ಬೀದ‌ರ್, ಮಂಗ್ಳೂರು ದರೋಡೆ ಬೆನ್ನಲ್ಲೇ ಬೆಂಗ್ಳೂರು ಪೊಲೀಸರು ಹೈಅಲರ್ಟ್: ಕಮಿಷನ‌ರ್ ತಡರಾತ್ರಿ ಗಸ್ತು

Published : Jan 19, 2025, 10:00 AM IST
ಬೀದ‌ರ್, ಮಂಗ್ಳೂರು ದರೋಡೆ ಬೆನ್ನಲ್ಲೇ ಬೆಂಗ್ಳೂರು ಪೊಲೀಸರು ಹೈಅಲರ್ಟ್: ಕಮಿಷನ‌ರ್ ತಡರಾತ್ರಿ ಗಸ್ತು

ಸಾರಾಂಶ

ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್ ನೇತೃತ್ವದಲ್ಲಿ ಶನಿವಾರ ಮಧ್ಯರಾತ್ರಿ 1 ಗಂಟೆಯಿಂದ ನಸುಕಿನ 4 ಗಂಟೆವರೆಗೆ ಗಸ್ತು ಕಾರ್ಯ ನಡೆದಿದ್ದು, ಹೆಚ್ಚುವರಿ ಆಯುಕ್ತರಾದ ವಿಕಾಸ್‌ ಕುಮಾರ್‌ ವಿಕಾಸ್, ಚಂದ್ರಗುಪ್ತ, ಜಂಟಿ ಆಯುಕ್ತರಾದ ಬಿ.ರಮೇಶ್, ಎಂ.ಎನ್.ಅನುಚೇತ್ ಸೇರಿ ಎಲ್ಲ ಡಿಸಿಪಿಗಳು ಪಾಲ್ಗೊಂಡಿದ್ದರು. ಪ್ರತಿ ಅಧಿಕಾರಿಗಳು ಪ್ರತ್ಯೇಕವಾಗಿ ಒಂದು ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಪಹರೆ ನಡೆಸಿದ್ದಾರೆ. 

ಬೆಂಗಳೂರು(ಜ.19): ಬೀದರ್‌ನಲ್ಲಿ ಎಟಿಎಂ ಹಣ ಲೂಟಿ ಹಾಗೂ ಮಂಗಳೂರಿನ ಬ್ಯಾಂಕ್ ದರೋಡೆ ಘಟನೆಗ ಬೆನ್ನಲ್ಲೇ ಖಾಕಿ ಪಡೆ ಎಚ್ಚೆತ್ತುಕೊಂಡಿದ್ದು, ರಾಜಧಾನಿಯಲ್ಲಿರುವ ಜನರಲ್ಲಿ ಭಯ ಹೋಗಲಾಡಿಸಿ ನಗರದಲ್ಲಿ ಸುರಕ್ಷತೆ ಸಂದೇಶ ಸಾರುವ ಸಲುವಾಗಿ ಪೊಲೀಸ್ ಆಯುಕ್ತರು ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಶನಿವಾರ ರಾತ್ರಿ ವಿಶೇಷ ಗಸ್ತು ನಡೆಸಿದ್ದಾರೆ. 

ನಗರದ ಪೊಲೀಸ್‌ ಆಯುಕ್ತ ಬಿ.ದಯಾನಂದ್ ನೇತೃತ್ವದಲ್ಲಿ ಶನಿವಾರ ಮಧ್ಯರಾತ್ರಿ 1 ಗಂಟೆಯಿಂದ ನಸುಕಿನ 4 ಗಂಟೆವರೆಗೆ ಗಸ್ತು ಕಾರ್ಯ ನಡೆದಿದ್ದು, ಹೆಚ್ಚುವರಿ ಆಯುಕ್ತರಾದ ವಿಕಾಸ್‌ ಕುಮಾರ್‌ ವಿಕಾಸ್, ಚಂದ್ರಗುಪ್ತ, ಜಂಟಿ ಆಯುಕ್ತರಾದ ಬಿ.ರಮೇಶ್, ಎಂ.ಎನ್.ಅನುಚೇತ್ ಸೇರಿ ಎಲ್ಲ ಡಿಸಿಪಿಗಳು ಪಾಲ್ಗೊಂಡಿದ್ದರು. ಪ್ರತಿ ಅಧಿಕಾರಿಗಳು ಪ್ರತ್ಯೇಕವಾಗಿ ಒಂದು ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಪಹರೆ ನಡೆಸಿದ್ದಾರೆ. 

