ಸೊಳ್ಳೆ ಬತ್ತಿಯಿಂದ ಹೊತ್ತಿದ ಬೆಂಕಿಯಿಂದ ಗಾಯಗೊಂಡು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಸೇರಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ವೃದ್ಧ
ದಾವಣಗೆರೆ(ಫೆ.18): ಸೊಳ್ಳೆ ಓಡಿಸಲು ಹಚ್ಚಿದ್ದ ಸೊಳ್ಳೆ ಬತ್ತಿ ಹೊತ್ತಿದ ಬೆಂಕಿಯಿಂದ ವೃದ್ಧರೊಬ್ಬರು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದಲ್ಲಿ ನಡೆದಿದೆ. ಎ.ಮಲ್ಲಪ್ಪ (85) ಎಂಬುವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಸೊಳ್ಳೆ ಬತ್ತಿಯಿಂದ ಹೊತ್ತಿದ ಬೆಂಕಿಯಿಂದ ಗಾಯಗೊಂಡು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಸೇರಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಸಾವನ್ನಪ್ಪಿದ್ದಾರೆ. ಫೆ.10ರ ಶನಿವಾರ ರಾತ್ರಿ ಎಂದಿನಂತೆ ರಾತ್ರಿ ಮಲಗುವಾಗ ಸೊಳ್ಳೆ ಓಡಿಸಲೆಂದು ಸೊಳ್ಳೆ ಬತ್ತಿಕೊಂಡು ಮಲಗಿದ್ದರು. ಹಚ್ಚಿದ್ದ ಸೊಳ್ಳೆ ಬತ್ತಿಯಿಂದ ಮಧ್ಯರಾತ್ರಿ ಆಕಸ್ಮಿಕ ಬೆಂಕಿ ತಾಗಿ ಬಟ್ಟೆಗೆ ಹತ್ತಿಕೊಂಡು ಹೊತ್ತಿ ಉರಿದಿದೆ.
ಉಚಿತ ಯೋಜನೆಗಳಿಗೆ ಮಾರು ಹೋಗಿ ಕಾಂಗ್ರೆಸ್‌ಗೆ ಮತ ಹಾಕದಿರಿ: ಚಕ್ರವರ್ತಿ ಸೂಲಿಬೆಲೆ
ಕುಟುಂಬಸ್ಥರೆಲ್ಲಾ ಸೇರಿ ಬೆಂಕಿ ನಂದಿಸುವಷ್ಟರಲ್ಲಿ ತೀವ್ರ ಸುಟ್ಟ ಗಾಯಗಳಿಂದ ಮಲ್ಲಪ್ಪ ಜರ್ಜರಿತಾಗಿದ್ದರು. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ನಿನ್ನೆ ಸಂಜೆ ನಿಧನರಾಗಿದ್ದಾರೆ. ಈ ಸಂಬಂಧ ದಾವಣಗೆರೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.