Bengaluru Rain: ರಾಜಧಾನಿಯಲ್ಲಿ ಮಳೆ ಆರ್ಭಟ... ಬಿಸಿಲಿನ ಝಳ ತಣಿಸಲು ಬೇಕಿತ್ತು!

By Contributor Asianet  |  First Published Apr 13, 2022, 9:11 PM IST

* ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ
* ರಾಜರಾಜೇಶ್ವರಿ ನಗರ, ಕೆಂಗೇರಿ, ಉಲ್ಲಾಳದಲ್ಲಿ ಮಳೆ
* ಮೆಜೆಸ್ಟಿಕ್ ಸುತ್ತು ಮುತ್ತ ಕೂಡ ಮಳೆ ಆರ್ಭಟ
* ಜೆಪಿನಗರದಲ್ಲಿ ಧರೆಗುರುಳಿದ ಮರ


ಬೆಂಗಳೂರು(ಏ. 13)  ಬೆಂಗಳೂರಿನಲ್ಲಿ (Bengaluru) ಬುಧವಾರ ಧಾರಾಕಾರ ಮಳೆ (Rain) ಸುರಿದಿದೆ.  ರಾಜರಾಜೇಶ್ವರಿ ನಗರ, ಕೆಂಗೇರಿ, ಉಲ್ಲಾಳದಲ್ಲಿ ಮಳೆಯಾಗಿದೆ. ಬಿರುಗಾಳಿ ಸಮೇತ ಮಳೆಗೆ  ಜೆಪಿ ನಗರ ಎರಡನೇ ಹಂತದಲ್ಲಿ ಮರ ಧರೆಗೆ ಉರುಳಿದ್ದು ಬಿಬಿಎಂಪಿ ತರೆವು ಕಾರ್ಯಾಚರಣೆ ಆರಂಭಿಸಿದೆ.

ಬೆಂಗಳೂರು ಮಾತ್ರವಲ್ಲದೆ ಮಂಡ್ಯ (Mandya) ಜಿಲ್ಲೆಯಲ್ಲಿಯೂ ಮಳೆ ಸುರಿದಿದೆ. ಬಿಸಿಲಿನ (Summer) ತಾಪಕ್ಕೆ ಬೇಸತ್ತಿದ್ದ ಜನರಿಗೆ ವರುಣ ತಂಪೆರಚಿದ್ದಾನೆ.  ವಾಹನ ಸವಾರರು ಎಂದಿನಂತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Tap to resize

Latest Videos

ಆನೇಕಲ್‌ನಲ್ಲಿಯೂ (Anekal) ಗಾಳಿ ಸಹಿತ ಗುಡುಗು ಮಳೆ ಕಂಡುಬಂದಿದೆ. ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಚಂದಾಪುರದಲ್ಲಿ ಗಾಳಿ ಸಹಿತ ಮಳೆಯಾಗಿದೆ.  ಬೆಂಗಳೂರು ಸುತ್ತಮುತ್ತ ಮಾತ್ರವಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಕೂಡ ಧಾರಾಕಾರ ಮಳೆ ಸುರಿದಿದೆ.  ಬಿಸಿಲು ತಾಪಮಾನ ಹೆಚ್ಚಳದಿಂದ ಬಿಸಿಯಾಗಿದ್ದ ಭೂಮಿಗೆ ವರುಣ ತಂಪೆರದಿದ್ದಾನೆ.  ಕಟಾವಿಗೆ  ಬಂದಿರುವ ಬೆಳೆಗಳಿಗೆ ಈ ಮಳೆ ಆತಂಕವನ್ನು ತಂದಿಟ್ಟಿದೆ.

ಬೆಂಗಳೂರಿನಲ್ಲಿ ಸಂಜೆ ಐದು ಗಂಟೆಗೆ ಶುರುವಾದ ಮಳೆ ಅರ್ಧ ಗಂಟೆಗೂ ಅಧಿಕ ಕಾಲ ಸುರಿಯಿತು.  ರಸ್ತೆ ಮೇಲೆ ನೀರು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಅನುಭವಿಸಬೇಕಾಯಿತು. ಚಾಮರಾಜನಗರದಲ್ಲಿಯೂ ಧಾರಾಕಾರ ಮಳೆ ಸುರಿದಿದೆ. ಸಿಡಿಲು ಬಡಿದು ಹಾಸನದಲ್ಲಿ ಇಬ್ಬರು ಯುವಕರು ದುರ್ಮರಣಕ್ಕೆ ಈಡಾಗಿದ್ದಾರೆ.  ನಾಗರಿಕರು ಮಳೆ ಅನುಭೂತಿಯನ್ನು ಸೋಶಿಯಲ್  ಮೀಡಿಯಾದಲ್ಲಿಯೂ ಶೇರ್ ಮಾಡಿಕೊಂಡಿದ್ದಾರೆ.

