ ಪ್ರಮಾಣವೂ ಉತ್ತಮವಾಗಿದ್ದು ಶೇ 67.2ಕ್ಕೆ ಏರಿದೆ. 

ಸೆಪ್ಟಂಬರ್‌ ಅಂತ್ಯಕ್ಕೆ ರಾಜ್ಯದಲ್ಲಿ 6 ಲಕ್ಷ ಕೊರೋನಾ ಕೇಸ್‌ಗಳು!

"

click me!