ಬೆಂಗಳೂರು ಕಮಿಷನರ್ ಕಪ್‌ ಗೆದ್ದ ಪೊಲೀಸ್ ವಾರಿಯರ್ಸ್, ರನ್ನರ್ ಅಪ್ ಆದ ಕ್ರೈಂ ರಿಪೋಟರ್ಸ್

By Sathish Kumar KHFirst Published Dec 10, 2023, 9:15 PM IST
Highlights

ಬೆಂಗಳೂರು ಪೊಲೀಸ್ ಕಮಿಷನರ್ ಕ್ರಿಕೆಟ್ ಟೂರ್ನಿಮೆಂಟ್ ಪಂದ್ಯಾವಳಿಯನ್ನು ಎಸಿಪಿ ಮನೋಜ್ ನೇತೃತ್ವದ 'ಪೊಲೀಸ್ ವಾರಿಯರ್ಸ್' ತಂಡ ವಿಜಯ ಶಾಲಿಯಾಗಿದೆ.

ವರದಿ- ಕಿರಣ್.ಕೆ.ಎನ್., ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಡಿ.10): ಕಳೆದ ಎರಡು ದಿನಗಳಿಂದ ನಡೆದ ಬೆಂಗಳೂರು ಪೊಲೀಸ್ ಕಮಿಷನರ್ ಕ್ರಿಕೆಟ್ ಟೂರ್ನಿಮೆಂಟ್ ಪಂದ್ಯಾವಳಿಯನ್ನು ಎಸಿಪಿ ಮನೋಜ್ ನೇತೃತ್ವದ 'ಪೊಲೀಸ್ ವಾರಿಯರ್ಸ್' ತಂಡ ವಿಜಯ ಶಾಲಿಯಾಗಿದೆ.

Latest Videos

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಪೊಲೀಸ್ ಹಾಗೂ ಮಾಧ್ಯಮದವರ ನಡುವೆ ಫ್ರೆಂಡ್ ಶಿಪ್ ಪಂದ್ಯಾವಳಿಯನ್ನು  ಆಯೋಜಿಸಲಾಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಪರಾಧ ವರದಿಗಾರರು ಹಾಗೂ ಪೊಲೀಸ್ ಸಿಬ್ಬಂದಿಗಳಿಗಾಗಿ ಬೆಂಗಳೂರು ನಗರ ಪೊಲೀಸರು ಆಯೋಜಿಸಿದ್ದ 'ಕಮಿಷನರ್ ಆಫ್ ಪೊಲೀಸ್ ಕಪ್ 2023' ಕ್ರಿಕೆಟ್ ಟೂರ್ನಿಮೆಂಟ್‌ನ ಫೈನಲ್ ಪಂದ್ಯ ವೀಕ್ಷಿಸಿದ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು, ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಶುಭಕೋರಿದರು. ದಿನನಿತ್ಯ ಬಿಡುವಿಲ್ಲದೆ ಕರ್ತವ್ಯದಲ್ಲಿ ತೊಡಗಿರುವ ಇಲಾಖೆಯ ಸಿಬ್ಬಂದಿಗಳು ಹಾಗೂ ಮಾಧ್ಯಮಮಿತ್ರರಿಗಾಗಿ ಕ್ರಿಕೆಟ್ ಪಂದ್ಯ ಆಯೋಜಿಸಿರುವ ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಅವರಿಗೆ ಅಭಿನಂದನೆ ತಿಳಿಸಿದರು.

ಮಂಡ್ಯದಲ್ಲಿಯೂ'ಹಳ್ಳಿಕಾರ್ ಒಡೆಯ'ನಾದ ವರ್ತೂರು ಸಂತೋಷ್ : ದೇಸಿ ತಳಿ ಉಳಿಸೋಕೆ ಬಿಡಿ ಎಂದ್ರು ರೈತರು!

