* ಭ್ರಷ್ಟಾಚಾರ ನಿರ್ಮೂಲನೆ ಸಪ್ತಾಹ
* ಪ್ರತಿಜ್ಞಾ ವಿಧಿ ಬೋಧಿಸಿದ ಕಮಲ್ ಪಂತ್
* ಭ್ರಷ್ಟಾಚಾರದ ವಿರುದ್ಧದ ಹೋರಾಟ ಬೆಂಬಲಿಸಬೇಕು ಎಂಬುದನ್ನು ಅರಿತಿದ್ದೇವೆ
ಬೆಂಗಳೂರು(ಅ.27): ಭ್ರಷ್ಟಾಚಾರ(Corruption) ನಿರ್ಮೂಲನೆ ಕುರಿತ ಅರಿವು ಸಪ್ತಾಹದ ಹಿನ್ನೆಲೆಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧನಾಗಿ ಭ್ರಷ್ಟಾಚಾರದ ವಿರುದ್ಧದ ಹೋರಾಟ ಬೆಂಬಲಿಸುವುದಾಗಿ ನಗರ(Bengaluru) ಪೊಲೀಸರು ಪ್ರತಿಜ್ಞೆ ಮಾಡಿದ್ದಾರೆ.
ನಗರ ಪೊಲೀಸ್(Police)ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಅರಿವು ಸಪ್ತಾಹದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪೊಲೀಸ್ ಅಧಿಕಾರಿಗಳಿಗೆ ಪ್ರತಿಜ್ಞೆ ಬೋಧಿಸಿದರು. ದೇಶದ ಆರ್ಥಿಕ(Economic), ರಾಜಕೀಯ(Politics) ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರವು ಒಂದು ಪ್ರಮುಖ ಅಡಚಣೆಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ, ನಾಗರಿಕರು ಹಾಗೂ ಖಾಸಗಿ ವಲಯದ ಎಲ್ಲ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು. ಪ್ರತಿ ನಾಗರಿಕರನು ಜಾಗರೂಕನಾಗಿದ್ದು, ಎಲ್ಲ ಸಮಯದಲ್ಲೂ ಉನ್ನತ ಗುಣಮಟ್ಟದ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧನಾಗಿರಬೇಕು ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಬೆಂಬಲಿಸಬೇಕು ಎಂಬುದನ್ನು ಅರಿತಿದ್ದೇನೆ ಎಂದು ಪೊಲೀಸರು ಪ್ರತಿಜ್ಞೆ(Pledge) ಮಾಡಿದರು.
undefined
ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ವೇಳೆ ಪೇದೆಗೆ ಕಾರಲ್ಲಿ ಗುದ್ದಿದ ಕುಡುಕ..!
ಜೀವನ ಎಲ್ಲ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ. ಲಂಚವನ್ನು ಪಡೆಯುವುದಿಲ್ಲ ಹಾಗೂ ನೀಡುವುದಿಲ್ಲ. ಎಲ್ಲ ಕಾರ್ಯಗಳನ್ನು ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತೇನೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ. ವೈಯಕ್ತಿಕ ನಡವಳಿಕೆಯಲ್ಲಿ ನಿಷ್ಠೆ ಪ್ರದರ್ಶಿಸುವ ಮೂಲಕ ಮಾದರಿಯಾಗಿರುತ್ತೇನೆ. ಯಾವುದೇ ಭ್ರಷ್ಟಾಚಾರದ ಘಟನೆಯನ್ನು ಸೂಕ್ತ ಸಂಸ್ಥೆಗೆ ವರದಿ ಮಾಡುವುದಾಗಿ ನಗರ ಪೊಲೀಸರು ಪ್ರತಿಜ್ಞೆಗೈದರು.