ಪೊಲೀಸರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಶಾಮೀಲಾದರೆ ಹುಷಾರ್; ಚೀಫ್ ಕಮಿಷನರ್ ಹಿತೇಂದ್ರ ವಾರ್ನಿಂಗ್!

Sathish Kumar KH   | Kannada Prabha
Published : Nov 29, 2026, 09:23 AM IST
Bengaluru Police

ಸಾರಾಂಶ

ಜಮೀನು ವಿವಾದಗಳಲ್ಲಿ ಪೊಲೀಸರು ಅನವಶ್ಯಕವಾಗಿ ಮಧ್ಯಪ್ರವೇಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರಾದ ಆರ್.ಹಿತೇಂದ್ರ ಎಚ್ಚರಿಸಿದ್ದಾರೆ. ಜೊತೆಗೆ ರೌಡಿ ಚಟುವಟಿಕೆ, ಡ್ರಗ್ಸ್ ಮಾಫಿಯಾ ಮತ್ತು ಮಹಿಳಾ ಸುರಕ್ಷತೆ ಬಗ್ಗೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರು (ನ.29): ಜಮೀನು ವಿವಾದಗಳಲ್ಲಿ ಅನವಶ್ಯಕವಾಗಿ ಮಧ್ಯ ಪ್ರವೇಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರದ ಮುಖ್ಯ ಪೊಲೀಸ್ ಆಯುಕ್ತರಾದ ಆರ್.ಹಿತೇಂದ್ರ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಮುಖ್ಯ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ ಹೊರ ಭಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಾಗಿ ನಡೆಯುತ್ತಿದ್ದು, ಇದರಲ್ಲಿ ಕೆಲವು ಅಧಿಕಾರಿ ಮತ್ತು ಸಿಬ್ಬಂದಿ ಶಾಮೀಲಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಮುಂದೆ ಇಂತಹ ವ್ಯವಹಾರಗಳಲ್ಲಿ ಯಾರಾದರೂ ವಿನಾಕಾರಣ ಮೂಗು ತೂರಿಸಿದರೆ ಅಂಥವರ ವಿರುದ್ಧ ಕಣ ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದ್ದಾರೆ.

ರೌಡಿ ಚಟುವಟಿಕೆಗಳು ನಡೆಯುತ್ತಿವೆ. ಅವುಗಳನ್ನು ಅಧಿಕಾರಿ ಮತ್ತು ಸಿಬ್ಬಂದಿ ಮಟ್ಟ ಹಾಕಬೇಕು. ಆಗಾಗ್ಗೆ ಅವರ ಚಲನವಲನಗಳ ಬಗ್ಗೆ ನಿಗಾ ವಹಿಸಬೇಕು. ಬೆಂಗಳೂರು ನಗರಕ್ಕೆ ಮಾದಕವಸ್ತುಗಳು ಹೆಚ್ಚು ಬರುತ್ತಿವೆ ಎಂದು ಬಹುತೇಕ ಜನ ಹೇಳುತ್ತಿದ್ದಾರೆ. ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವುದಲ್ಲದೇ ಅದರ ಮೂಲವನ್ನುಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಮಹಿಳೆಯರ ಸುರಕ್ಷತೆ ಬಹಳ ಮುಖ್ಯ, ಆದುದ್ದರಿಂದ ಸಾರ್ವಜನಿಕ ಸ್ಥಳಗಳು ಹಾಗೂ ಬಸ್ಸು, ರೈಲು ನಿಲ್ದಾಣ, ಮಹಿಳಾ ಪಿ.ಜಿ ಗಳ ಬಳಿ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಗಸ್ತಿನಲ್ಲಿ ನೇಮಿಸಿ ಸಂಕಷ್ಟಕ್ಕೊಳಗಾದ ಮಹಿಳೆಯರು ನಮ್ಮ 112 ಗೆ ಕರೆ ಮಾಡಿದ ತಕ್ಷಣ ಕೂಡಲೇ ಸ್ಪಂದಿಸಬೇಕು. ತಡಮಾಡದೆ ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳುತ್ತೇನೆ ಎಂದು ತಿಳಿಸಿದ್ದಾರೆ.

ಈ ಸಭೆಯಲ್ಲಿ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಎಲ್ಲಾ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು.

ರೌಡಿಶೀಟರ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಿ 

ರೌಡಿಶೀಟರ್‌ಗಳನ್ನು ಬಂಧಿಸಿದ ಮಾತ್ರಕ್ಕೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಅವರ ಚಲನವಲನಗಳು ಮತ್ತು ಕಾರ್ಯಗಳು ಹಾಗೂ ಅವರ ಮೇಲಿನ ವಾರೆಂಟ್‌, ಇತರೆ ಕಾನೂನ್ಮಾತಕ ವಿಚಾರಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕು. ರೌಡಿಗಳು ಸಂಪೂರ್ಣವಾಗಿ ಪೊಲೀಸ್ ಇಲಾಖೆ ನಿಯಂತ್ರಣದಲ್ಲಿರಬೇಕು. ಏರಿಯಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮುಖ್ಯ ಪೊಲೀಸ್‌ ಆಯುಕ್ತ ಆರ್‌.ಹಿತೇಂದ್ರ ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರಿನ 191 ಸ್ಪಾ ಮತ್ತು ಮಸಾಜ್ ಕೇಂದ್ರಗಳ ಮೇಲೆ ಪೊಲೀಸರ ಬೃಹತ್ ದಾಳಿ; 16 ಕೇಂದ್ರಗಳಿಗೆ ನೋಟಿಸ್
ಸಿಎಂ ಡಿಕೆಶಿ ₹2000 ಹೆಚ್ಚಳ ಮಾತಿಗೆ ಬಗ್ಗದ ಆಶಾ ಕಾರ್ಯಕರ್ತೆಯರು; ಲಿಖಿತ ಆದೇಶಕ್ಕೆ ಪಟ್ಟು, 13ನೇ ದಿನಕ್ಕೆ ಧರಣಿ