ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಇರಲ್ಲ! ನಿಮ್ ಏರಿಯಾ ಇದೆನಾ ಈಗಲೇ ಚೆಕ್ ಮಾಡಿ!

Published : Nov 29, 2026, 07:59 AM IST
Power Cut - June 08

ಸಾರಾಂಶ

ರಾಜಾಜಿನಗರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ನಡೆಯುತ್ತಿರುವುದರಿಂದ ನವೆಂಬರ್ 30ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತವಾಗಲಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಪಟ್ಟಣಗೆರೆ, ಉತ್ತರಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.

ಬೆಂಗಳೂರು (ನ.29): ರಾಜಾಜಿನಗರದ ನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ, ನವೆಂಬರ್ 30ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಾಹಿತಿ ನೀಡಿದೆ.

ಬೆಸ್ಕಾಂ ಪ್ರಕಟಣೆಯ ಪ್ರಕಾರ, ನವೆಂಬರ್ 30ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ವಿದ್ಯುತ್ ಇರುವುದಿಲ್ಲ:

ಯಾವ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ

ಪಟ್ಟಣಗೆರೆ, ಕೃಷ್ಣ ಗಾರ್ಡನ್, ಬಿ.ಹೆಚ್.ಇ.ಎಲ್ ಲೇಔಟ್, ಭೂಮಿಕಾ ಲೇಔಟ್, ಬಿ.ಇ.ಎಂ.ಎಲ್ 1ನೇ, 2 ಮತ್ತು 10ನೇ ಹಂತ, ಮೈಲಸಂದ್ರ, ಉತ್ತರಹಳ್ಳಿ ಮುಖ್ಯ ರಸ್ತೆ, ಕಾನ್‌ಕಾರ್ಡ್ ಲೇಔಟ್, ಓಂಕಾರ ನಗರ, ಕೋಡಿಪಾಳ್ಯ, ಕೋನಸಂದ್ರ, ಹೆಮ್ಮಿಗೆಪುರ, ಚೆಟ್ಟಿಪಾಳ್ಯ, ಚೂಡೇನಪುರ, ಕಾಟನಾಯಕನಪುರ, ಬಿಜಿಎಸ್ ಆಸ್ಪತ್ರೆ, ಗಾಣಕಲ್ಲು, ಶ್ರೀನಿವಾಸಪುರ ಕಾಲೋನಿ, ಎಂ.ಎಲ್. ಲೇಔಟ್, ಬಿಡಿಎ ಲೇಔಟ್, ಸಚ್ಚಿದಾನಂದನಗರ, ಒಲಂಪಸ್ ಆಸ್ಪತ್ರೆ, ಹಲಗೆ ವಡೇರಹಳ್ಳಿ, ದ್ವಾರಕಾನಗರ, ಐಡಿಯಲ್ ಹೋಮ್ಸ್, ಸ್ವಾಮಿ ವಿವೇಕಾನಂದ ರಸ್ತೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ತುರ್ತು ನಿರ್ವಹಣಾ ಕೆಲಸವನ್ನು ಸುಗಮವಾಗಿ ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ. ಈ ಅವಧಿಯಲ್ಲಿ ಆಸ್ಪತ್ರೆಗಳು, ವ್ಯಾಪಾರ ಮಳಿಗೆಗಳು ಮತ್ತು ನಿವಾಸಿಗಳು ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಉತ್ತಮ.

PREV
Read more Articles on
click me!

Recommended Stories

ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಭೂಮಿ ಕೊಟ್ಟಿಲ್ಲ: ಹೆಚ್‌ಡಿಕೆ
'ನಾವೆಲ್ಲ ಹಿಂದೂ' ಎಂದ ವಿಜಯೇಂದ್ರ; ವೇದಿಕೆ ಮೇಲೆ ನುಗ್ಗಿ ಆಕ್ರೋಶ ಹೊರಹಾಕಿದ ಹೋರಾಟಗಾರರು