ಶನಿವಾರ ಪಂದ್ಯಾವಳಿಯನ್ನು ಕಮಿಷನರ್ ದಯಾನಂದ್ ಉದ್ಘಾಟನೆ ಮಾಡಿದ್ರು‌.ಇದರಲ್ಲಿ ಐಪಿಎಸ್ ಟೀಮ್ ,ಪೊಲೀಸ್ ಟೀಮ್ ,ಕ್ರೈಂ ರಿಪೋಟರ್ ಗಳ ಎರಡು ತಂಡಗಳು ಹಾಗೂ ನ್ಯಾಷನಲ್ ಮಿಡಿಯಾ ಒಂದು ತಂಡ ಭಾಗವಹಿಸಿತ್ತು. ಇಂದು ಸಂಜೆ ಎರಡು ದಿನಗಳ ಕಮಿಷನರ್ ಕಪ್ ಕ್ರಿಕೆಟ್ ಪಂದ್ಯ ಮುಗಿಯಿತು..ಈ  ಪಂದ್ಯ ವೀಕ್ಷಿಸಿದ ರಾಜ್ಯದ ಗೃಹ ಸಚಿವ ಪರಮೇಶ್ವರ್ ಅವರು ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಪಂದ್ಯಾವಳಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ನ ಕ್ರೈಂ ವಿಭಾಗದ ಚೀಫ್‌ ರವಿಕುಮಾರ್, ರಮೇಶ್, ಚೇತನ್, ಕಿರಣ್ ಹರೀಶ್, ಮಂಜುನಾಥ್ ಭಾಗಿಯಾಗಿದ್ದರು. ಇದರಲ್ಲಿ ಕ್ರೈಂ ರಿಪೋಟರ್ ಜ್ಯೂನಿಯರ್ ಟೀಮ್ ನಲ್ಲಿ ನಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಜುನಾಥ್ ಗೆ ಒಂದು ಪಂದ್ಯದಲ್ಲಿ 87 ರನ್ ಸಿಡಿಸಿದಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಎಸಿಪಿ ಮನೋಜ್ ನೇತೃತ್ವದ ಪೊಲೀಸ್ ವಾರಿಯರ್ಸ್ ತಂಡ ಉತ್ತಮ ಪ್ರದರ್ಶನ ನೀಡಿ ವಿಜಯ ಶಾಲಿಯಾದರು. ಕ್ರೈಂ ರಿಪೋಟರ್ ಜ್ಯೂನಿಯರ್ ತಂಡ ಫೈನಲ್ ನಲ್ಲಿ ರನ್ನರ್‌ ಅಪ್ ಪ್ರಶಸ್ತಿಗೆ ಭಾಜನರಾದರು. ಹಲವು ಐಪಿಎಸ್ ಅಧಿಕಾರಿಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು. ಸ್ಟೇಡಿಯಂನ ಗ್ರೌಂಡ್‌ಮೆನ್‌ ಹಾಗೂ ಆಟದ ತೀರ್ಪುಗಾರರಿಗೆ 20 ಸಾವಿರ ರೂ. ಪ್ರೋತ್ಸಾಹಧನ ವಿತರಿಸಿದರು. 

ಅರ್ಜುನ ಆನೆಗೆ ಗುಂಡು ಬಿತ್ತಾ.? ಸಾವಿನ ವಿವಾದಕ್ಕೆ ಸ್ಪಷ್ಟನೆ ಕೊಟ್ಟ ವೈದ್ಯ ರಮೇಶ್!

ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ.2ರಷ್ಟು ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ನೀಡಲಾಗುತ್ತಿದೆ. ಇಲಾಖೆಯಲ್ಲಿನ ಕ್ರೀಡಾಪಟು ಸಿಬ್ಬಂದಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು. ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ಗಳಿಗೆ ಕಳುಹಿಸಲಾಗುವುದು. ಇದಕ್ಕಾಗಿ ಎಲ್ಲ ರೀತಿಯ ಉತ್ತೇಜನ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

click me!