
ಬೆಂಗಳೂರು: ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ತಮ್ಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ ಎಂಬ ಆರೋಪದ ಮೇರೆಗೆ ಖಾಸಗಿ ಶಾಲೆ ಶಿಕ್ಷಕಿಯೊಬ್ಬರ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಗ್ಗೆರೆ ಲಕ್ಷ್ಮೀದೇವಿನಗರದ ವೀಣಾ ಶಾಲೆಯ ಶಿಕ್ಷಕಿ ಏಂಜಲೀನಾ ಹಾಗೂ ಶಾಲೆಯ ಮಾನವ ಸಂಪನ್ಮೂಲ ಅಧಿಕಾರಿ (ಎಚ್‌ಆರ್) ವಿರುದ್ಧ ಆರೋಪ ಬಂದಿದ್ದು, ಈ ಸಂಬಂಧ ಸಂತ್ರಸ್ತ ವಿದ್ಯಾರ್ಥಿ ತಾಯಿ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ಈ ಘಟನೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಶಿಕ್ಷಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವೀಣಾ ಶಾಲೆಯಲ್ಲಿ 4ನೇ ತರಗತಿಯಲ್ಲಿ ಸಂತ್ರಸ್ತ ಬಾಲಕ ಓದುತ್ತಿದ್ದು, ಲಗ್ಗೆರೆ ಹತ್ತಿರದ ಹಾಸ್ಟೆಲ್‌ನಲ್ಲಿ ಆತ ನೆಲೆಸಿದ್ದ. ‘ಜ.10 ರಂದು ಹೋಂ ವರ್ಕ್ ಮಾಡಿಲ್ಲ ಎಂದು ಮಗನ ಕಾಲು ಹಾಗೂ ಕೈಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಹೊಡೆದಿರುವ ವಿಚಾರವನ್ನು ಪೋಷಕರಿಗೆ ತಿಳಿಸಿದರೆ ಕತ್ತು ಹಿಸುಕಿ ಸಾಯಿಸುತ್ತೇನೆ’ ಎಂದು ಆಕೆ ಬೆದರಿಕೆ ಹಾಕಿದ್ದರು. ಇದರಿಂದ ತಮ್ಮ ಮಗ ನೋವು ಅನುಭವಿಸಿದ್ದಾನೆ ಎಂದು ಸಂತ್ರಸ್ತ ಬಾಲಕನ ತಾಯಿ ಆರೋಪಿಸಿದ್ದಾರೆ.
ಜ.12ರಂದು ಮಗನನ್ನು ನೋಡಲು ಶಾಲೆಗೆ ತೆರಳಿದ್ದೆ. ಆಗ ಶಿಕ್ಷಕಿ ಏಂಜಲೀನಾ ಕ್ರೌರ್ಯದ ಬಗ್ಗೆ ಮಗ ಹೇಳಿ ಕಣ್ಣೀರಿಟ್ಟಿದ್ದ. ಇದರಿಂದ ಆತಂಕಗೊಂಡು ಶಾಲೆಯ ಎಚ್‌ಆರ್‌ಗೆ ವಿಚಾರ ತಿಳಿಸಿದಾಗ ಏಂಜಲೀನಾರನ್ನು ಕರೆಸಿದ್ದರು. ಮಗನಿಗೆ ಹೊಡೆದಿರುವುದು ಗೊತ್ತಾದ ಬಳಿಕ
ಶಿಕ್ಷಕಿ ಹಲ್ಲೆಯಿಂದ ಆತಂಕಕ್ಕೆ ಒಳಗಾಗಿರುವ ಮಗನು ಶಾಲೆಗೆ ಹೋಗುವುದಿಲ್ಲ. ಶಿಕ್ಷಕಿ ಏಂಜಲೀನಾ ಶಾಲೆಯಲ್ಲಿದ್ದು ಪುನಃ ಹೊಡೆಯುತ್ತಾರೆ. ಹೀಗಾಗಿ, ಬಲವಂತದಿಂದ ಶಾಲೆಗೆ ಕಳುಹಿಸಿದರೆ ಸತ್ತುಹೋಗುತ್ತೇನೆ ಎಂದು ಆತಂಕ ವ್ಯಕ್ತಪಡಿಸಿದ್ದಾನೆ. ತಮ್ಮ ಮಗನ ಮೇಲೆ ಹಲ್ಲೆ ನಡೆಸಿದ ಶಿಕ್ಷಕಿ ಹಾಗೂ ಆಕೆ ವಿರುದ್ದ ಶಿಸ್ತು ಕ್ರಮ ಜರುಗಿಸದೆ ನಿರ್ಲಕ್ಷ್ಯ ತೋರಿರುವ ಎಚ್‌ಆರ್ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ಆಗ್ರಹಿಸಿದ್ದಾರೆ.