
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಫೆ.18): ತಮ್ಮ ವೃದ್ಧ ಪೋಷಕರನ್ನು ಹಣ-ಆಸ್ತಿಗೆ ಜಗಳ ಮಾಡಿಕೊಂಡುಬೀದಿಗೆ ತಳ್ಳುವ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸುವುದಾಗಿ ರಾಜಧಾನಿ ಬೆಂಗಳೂರಿನ ಪೊಲೀಸರ ಎಚ್ಚರಿಕೆ ಬೆನ್ನಲ್ಲೇ ವೃದ್ಧಾಶ್ರಮಗಳಲ್ಲಿ ಇರುವ ಹಿರಿಯ ಜೀವಗಳ ಬದುಕಿಗೆ ಹೊಸ ಬೆಳಕು ಮೂಡಿದೆ.
ಈಗ ಪೊಲೀಸರ ಪ್ರಯತ್ನದ ಫಲವಾಗಿ ತಮ್ಮ ಗೂಡಿಗೆ ಇಬ್ಬರು ವೃದ್ಧರು ಮರಳಿದ್ದು, ಇದೇ ರೀತಿ ಮತ್ತಷ್ಟು ವೃದ್ಧರು ಪರರ ಆಸರೆ ತೊರೆದು ಸ್ವಂತ ನೆಲೆಗೆ ಸಾಗುವ ನಿರೀಕ್ಷೆಯಲ್ಲಿದ್ದಾರೆ. ಆ್ಯಸಿಡ್ ಸಂತ್ರಸ್ತೆಯರ ಮಕ್ಕಳ ಸಂಪೂರ್ಣ ಶಿಕ್ಷಣ ಜವಾಬ್ದಾರಿ ಹೊತ್ತ ಬಳಿಕ ತಮ್ಮ ಬಳಗದಿಂದಲೇ ಅನಾಥರಾಗುವ ಹಿರಿಯ ಜೀವಗಳ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ.
ಇನ್ಮುಂದೆ ತಂದೆ-ತಾಯಿ ನಿರ್ಲಕ್ಷಿಸಿದರೆ ಮಕ್ಕಳ ಮೇಲೆ ಕ್ರಿಮಿನಲ್ ಕೇಸ್..!
ಕೊತ್ತನೂರು ಸಮೀಪದ ದೊಡ್ಡಗುಬ್ಬಿ ಗ್ರಾಮದ ಆನಂದಪ್ಪ (67) ಹಾಗೂ ವಿದ್ಯಾರಣ್ಯಪುರ ಹತ್ತಿರದ ವಡೇರಹಳ್ಳಿಯ ಶಂಕರ್ (70) ಮನೆಗೆ ಮರಳಿದವರು. ಈ ಇಬ್ಬರು ಯಲಹಂಕದ ಕೊಗಿಲು ಬಳಿಯ 'ಕರ್ನಾಟಕ ಸ್ನೇಹ ಜೀವಿ ಟ್ರಸ್ಟ್' ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ಗೂಡು ಸೇರಿದ ಬಳಿಕವು ಆ ವೃದ್ಧರ ಕಾಳಜಿ ಬಗ್ಗೆ ಪೊಲೀಸರು ನಿಗಾವಹಿಸಿದ್ದಾರೆ.
ಹೊಸ ವರ್ಷಾಚರಣೆಯನ್ನು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಾರ್ಥಕ ವಾಗಿಸಲು ಯೋಜಿಸಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ಹೊಸ ವರ್ಷದ ಸಂಭ್ರಮವನ್ನು ನೊಂದವರೊಂದಿಗೆ ಕಳೆಯುವಂತೆ ಪೊಲೀಸರಿಗೆ ಸೂಚಿಸಿದರು.
ಅಂತೆಯೇ ವೃದ್ಧಾಶ್ರಮಗಳು, ನಿರಾಶ್ರಿತರ ಮತ್ತು ಅಸಹಾಯಕ ಮಕ್ಕಳ ಪಾಲನಾ ಕೇಂದ್ರಗಳು ಹಾಗೂ ಅನಾಥಾಲಯಗಳಲ್ಲಿ ವರ್ಷದ ಮೊದಲ ದಿನವನ್ನು ಕಳೆದು ಸಂಕಷ್ಟದ್ದದಲ್ಲಿವರ ನೋವಿಗೆ ಪೊಲೀಸರು ದನಿಯಾದರು.
ಸಲುವಾಗಿ ತಂದೆ-ತಾಯಿಯನ್ನು ಮಾಡುವ ಮಕ್ಕಳಿಗೆ ಕಾನೂನಿನ ಮೂಲಕ ಪೊಲೀಸರು ಸಾಮಾಜಿಕ ಹೊಣೆಗಾರಿಕೆ ತೋರಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ಹಾಸ್ಟೆಲ್, ವೃದ್ಧಾಶ್ರಮ ಸ್ಥಾಪನೆಗೆ ಮುಂದಾದ ಬಿಬಿಎಂಪಿ
ಏನಿದು ಕಾನೂನು?
ತಮ್ಮ ಕುಟುಂಬಗಳಿಂದಲೇ ವೃದ್ಧಾಪ್ಯ ದಲ್ಲಿ ನಿರ್ಗತಿಕರಾಗುವ ಹಿರಿಯರ ರಕ್ಷಣೆಗೆ 2007ರಲ್ಲಿ ಪೋಷಕರ ಕಲ್ಯಾಣ ಮತ್ತು ಹಿರಿಯನಾಗರಿಕರ ಕಾಯ್ದೆಯನ್ನು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯಡಿಪೋಷಕರನ್ನು ಬೀದಿಗೆ ತಳ್ಳುವ ಮಕ್ಕಳ ಮೇಲೆ ಪೊಲೀಸರುಕ್ರಿಮಿನಲ್ ಪ್ರಕರಣ ದಾಖಲಿಸಬಹುದು. ಅಲ್ಲದೆ ಹೆತ್ತವರನ್ನು ಸಾಕುವ ಹೊಣೆಗಾರಿಕೆ ಹೊರದೆ ಹೋದರೂ ಅವರ ಪೋಷಣೆಗೆ ಮಕ್ಕಳುಪರಿಹಾರ ನೀಡಬೇಕಾಗುತ್ತದೆ. ಇದಕ್ಕಾಗಿ ಉಪವಿಭಾಗಾಧಿಕಾರಿ (ಎಸಿ) ಕೋರ್ಟ್‌ನಲ್ಲಿ ಪ್ರತ್ಯೇಕಪ್ರಕರಣದಾಖಲಿಸಬಹುದು. ಈಕಾಯ್ದೆ ಬಗ್ಗೆ ಹಿರಿಯನಾಗರಿಕರಲ್ಲಿ ಪೊಲೀಸರು ಅರಿವು ಮೂಡಿಸಿದ್ದಾರೆ.
ಮಕ್ಕಳಿಗೆ ಪೋಷಕರನ್ನು ಸಾಕುವ ಜವಾಬ್ದಾರಿ
ತಂದೆ-ತಾಯಿ ಸಂಪಾಸಿದ ಆಸ್ತಿಗೆ ಹೇಗೆ ಮಕ್ಕಳು ಹೊಣೆಗಾರರೋ ಹಾಗೆಯೇ ಪೋಷಕರನ್ನು ಸಾಕುವ ಜವಾಬ್ದಾರಿ ಸಹ ಅವರಿಗಿದೆ. ಹೀಗಾಗಿ ಪೋಷಕರನ್ನು ಬೀದಿಗೆ ತಳ್ಳುವ ಮಕ್ಕಳ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.