Bengaluru: ಖಾಸಗಿ ಕಾಲೇಜಿನ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ವಿಡಿಯೋ, ಯುವಕನ ಬಳಿ ಇತ್ತು 8 ಸಾವಿರ ಕ್ಲಿಪ್ಸ್‌!

Published : Sep 20, 2024, 04:42 PM ISTUpdated : Sep 20, 2024, 04:54 PM IST
Bengaluru: ಖಾಸಗಿ ಕಾಲೇಜಿನ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ವಿಡಿಯೋ, ಯುವಕನ ಬಳಿ ಇತ್ತು 8 ಸಾವಿರ ಕ್ಲಿಪ್ಸ್‌!

ಸಾರಾಂಶ

ಇತ್ತೀಚೆಗೆ ದೈಹಿಕ ಶಾಲೆಯ ಶಿಕ್ಷಕನೊಬ್ಬನ ಮೊಬೈಲ್‌ನಲ್ಲಿ ಶಾಲೆಯ ವಿದ್ಯಾರ್ಥಿನಿಯರ 5 ಸಾವಿರ ವಿಡಿಯೋ ಕ್ಲಿಪ್‌ಗಳು ಪತ್ತೆಯಾಗಿದ್ದವು. ಈಗ ಅಂಥದ್ದೇ ಕೇಸ್‌ ಬೆಂಗಳೂರಿನ ಖಾಸಗಿ ಕಾಲೇಜ್‌ನಲ್ಲಿ ನಡೆದಿದ್ದು, ವಿದ್ಯಾರ್ಥಿಯನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿಯಲಾಗಿದೆ.

ಬೆಂಗಳೂರು (ಸೆ.20): ಖಾಸಗಿ ಕಾಲೇಜಿನ ಟಾಯ್ಲೆಟ್ ರೂಮ್‌ನಲ್ಲಿ ಮೊಬೈಲ್ ಇಟ್ಟು ವೀಡಿಯೋ ಚಿತ್ರಿಕರಣ ಮಾಡಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ಕಾಲೇಜಿನ ಲೇಡಿಸ್ ಟಾಯ್ಲೆಟ್ ರೂಮ್‌ನಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬಳು ಇದನ್ನು ಗಮನಿಸಿದ್ದಾಳೆ. ಟಾಯ್ಲೆಟ್‌ ಒಳಗಡೆ ಕ್ಯಾಮೆರಾ ಇರುವುದನ್ನು ನೋಡಿ ವಿದ್ಯಾರ್ಥಿನಿ ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾಳೆ. ಈ ವೇಳೆ ಕ್ಯಾಮೆರಾ ಇಟ್ಟ ಕುಶಾಲ್ ಎಂಬ ವಿದ್ಯಾರ್ಥಿಯನ್ನ ಇತರ ವಿದ್ಯಾರ್ಥಿಗಳು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಖಾಸಗಿ ಕಾಲೇಜು ಇದಾಗಿದೆ. ಇದರ ಬೆನ್ನಲ್ಲಿಯೇ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ.

ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಕುಂಬಳಗೂಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಕುಶಾಲ್‌ ಸಿಸಿಟಿವಿ ಮಾದರಿಯ ಕ್ಯಾಮರಾ ಇಟ್ಟಿದ್ದ ಎಂದು ಹೇಳಲಾಗುತ್ತಿದೆ. ಅದೇ ಕಾಲೇಜಿನ (ACS) ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕುಶಾಲ್‌ ಓದುತ್ತಿದ್ದು, ಆತನಿಂದಲೇ ಈ ಕೃತ್ಯ ನಡೆದಿದೆ ಎಂದು ಆರೋಪ ಮಾಡಿದ ಬಳಿಕ, ಕ್ಯಾಮೆರಾ ಇಟ್ಟಿದ್ದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

8 ಸಾವಿರ ವೀಡಿಯೋ ಕ್ಲಿಪ್ ಗಳು: ವಿದ್ಯಾರ್ಥಿಯ ಬಳಿ ಒಟ್ಟು 8 ಸಾವಿರ ವಿಡಿಯೋ ಕ್ಲಿಪ್‌ಗಳಿಗೆ ಎಂದು ಹೇಳಲಾಗುತ್ತಿದೆ. ಕೆಲ ತಿಂಗಳಿಂದ ವೀಡಿಯೋ ರೆಕಾರ್ಡ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನ ಪೊಲೀಸರು ಕಾಲೇಜು ಆವರಣದಿಂದ ಹೊರಗೆ ಕಳಿಸಿದ್ದಾರೆ. ಇನ್ನು ಈ  ಘಟನೆಯಿಂದ ವಿದ್ಯಾರ್ಥಿನಿಯರು ಆತಂಕದಲ್ಲಿದ್ದಾರೆ. ಘಟನೆಯ ಬಗ್ಗೆ ಪೋಷಕರಿಗೂ ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದಾರೆ.

ಕೋಲಾರ ಪಿಯು ಕಾಲೇಜು ಟಾಯ್ಲೆಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ; ಅತ್ಯಾಚಾರ ಎಸಗಿದ್ದ ಯುವಕ ಅರೆಸ್ಟ್!

ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳನ್ನ ಪೊಲೀಸರು ತಡೆಯುತ್ತಿದ್ದು, ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಪ್ರೊಟೆಸ್ಟ್ ತೀವ್ರವಾಗಿದೆ. ಕ್ಯಾಮೆರಾ ನೋಡಿದ ಯುವತಿಯನ್ನು ಅಮೂಲ್ಯ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದ್ದು. ಸದ್ಯ ಆವರಣದಲ್ಲಿಯೇ ವಿದ್ಯಾರ್ಥಿನಿಯರು ಜಮಾಯಿಸಿದ್ದಾರೆ.

ಕೋಲಾರದ ಕಾಮುಕ ಶಿಕ್ಷಕನ ಮೊಬೈಲಲ್ಲಿ ಹೆಣ್ಮಕ್ಕಳ 5000ಕ್ಕೂ ಹೆಚ್ಚು ನಗ್ನ ದೃಶ್ಯಗಳು!

PREV
Read more Articles on
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!