ಇಂಗಳಗಿ ಗ್ರಾಮದ ಫಕ್ಕೀರಪ್ಪ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಕೂಡಲೇ ಆತ ಆ ಹಾವನ್ನು ಅಲ್ಲೇ ಕಲ್ಲಿನಿಂದ ಜಜ್ಜಿ ಕೊಂದಿದ್ದಾನೆ. ಬಳಿಕ ಅದೇ ಹಾವನ್ನು ಹಿಡಿದುಕೊಂಡು ತಂದೆಯೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದಾನೆ. ವೈದ್ಯರಿಗೆ ತನಗೆ ಇದೇ ಹಾವು ಕಚ್ಚಿದ್ದು, ಚಿಕಿತ್ಸೆ ನೀಡಿ ಎಂದು ತಿಳಿಸಿದ್ದಾನೆ. ಇದೀಗ ಯುವಕ ಚೇತರಿಸಿಕೊಳ್ಳುತ್ತಿದ್ದಾನೆ.
ಹುಬ್ಬಳ್ಳಿ(ಸೆ.20): ಯುವಕನೋರ್ವ ತನಗೆ ಕಚ್ಚಿದ ಹಾವನ್ನು ಕಲ್ಲಿನಿಂದ ಜಜ್ಜಿ ಕೊಂದು ಅದನ್ನು ಇಲ್ಲಿನ ಕೆಎಂಸಿಆರ್‌ಐ ಆಸ್ಪತ್ರೆಗೆ ತಂದ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಇಂಗಳಗಿ ಗ್ರಾಮದ ಫಕ್ಕೀರಪ್ಪ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಕೂಡಲೇ ಆತ ಆ ಹಾವನ್ನು ಅಲ್ಲೇ ಕಲ್ಲಿನಿಂದ ಜಜ್ಜಿ ಕೊಂದಿದ್ದಾನೆ. ಬಳಿಕ ಅದೇ ಹಾವನ್ನು ಹಿಡಿದುಕೊಂಡು ತಂದೆಯೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದಾನೆ. ವೈದ್ಯರಿಗೆ ತನಗೆ ಇದೇ ಹಾವು ಕಚ್ಚಿದ್ದು, ಚಿಕಿತ್ಸೆ ನೀಡಿ ಎಂದು ತಿಳಿಸಿದ್ದಾನೆ. ಇದೀಗ ಯುವಕ ಚೇತರಿಸಿಕೊಳ್ಳುತ್ತಿದ್ದಾನೆ.
ಆದರೆ ಈತ ಹಾವನ್ನು ಹಿಡಿದು ತಂದಿರುವುದು ಆಸ್ಪತ್ರೆ ಸಿಬ್ಬಂದಿ ಹೌಹಾರುವಂತೆ ಮಾಡಿದೆ.