ಉಳ್ಳಾಲ: ದರೋಡೆ ಆದ ಬ್ಯಾಂಕ್‌ಗೆ ಮುಗಿಬಿದ್ದ ಗ್ರಾಹಕರು, ಚಿನ್ನ ವಾಪಸ್‌ ಕೊಡುವಂತೆ ಗ್ರಾಹಕರ ಒತ್ತಡ!

ಯಾರು ಎಲ್ಲಿ ಗಸ್ತು ?: 

ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಕಮೀಷನರ್‌ದಯಾನಂದ್, ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಆಯುಕ್ತ ಡಾ. ಚಂದ್ರಗುಪ್ತ, ಅಶೋಕ ನಗರ ಠಾಣಾ ಸರಹದ್ದಿನಲ್ಲಿ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್‌ವಿಕಾಸ್, ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ ಜಂಟಿ ಆಯುಕ್ತ ಅನುಚೇತ್, ಅಮೃತಹಳ್ಳಿಯಲ್ಲಿ ರಮೇಶ್, ಬಾಣಸವಾಡಿಯಲ್ಲಿ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್, ಹಲಸೂರು ಗೇಟ್‌ನಲ್ಲಿ ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್, ಬಸವೇಶ್ವರ ನಗರ ಠಾಣೆ ವ್ಯಾಪ್ತಿಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್, ಪೀಣ್ಯ ಠಾಣೆ ಸರಹದ್ದಿನಲ್ಲಿ ಉತ್ತರ ವಿಭಾಗದ ಡಿಸಿಪಿ ಸೈದುಲ ಅಡಾವತ್, ಹುಳಿಮಾವು ಠಾಣೆ ಭಾಗದಲ್ಲಿ ಆಗೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಹಾಗೂ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಉತ್ತರ ವಿಭಾಗದ(ಸಂಚಾರ) ಡಿಸಿಪಿಸಿರಿಗೌರಿಅವರು ಜ.19ರ ರಾತ್ರಿ 1 ಗಂಟೆಯಿಂದ ಗಸ್ತು ನಡೆಸಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಹಿನ್ನೆಲೆಯಲ್ಲಿ ಬಿ.ದಯಾನಂದ್ ಅವರು ಈ ವಿಶೇಷ ಗಸ್ತು ಹಮ್ಮಿಕೊಂಡಿದ್ದಾರೆ ಎನ್ನಲಾಗಿದೆ. 

ಬೀದರ್‌ ಹಣ ಲೂಟಿ ಹಿಂದೆ ಬಿಹಾರದ ಅಮಿತ್‌ ಗ್ಯಾಂಗ್‌?

ಗಣ್ಯರ ಏರಿಯಾದಲ್ಲಿ ಸುತ್ತಾಟ: 

ಜನರ ಜತೆ ಚರ್ಚೆ ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಜಿ.ಪರಮೇಶ್ವರ, ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಅತೀ ಹೆಚ್ಚು ಗಣ್ಯರು ಇರುವ ಸದಾಶಿವನಗರ, ಡಾಲರ್ಸ್ ಕಾಲೋನಿಗಳಲ್ಲಿ ನಗರ ಪೊಲೀಸರು ಶನಿವಾರ ರಾತ್ರಿ ಗಸ್ತು ನಡೆಸಿದರು. ಈ ವೇಳೆ ರಸ್ತೆಯಲ್ಲಿ ಭೇಟಿಯಾದ ಜನರ ಜತೆಗೆ ಮಾತುಕತೆ ನಡೆಸಿದ ಪೊಲೀಸರು ಭದ್ರತೆ ಕುರಿತು ಚರ್ಚಿಸಿದರು. ಅಲ್ಲದೇ, ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿದರು. ನಗರ ಪೊಲೀಸ್‌ ಆಯುಕ್ತ ದಯಾನಂದ್ ಅವರು ತಾವೇ ವಾಹನ ಚಾಲನೆ ಮಾಡಿದ್ದು ವಿಶೇಷವಾಗಿತ್ತು.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