Monsoon Rains ಭಾರತದಲ್ಲಿ ಈ ವರ್ಷ ಸರಾಸರಿ ಮಾನ್ಸೂನ್!

ಯುವಕ ಪ್ರಾಣ ಬಲಿ:  ಸಂಜೆ ಸುರಿದ ಮಳೆಗೆ 21 ವರ್ಷದ ಯುವಕನ ಪ್ರಾಣ ಬಲಿ ಪಡೆದಿದೆ. ಮಳೆಯ ರಭಸಕ್ಕೆ ವಿದ್ಯುತ್ ಕಂಬದಿಂದ ನೆಲಕ್ಕೆ ಬಿದ್ದ ವೈಯರ್ ಶಾರ್ಟ್ ಸರ್ಕ್ಯೂಟ್ ಆಗಿ ವಾಸು ದುರ್ಮರಣಕ್ಕೆ ಈಡಾಗಿದ್ದಾರೆ. ನಗರದ ದೀಪಾಂಜಲಿ ನಗರದಲ್ಲಿ ಘಟನೆ ನಡೆದಿದೆ. ಬೆಸ್ಕಾಂ ನಿರ್ಲಕ್ಷ್ಯ ಈ ಸಾವಿಗೆ ಕಾರಣವೆಂದು ಮೃತ ಯುವಕನ ಕುಟುಂಬಸ್ಥರ ಆರೋಪ ಮಾಡಿದ್ದಾರೆ. 

ಮುಂದಿನ 5 ದಿನ ವಿವಿಧ ರಾಜ್ಯಗಳಲ್ಲಿ ಮಳೆ?
ದಕ್ಷಿಣ ರಾಜ್ಯಗಳು ಮತ್ತು ಈಶಾನ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನಗಳಲ್ಲಿ ಕೇರಳ ಮತ್ತು ಲಕ್ಷದ್ವೀಪ ಮತ್ತು ತಮಿಳುನಾಡು-ಪುದುಚೇರಿ-ಕಾರೈಕಲ್, ಕರಾವಳಿ ಆಂಧ್ರಪ್ರದೇಶ, ಕರಾವಳಿ ಮತ್ತು ಕರ್ನಾಟಕದ ಒಳನಾಡಿನಲ್ಲಿ  ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.  ಸಹಿತ ಇನ್ನು ಇತ್ತ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಸೇರಿ ವಿವಿಧೆಡೆ ಮುಂದಿನ 5 ದಿನ ಜೋರು ಮಳೆ ಸುರಿಯಲಿದೆ.  ಮಲೆನಾಡು ಭಾಗದಲ್ಲಿಯೂ  ಕಳೆದ ಎರಡು ದಿನಗಳ ಹಿಂದೆ ಮಳೆಯಾಗಿತ್ತು.  

ಚಂಡಮಾರುತ:  ಈ ವರ್ಷ ಬೇಸಿಗೆ ಆರಂಭದಿಂದಲೇ ವಾರಕ್ಕೊಂದು ಮಳೆ ಬೀಳುತ್ತಲೇ ಇದೆ. ಅಸಾನಿ ಚಂಡಮಾರುತ ಬೀಸಿರುವ ಹಿನ್ನೆಲೆಯಲ್ಲಿ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಗಾಳಿಗೆ ಕಾರಣವಾಗಿತ್ತು.

ಚಂಡಮಾರುತದ ಹಿನ್ನೆಲೆಯಲ್ಲಿ 150 ಎನ್‌ಡಿಆರ್‌ಎಫ್‌ ಸಿಬ್ಬಂದಿಗಳನ್ನು ನೇವಿಸಲಾಗಿದ್ದು, 6 ಪರಿಹಾರ ಶಿಬಿರಗಳನ್ನು ತೆರೆಯಲಾಗಿತ್ತು. ಫ್ಲೋರ್ಟ್‌ಬ್ಲೇರ್‌ ಉತ್ತರ, ಮಧ್ಯ ಮತ್ತು ದಕ್ಷಿಣ ಅಂಡಮಾನಗಳಲ್ಲಿ ಭಾರೀ ಗಾಳಿ, ಮಳೆಯಾಗಿತ್ತು.  ಬಂಗಾಳ ಕೊಲ್ಲಿ  ತೀರದಲ್ಲಿ ಆತಂಕ ಸೃಷ್ಟಿಸಿದ್ದ ಆಸಾನಿ ನಂತರ ತನ್ನ ಪ್ರಭಾವ ಕಡಿಮೆ ಮಾಡಿಕೊಂಡಿತ್ತು.

click me!